ಕನ್ನಡಪ್ರಭ ವಾರ್ತೆ ಆಳಂದ
ಗ್ರಾಮದ ಪಿರಪ್ಪಾ ಜಮಾದಾರ ಎಂಬುವರು ತಮ್ಮ ಹೊಲದಲ್ಲಿ ಕಟ್ಟಿದ ಹೋರಿಯ ಮೇಲೆ ರಾತ್ರಿ ಅಪರಿತ ಪ್ರಾಣಿ ದಾಳಿ ಕೈಗೊಂಡು ಅರೆಬರೆ ತಿಂದುಹಾಕಿ ಕಾಲ್ಕಿತ್ತಿದೆ. ಇದರಿಂದ ನೆರೆ ಹೊರೆಯ ರೈತರು ತಮ್ಮ ಭಯ ಭೀತಿಯಲ್ಲಿ ಕಾಲ ಕಳೆಯುವಂತಾಗಿದ್ದು, ಅಲ್ಲದೆ ತಮ್ಮ ದನ ಕರುಗಳ ರಕ್ಷಣೆಗಾಗಿ ಪರದಾಡುವಂತೆ ಮಾಡಿದೆ.
ಈಗಾಗಲೇ ಸರಣಿಯಾಗಿ ಆರು ದನಗಳು ತಿಂದುಹಾಕಿದ್ದು, ಗುರುವಾರ ಮತ್ತು ಶುಕ್ರವಾರದ ಮಧ್ಯದ ರಾತ್ರಿಯಲ್ಲಿ ಅಪರಿಚಿತ ಪ್ರಾಣಿ ನಡೆಸಿದ ದಾಳಿಯಿಂದಾಗಿ ರೈತ ಪಿರಪ್ಪಾ ಜಮಾದಾರಗೆ ಸೇರಿದ ಮೂರು ವರ್ಷದ ಹೋರಿ ಬಲಿಯಾಗಿದ್ದು, ಇದರಿಂದಾಗಿ ನಮ್ಮ ದನಗಳು ತಿಂದುಹಾಕಿದರೆ ಏನು ಗತಿ ಎಂಬ ರೈತರಲ್ಲಿ ಶಂಕೆವ್ಯಕ್ತವಾಗಿ ಭಯದ ವಾತಾವರಣ ನಿರ್ಮಾಣವಾಗಿದೆ.ಸಂಬಂಧಿತ ಪ್ರಾದೇಶಿಕ ಅರಣ್ಯ ಇಲಾಖೆಯ ಆರ್‌ಎಫ್‍ಒ ಜಗನಾಥ ಕೋರಳ್ಳಿ ಅವರು ಈ ಹಿಂದೆ ತಿಂದುಹಾಕಿದ ದನಗಳ ಮಾಂಸ ಸೇರಿ ಅವಶೇಷಗಳನ್ನು ಪರೀಕ್ಷಾರ್ಥವಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಪರೀಕ್ಷೆಯಲ್ಲಿ ಚಿರತೆಯ ದಾಳಿಯೆಂದು ಶೇ.60ರಷ್ಟು ಪ್ರಾಥಮಿಕವಾಗಿ ಶಂಕಿಸಲಾಗಿದೆ ಎಂದು ಗೊತ್ತಾಗಿದೆ.
ಅಲ್ಲದೆ, ಅಪರಿಚಿತ ಪ್ರಾಣಿ ಪತ್ತೆಯಾಗುವ ತನಕ ತಮ್ಮ ಜಾನುವಾರುಗಳನ್ನು ರೈತರು ಸೂಕ್ತ ಮತ್ತು ಸುರಕ್ಷಿತ ಸ್ಥಳಗಳಲ್ಲಿ ಕಟ್ಟಬೇಕು ಎಂದು ಅಧಿಕಾರಿ ಜಗನಾಥ ಕೊರಳ್ಳಿ ಅವರು ಮನವಿ ಮಾಡಿದ್ದಾರೆ.