ನಾರ್ಯ ಮೂರು ಮಾರ್ಗದಲ್ಲಿ ಚಿರತೆ ಪ್ರತ್ಯಕ್ಷ

KannadaprabhaNewsNetwork | Updated : Oct 27 2023, 12:31 AM IST

ಸಾರಾಂಶ

ಬೆಳ್ತಂಗಡಿ ಸಮೀಪ ಚಿರತೆ ಪ್ರತ್ಯಕ್ಷ
ಬೆಳ್ತಂಗಡಿ: ಉಜಿರೆಯ ಸಮೀಪದ ಕನ್ಯಾಡಿ-2 ಗ್ರಾಮದ ನಾರ್ಯ ಮೂರು ಮಾರ್ಗ ಎಂಬಲ್ಲಿ ಬುಧವಾರ ರಾತ್ರಿ ಚಿರತೆ ಕಂಡು ಬಂದಿರುವ ಕುರಿತು ತಿಳಿದು ಬಂದಿದೆ. ರಾತ್ರಿ ಸಮಯ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಮೀಪದ ಪಾಣೇಲಿನ ವ್ಯಕ್ತಿಗೆ ಚಿರತೆ ಕಂಡು ಬಂದಿದೆ ಎಂದು ಹೇಳಲಾಗುತ್ತಿದ್ದು, ಚಿರತೆಯ ಚಿತ್ರ ಸೆರೆಹಿಡಿದಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಾರ್ಯ ಪರಿಸರದಲ್ಲಿ ಹಲವು ಮನೆಗಳು ಇದ್ದು ಇಲ್ಲಿನ ಮಂದಿ ಚಿರತೆ ಓಡಾಟದಿಂದ ಭೀತರಾಗಿದ್ದಾರೆ. ಈ ಭಾಗದಲ್ಲಿ ಧರ್ಮಸ್ಥಳ ಮೀಸಲು ಅರಣ್ಯ ಹಾಗೂ ಬೆಳಾಲು ವ್ಯಾಪ್ತಿಯ ದಡಂತಮಲೆ ಅರಣ್ಯ ಪ್ರದೇಶ ಇದ್ದು ಸಾವಿರ ಎಕರೆಗೂ ಹೆಚ್ಚಿನ ಅರಣ್ಯವಿದೆ. ಆಗಾಗ ಚಿರತೆ ಓಡಾಟ ಇರುವ ಸಾಧ್ಯತೆಯೂ ಇದೆ, ಬುಧವಾರ ರಾತ್ರಿಯ ವಿಚಾರ ಖಚಿತಗೊಂಡಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Share this article