ಮಾಸಡಿ ಗ್ರಾಮ ಬಳಿ ಚಿರತೆ ಸೆರೆ: ಆತಂಕ ಶಮನ

KannadaprabhaNewsNetwork |  
Published : Aug 21, 2024, 12:38 AM IST
ಹೊನ್ನಾಳಿ ಫೋಟೋ 20ಎಚ್.ಎಲ್.ಐ3, ತಾಲೂಕಿನ ಮಾಸಡಿ, ಆರಕರೆ ಪ್ರದೇಶದ ವ್ಯಾಪ್ತಿಯಲ್ಲಿ ಆರಣ್ಯ ಇಲಾಖೆ ಇಟ್ಟಿದ್ದ  ಭೋವಿಗೆ ಚಿರತೆ ಸೆರೆಯಾಗಿದ್ದು ಗ್ರಾಮಸ್ಥರಲ್ಲಿ ಮೂಡಿದ ಆತಂಕ ದೂರವಾಗಿದೆ.  | Kannada Prabha

ಸಾರಾಂಶ

ಹೊನ್ನಾಳಿ ತಾಲೂಕಿನ ಮಾಸಡಿ, ಅರಕರೆ ಸೇರಿದಂತೆ ಕೆಲ ಗ್ರಾಮಗಳ ಸರಹದ್ದಿನಲ್ಲಿ ಆತಂಕ ಮೂಡಿಸಿದ್ದ ಚಿರತೆ ಮಂಗಳವಾರ ಬೆಳಗಿನ ಜಾವ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಬಿದ್ದಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ನಿವಾರಣೆಯಾಗಿದೆ.

ಹೊನ್ನಾಳಿ: ತಾಲೂಕಿನ ಮಾಸಡಿ, ಅರಕರೆ ಸೇರಿದಂತೆ ಕೆಲ ಗ್ರಾಮಗಳ ಸರಹದ್ದಿನಲ್ಲಿ ಆತಂಕ ಮೂಡಿಸಿದ್ದ ಚಿರತೆ ಮಂಗಳವಾರ ಬೆಳಗಿನ ಜಾವ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಬಿದ್ದಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ನಿವಾರಣೆಯಾಗಿದೆ.

3 ದಿನಗಳ ಹಿಂದೆ ಕರುವನ್ನು ಚಿರತೆ ಬಲಿ ತೆಗೆದುಕೊಂಡಿತ್ತು. ಗ್ರಾಮಸ್ಥರು ಅರಣ್ಯ ಇಲಾಖೆ ಹಾಗೂ ಸ್ಥಳೀಯ ಶಾಸಕರ ಗಮನಕ್ಕೆ ತಂದಿದ್ದರು. ಕೂಡಲೇ ಚಿರತೆಯನ್ನು ಸೆರೆಹಿಡಿಯುವಂತೆ ಮನವಿ ಮಾಡಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಈ ಭಾಗಗಳಲ್ಲಿ ಚಿರತೆ ನಡೆದಾಡಿದ ಹೆಜ್ಜೆ ಗುರುತಿನ ಆಧಾರದ ಮೇಲೆ ಬೋನು ಅಳವಡಿಸಿ, ಸೆರೆಹಿಡಿಯಲು ವ್ಯವಸ್ಥೆ ಮಾಡಿದ್ದರು. ಚಿರತೆ ಪತ್ತೆಗೂ ಕಾರ್ಯಾಚರಣೆ ನಡೆಸಲಾಗಿತ್ತು. ಕಡೆಗೂ ಚಿರತೆ ಬೋನಿಗೆ ಬಿದ್ದಿದೆ. ಸೆರೆಯಾದ ಚಿರತೆಯನ್ನು ಆನಗೋಡು ಪ್ರಾಣಿ ಸಂರಕ್ಷಣಾಲಯಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ದಾವಣಗೆರೆ ವಲಯ, ಮಲೇಬೆನ್ನೂರು ವಲಯ, ಅರಕರೆ ಗಸ್ತು ಸಿಬ್ಬಂದಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ದಾವಗೆರೆ ಅರಣ್ಯ ಇಲಾಖೆ ಅಧಿಕಾರಿ ರತ್ನಾಕರ್, ಉಪವಲಯ ಅರಣ್ಯಾಧಿಕಾರಿ ಹಸನ್ ಬಾಷಾ, ಉಪ ಅರಣ್ಯಾಧಿಕಾರಿ ಶಶಿಧರ್, ಸಹಾಯಕ ಉಪಅರಣ್ಯ ಸಂರಕ್ಷಣಾಧಿಕಾರಿ ಭಾಗ್ಯಲಕ್ಷ್ಮೀ, ಅರಣ್ಯ ಪಾಲಕ ಸದನ್, ಮುಂತಾದವರು ಭಾಗವಹಿಸಿದ್ದರು ಎಂದು ಇಲಾಖೆ ತಿಳಿಸಿದೆ.

- - -

-20ಎಚ್.ಎಲ್.ಐ3:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವರ್ತಮಾನದೆಡೆಗೆ ಸಂಶೋಧನಾಸಕ್ತಿ ಕೇಂದ್ರಿತವಾಗಲಿ: ಡಾ. ಗಿರೀಶ ಕುಮಾರ
ಆಹಾರ ಸುರಕ್ಷತೆ: 9 ಪ್ರಕರಣಗಳಲ್ಲಿ ₹1.30 ಲಕ್ಷ ದಂಡ