ಕನ್ನಡಪ್ರಭ ವಾರ್ತೆ ಹನೂರು
ಹನೂರು ತಾಲೂಕಿನ ಮಲೆ ಮಾದೇಶ್ವರ ಬೆಟ್ಟಕ್ಕೆ ಸಂಪ್ರದಾಯದಂತೆ ಪಾದಯಾತ್ರೆಯಲ್ಲಿ ತೆರಳುವ ಭಕ್ತಾದಿಗಳಿಗೆ ಇದುವರೆಗೂ ಪ್ರಾಣಿಗಳಿಂದ ಯಾವುದೇ ಘಟನೆಗಳು ಸಂಭವಿಸಲಿಲ್ಲ. ಆದರೆ ಇತ್ತೀಚೆಗೆ ಕ್ರೂರ ಪ್ರಾಣಿಗಳು ಹೆಚ್ಚಾದ ಹಿನ್ನೆಲೆಯಲ್ಲಿ ತಾಳು ಬೆಟ್ಟದಿಂದ ಮಲೆ ಮಾದೇಶ್ವರ ಬೆಟ್ಟದವರೆಗೆ ಪಾದಯಾತ್ರೆಗಳ ಮೇಲೆ ಚಿರತೆ ದಾಳಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.
ಪಾದಯಾತ್ರೆಗಳ ಸುರಕ್ಷತೆಗೆ ಬೋನ್:ಮಲೆ ಮಾದೇಶ್ವರ ಬೆಟ್ಟಕ್ಕೆ ಮಹಾಶಿವರಾತ್ರಿ ಹಬ್ಬಕ್ಕೆ ಅಪಾರ ಸಂಖ್ಯಾ ಭಕ್ತಾದಿಗಳು ಕಾಲುನಡಿಗೆಯಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ತಾಳ ಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದವರೆಗೆ ಚಿರತೆ ಕಾಟ ಸುರಕ್ಷತೆಗಾಗಿ ಪೊಲೀಸರು ಹಾಗೂ ಅರಣ್ಯ ಅಧಿಕಾರಿಗಳು ಭದ್ರತೆ ದೃಷ್ಟಿಯಿಂದ ಎರಡು ಕಡೆ ಬೋನ್ ಇಡುವ ಮೂಲಕ ಚಿರತೆ ಸೆರಗಾಗಿ ಬಲೆ ಬೀಸಿದ್ದಾರೆ. ಆದರೆ ಚಿರತೆ ಬಲಗೆ ಬೀಳದೆ ಮತ್ತೊಂದೆಡೆ ಭಕ್ತರಿಗೆ ಕಾಣಿಸಿಕೊಳ್ಳುತ್ತಿರುವುದರಿಂದ ಅರಣ್ಯ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ಬರುವ ಭಕ್ತಾದಿಗಳಿಗೆ ಸುರಕ್ಷತಾ ದೃಷ್ಟಿಯಿಂದ ಚಿರತೆ ಪದೇಪದೇ ಕಾಣಿಸಿಕೊಳ್ಳುತ್ತಿರುವುದರಿಂದ ಅರಣ್ಯ ಇಲಾಖೆ ಡ್ರೋನ್ ಕ್ಯಾಮೆರಾ ಮೂಲಕ ಚಿರತೆ ಚಲನವಲವನ್ನು ಪತ್ತೆ ಹಚ್ಚಲು ಶ್ರಮಿಸುತ್ತಿದ್ದು, ಪಾದಯಾತ್ರಿಗಳು ಸಹ ಗುಂಪಾಗಿ ಮಾದಪ್ಪನ ಬೆಟ್ಟಕ್ಕೆ ತೆರಳಬೇಕು. ಅರಣ್ಯ ಪ್ರದೇಶಕ್ಕೆ ಹೋಗಬಾರದು ಸುರಕ್ಷತಾ ದೃಷ್ಟಿಯಿಂದ ತಮ್ಮ ಕುಟುಂಬದವರ ಜೊತೆ ಸಣ್ಣ ಮಕ್ಕಳನ್ನು ಜೋಪಾನವಾಗಿ ಕರೆದೊಯ್ಯುವಂತೆ ಮನವಿ ಮಾಡಿದ್ದಾರೆ.
ಮಹಾಲಿಂಗನಕಟ್ಟೆ ಮೇಕೆ ಕೊಂದ
ಕಳೆದ ಎರಡು ದಿನಗಳ ಹಿಂದೆ ಮಹಾಲಿಂಗನ ಕಟ್ಟೆ ತೋಟದ ಮನೆಯಲ್ಲಿ ಎರಡು ಮೇಕೆಗಳನ್ನು ಚಿರತೆ ಕೊಂದು ತಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತರ ಒತ್ತಾಯದ ಮೇರೆಗೆ ಅರಣ್ಯ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯಲು ಬೋನ್ ಅಳವಡಿಸಿದ್ದಾರೆ. ಕಾರ್ಯಚರಣೆಗೆ ಇಟಿಎಫ್ ಸಿಬ್ಬಂದಿ ಅರಣ್ಯ ಇಲಾಖೆ ಸಿಬ್ಬಂದಿಗಳು ನೇಮಕಗೊಂಡಿದ್ದಾರೆ.
ಮಲೆ ಮಹದೇಶ್ವರ ಬೆಟ್ಟ ಸೇರಿದಂತೆ ಗಂಗನ ದೊಡ್ಡಿ, ಬಸಪ್ಪನ ದೊಡ್ಡಿ ಹಾಗೂ ಲೋಕ್ಕನಹಳ್ಳಿ ಭಾಗದ ಚಿಕ್ಕರಂಗ ಶೆಟ್ಟಿ ದೊಡ್ಡಿ ಸೇರಿದಂತೆ ಮಹಾಲಿಂಗನಕಟ್ಟೆ ವಿವಿಧಡೆ ಚಿರತೆಗಳ ಉಪಟಳ ಹೆಚ್ಚಾಗಿದ್ದು, ಭಯಭೀತರಾಗಿರುವ ರೈತರು ಗ್ರಾಮಸ್ಥರು ಸಾಕುಪ್ರಾಣಿಗಳನ್ನೇ ಕೊಂದು ತಿನ್ನುತ್ತಿರುವ ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯ ಅಧಿಕಾರಿಗಳು ವಿಫಲ ಹೆಚ್ಚಾದ ಗಡಿ ಗ್ರಾಮಗಳಲ್ಲಿ ಆತಂಕ ಮುಂದಾದರು ಕ್ರೂರ ಪ್ರಾಣಿಗಳನ್ನು ನಾಡಿನತ್ತ ಬರದಂತೆ ತಡೆಯಲು ಅರಣ್ಯ ಅಧಿಕಾರಿಗಳು ಮುಂದಾಗಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸಿದೆ.