ಹೊಲದಲ್ಲಿ ರೈತನ ಮೇಲೆ ಚಿರತೆ ದಾಳಿ

KannadaprabhaNewsNetwork |  
Published : Aug 12, 2024, 01:02 AM ISTUpdated : Aug 12, 2024, 01:03 AM IST
11ಎಚ್ಎಸ್ಎನ್18 : ಹೊಳೆನರಸೀಪುರ ತಾ. ಕೆರಗೋಡು ಗೋಪನಹಳ್ಳಿಯಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ನವೀನ್ ಎಂಬ ರೈತನ ಮೇಲೆ ಚಿರತೆ ದಾಳಿ ನಡೆಸಿ, ಗಾಯಗೊಳಿಸಿದೆ.   | Kannada Prabha

ಸಾರಾಂಶ

ಹೊಳೆನರಸೀಪುರ ತಾಲೂಕಿನ ಕೆರಗೋಡು ಗೋಪನಹಳ್ಳಿಯಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ನವೀನ್ ಎಂಬ ರೈತನ ಮೇಲೆ ಚಿರತೆ ದಾಳಿ ನಡೆಸಿ, ಗಾಯಗೊಳಿಸಿದೆ. ಹಳ್ಳಿಮೈಸೂರು ಹೋಬಳಿಯ ಕೆರಗೋಡು ಗೋಪನಹಳ್ಳಿಯ ಜಯಣ್ಣ ಎಂಬುವರ ಪುತ್ರ ನವೀನ್ ಜಮೀನಿನಲ್ಲಿ ಎಂದಿನಂತೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಸಂಜೆ ೫.೧೫ರ ಸುಮಾರಿನಲ್ಲಿ ಚಿರತೆ ದಾಳಿ ನಡೆಸಿದೆ. ಕೈಯಲ್ಲಿ ಕುಡುಗೋಲು ಹಿಡಿದು ಕೆಲಸ ಮಾಡುತ್ತಿದ್ದ ನವೀನ ಧೈರ್ಯವಾಗಿ ಕುಡುಗೋಲಿನಿಂದ ಪ್ರತಿದಾಳಿ ನಡೆಸುವ ಸಂದರ್ಭದಲ್ಲಿ ನವೀನರ ಕಾಲಿನ ಮೇಲೆ ದಾಳಿ ನಡೆಸಿ, ಗಾಯಗೊಳಿಸಿದೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರತಾಲೂಕಿನ ಕೆರಗೋಡು ಗೋಪನಹಳ್ಳಿಯಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ನವೀನ್(೨೪) ಎಂಬ ರೈತನ ಮೇಲೆ ಚಿರತೆ ದಾಳಿ ನಡೆಸಿ, ಗಾಯಗೊಳಿಸಿದೆ.

ತಾಲೂಕು ಹಳ್ಳಿಮೈಸೂರು ಹೋಬಳಿಯ ಕೆರಗೋಡು ಗೋಪನಹಳ್ಳಿಯ ಜಯಣ್ಣ ಎಂಬುವರ ಪುತ್ರ ನವೀನ್ ಜಮೀನಿನಲ್ಲಿ ಎಂದಿನಂತೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಸಂಜೆ ೫.೧೫ರ ಸುಮಾರಿನಲ್ಲಿ ಚಿರತೆ ದಾಳಿ ನಡೆಸಿದೆ. ಕೈಯಲ್ಲಿ ಕುಡುಗೋಲು ಹಿಡಿದು ಕೆಲಸ ಮಾಡುತ್ತಿದ್ದ ನವೀನ ಧೈರ್ಯವಾಗಿ ಕುಡುಗೋಲಿನಿಂದ ಪ್ರತಿದಾಳಿ ನಡೆಸುವ ಸಂದರ್ಭದಲ್ಲಿ ನವೀನರ ಕಾಲಿನ ಮೇಲೆ ದಾಳಿ ನಡೆಸಿ, ಗಾಯಗೊಳಿಸಿದೆ. ಆಗ ಜೋರಾಗಿ ಕೂಗಿಕೊಳ್ಳತ್ತಿದ್ದ ನವೀನನ ಸಹಾಯಕ್ಕೆ ಅಕ್ಕಪಕ್ಕದ ರೈತರು ಆಗಮಿಸಿದಾಗ ಚಿರತೆ ಓಡಿ ಹೋಗಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಾಯಾಳಿಗೆ ಪ್ರಥಮ ಚಿಕಿತ್ಸೆ ನೀಡಿ ಒಳರೋಗಿಯಾಗಿ ವೈದ್ಯರು ದಾಖಲಿಸಿಕೊಂಡಿದ್ದಾರೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ಆಗಮಿಸಿ ಮಾಹಿತಿ ಪೆಡೆದು ತೆರಳಿದ್ದಾರೆ.ತಾಲೂಕಿನ ಬಾಚನಹಳ್ಳಿಯ ಕಬ್ಬಿನ ಗದ್ದೆಯಲ್ಲಿ ನಾಲ್ಕು ಚಿರತೆ ಮರಿಗಳನ್ನು ಕಂಡ ರೈತರು ಆತಂಕಗೊಂಡಿದ್ದು, ಜಮೀನಿಗೆ ತೆರಳಲು ಭಯಭೀತರಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ನಂತರ ವಲಯ ಅರಣ್ಯಾಧಿಕಾರಿ ದಿಲೀಪ್ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ರೈತರು ಜಮೀನಿನ ಬಳಿ ಜೋರಾಗಿ ಗಲಾಟೆ ಮಾಡಿರುವ ಕಾರಣ ಬಿರತೆ ಭಯಗೊಂಡು ಪ್ರತಿ ನಡೆಸುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಸ್ಥಳದಲ್ಲಿ ಇಲಾಖೆ ಸಿಬ್ಬಂದಿಗಳು ಇದ್ದು, ಯಾವುದೇ ಘಟನೆ ನಡೆಯದಂತೆ ಜಾಗ್ರತೆ ವಹಿಸಿದ್ದಾರೆ ಮತ್ತು ಬೋನ್ ಇಟ್ಟು ಚಿರತೆ ಸೆರೆಗೆ ಅಗತ್ಯ ಕ್ರಮಕೈಗೊಳ್ಳುತ್ತೇವೆ ಎಂದು ವಲಯ ಅರಣ್ಯಾಧಿಕಾರಿ ದಿಲೀಪ್ ತಿಳಿಸಿದ್ದಾರೆ.

ಫೋಟೊ ೩ : ಹೊಳೆನರಸೀಪುರ ತಾಲೂಕಿನ ಬಾಚನಹಳ್ಳಿಯ ಕಬ್ಬಿನ ಗದ್ದೆಯಲ್ಲಿ ನಾಲ್ಕು ಚಿರತೆ ಮರಿಗಳನ್ನು ಕಂಡ ರೈತರು ಆತಂಕಗೊಂಡಿದ್ದಾರೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ