- ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ । ಕಡೂರು ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ
ಕನ್ನಡಪ್ರಭ ವಾರ್ತೆ, ಬೀರೂರುಹೋಬಳಿಯ ಎಮ್ಮೆದೊಡ್ಡಿ ಪಂಚಾಯಿತಿ ಸಿದ್ದರಹಳ್ಳಿ ಬಳಿ ಚಿರತೆಯೊಂದು ದಾರಿಹೋಕರ ಮೇಲೆ ದಾಳಿ ಮಾಡಿ ಇಬ್ಬರನ್ನು ಗಾಯಗೊಳಿಸಿದ್ದು ಅವರನ್ನು ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ಬೆಳಿಗ್ಗೆ 7ಗಂಟೆ ಸುಮಾರಿಗೆ ಮದಗದಕೆರೆ ಮೇಲ್ಭಾಗದ ಸಣ್ಣ ಸಿದ್ದರಹಳ್ಳಿಯ ಮಂಜುನಾಥ ತಮ್ಮ ಮೊಮ್ಮಗ ನೊಡನೆ ಬೈಕ್‌ನಲ್ಲಿ ಕಡೂರು ಕಡೆಗೆ ಹೊರಟಿದ್ದಾಗ ರಸ್ತೆಯಲ್ಲಿ ಏಕಾಏಕಿ ದಾಳಿ ಮಾಡಿದ ಚಿರತೆ ಅವರ ಎಡ ಕಿಬ್ಬೊಟ್ಟೆ ಕಿತ್ತು ಗಾಯಗೊಳಿಸಿತ್ತು. ದೊಡ್ಡಸಿದ್ದರಹಳ್ಳಿಯ ಮೂರ್ತಪ್ಪ ಅವರು ಜಮೀನಿನ ಕಡೆ ಹೊರಟಾಗ ಅವರ ಮೇಲೂ ದಾಳಿ ಮಾಡಿದ ಚಿರತೆ ಅವರ ಎಡಗೈ ಕಿತ್ತು ಗಾಯಗೊಳಿಸಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಅವರನ್ನು ರಕ್ಷಿಸಲು ಕಲ್ಲು ಎಸೆದು ಕೂಗಾಡಿ ಚಿರತೆ ಬೆನ್ನಟ್ಟಿ ಅದನ್ನು ಗ್ರಾಮಕ್ಕೆ ಹೊಂದಿಕೊಂಡಿರುವ ಮೇಲ್ಭಾಗದ ಕಾಡಿಗೆ ಅಟ್ಟಿದ್ದರು.ಸ್ವಲ್ಪ ಸಮಯದಲ್ಲಿ ಕಡೂರು ಕಡೆಯಿಂದ ಮತ್ತೆ ಸಿದ್ದರಹಳ್ಳಿಯ ಮಂಜುನಾಥ ಗ್ರಾಮಕ್ಕೆ ವಾಪಸ್ ಬುರವಾಗ ಅವರ ಮೇಲೂ ದಾಳಿಗೆ ಯತ್ನಿಸಿದ ಚಿರತೆಯನ್ನು ನೂರಾರು ಗ್ರಾಮಸ್ಥರು ಸೇರಿ ಮತ್ತೆ ಓಡಿಸಿದರು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅರಣ್ಯಾಧಿ ಕಾರಿ ಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಬೇರೆಲ್ಲೋ ಹಿಡಿದ ಚಿರತೆಯನ್ನು ಇಲ್ಲಿ ತಂದು ಬಿಟ್ಟು ಜನರ ಪ್ರಾಣದ ಜತೆ ಚೆಲ್ಲಾಟವಾಡುತ್ತಿದ್ದೀರಿ, ಬೆಳಗಿನ ಘಟನೆ ಬಗ್ಗೆ ತಿಳಿದರೂ 3ಗಂಟೆ ತಡವಾಗಿ ಬಂದಿ ದ್ದೀರಾ ಎಂದು ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರು. ಕಡೂರು ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.ಎಮ್ಮೆದೊಡ್ಡಿ ಭಾಗದಲ್ಲಿ ಚಿರತೆ ಕಾಟವೇ ಇರಲಿಲ್ಲ. ಬುಧವಾರ ರಾತ್ರಿ ಅಪರಿಚಿತರು ಕ್ಯಾಂಟರ್ ನಲ್ಲಿ ಬೋನಿನಲ್ಲಿದ್ದ ಚಿರತೆ ಯನ್ನು ಬಿಟ್ಟು ಹೋಗಿರುವ ಶಂಕೆ ಇದ್ದು, ಈ ಅನಾಹುತಕ್ಕೆ ಕಾರಣವಾಗಿರಬಹುದು. ಇಂತಹ ಅನಾಹುತ ಸಾಮಾಜಿಕ ಜಾಲತಾಣ ದಲ್ಲಿ ಹರಿದಾಡಿದರು ಸಹ ಅರಣ್ಯ ಇಲಾಖೆ ಸ್ಪಂದಿಸದೇ, ತಡವಾಗಿ ಬಂದಿದ್ದಾರೆ. ಶಾಸಕರು ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಕಡೂರು ತಾಲೂಕು ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಆದರೆ, ಸಂಜೆ ವೇಳೆಗೆ ಮದಗದಕೆರೆ ದಡದಲ್ಲಿ ಚಿರತೆಯೊಂದರ ಮೃತದೇಹ ಪತ್ತೆಯಾಗಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕೆರೆ ದಡದಲ್ಲಿ ಸಿಕ್ಕಿರೋ ಚಿರತೆ ಜನ ಕಲ್ಲಿನಿಂದ ಹೊಡೆದಿರೋ ಚಿರತೆಯೋ ಅಥವ ಇದು ಬೇರೆ ಚಿರತೆಯೋ ಎಂಬ ಸಂಶಯ ಉಂಟಾಗಿದೆ. ಚಿರತೆಯ ಮೃತದೇಹವನ್ನ ಮರಣೋತ್ತರ ಪರೀಕ್ಷೆ ಕಳೂಹಿಸಿದ್ದು ಪರೀಕ್ಷೆ ಬಳಿಕ ಚಿರತೆ ಕೆರೆಯಲ್ಲಿ ಬಿದ್ದು ಸತ್ತಿರೋದ, ಕಲ್ಲಿನಿಂದ ಹೊಡೆದ ಚಿರತೆಯೋ ಅಥವಾ ಬೇರೆ ಕಡೆ ಸಾಯಿಸಿ ತಂದು ಎಸೆದಿರೋದ ಎಂಬುದು ಸ್ಪಷ್ಟವಾಗಲಿದೆ.--ಕೋಟ್--ಚಿರತೆ ದಾಳಿ ಬಗ್ಗೆ ಮಾಹಿತಿ ಪಡೆದು ತಕ್ಷಣವೇ ಕಡೂರು ಅರಣ್ಯ ಇಲಾಖೆ ಅಧಿಕಾರಿಗೆ ಸೂಚಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲು ಸೂಚಿಸಿದ್ದೇನೆ. ಚಿರತೆ ಹಿಡಿಯಲು ಬೋನು ಮತ್ತಿತರ ವ್ಯವಸ್ಥೆ ಮಾಡಲಾಗಿದೆ. ಬೇರೆಲ್ಲೋ ಹಿಡಿದ ಚಿರತೆಯನ್ನು ಇಲ್ಲಿ ತಂದು ಬಿಟ್ಟಿದ್ದಾರೆ ಎಂಬ ವದಂತಿ ಸುಳ್ಳು, ಹಾಗಿದ್ದರೆ ಅದು ನಮ್ಮ ಇಲಾಖೆ ಗಮನಕ್ಕೆ ಬರುತ್ತಿತ್ತು. ಜೊತೆಗೆ ಮದಗದ ಕೆರೆ ಯಲ್ಲಿ ಸತ್ತ ಚಿರತೆ ಮೃತ ದೇಹ ದೊರೆತಿದ್ದು ಅದನ್ನು ಪರೀಕ್ಷೆಗೆ ಕಳುಹಿಸಿ ಅದು ಯಾವ ಕಾರಣಕ್ಕೆ ಮೃತ ಪಟ್ಟಿದೆ ಎಂಬ ಬಗ್ಗೆ ವರದಿ ತರಿಸಿಕೊಳ್ಳುತ್ತೇನೆ. ಇಂತಹ ಪ್ರಕರಣ ನಡೆಯದ ಹಾಗೆ ಎಚ್ಚರ ವಹಿಸುತ್ತೇವೆ.
- ರಮೇಶ್ ಬಾಬು ಡಿಸಿಎಫ್, ಚಿಕ್ಕಮಗಳೂರು.31 ಬೀರೂರು 1
ಬೀರೂರು ಹೋಬಳಿಯ ಎಮ್ಮೆದೊಡ್ಡಿ ಬಳಿ ದೊಡ್ಡಸಿದ್ದರಹಳ್ಳಿಯ ಮೂರ್ತಪ್ಪ ಅವರ ಎಡಗೈಯನ್ನು ಗುರುವಾರ ಚಿರತೆ ಕಿತ್ತು ಗಾಯಗೊಳಿಸಿರುವುದು.31 ಬೀರೂರು 2ಎಮ್ಮೆದೊಡ್ಡಿ ಬಳಿ ಗುರುವಾರ ಗ್ರಾಮಸ್ಥರ ಮೇಲೆ ದಾಳಿ ಮಾಡಿದ ಚಿರತೆ. 31 ಬೀರೂರು 3ಮದಕೆರೆಯ ಬಳಿ ಸತ್ತುಬಿದ್ದಿರುವ ಚಿರತೆ