ಹುಬ್ಬಳ್ಳಿ: ವಿಜಯದಶಮಿ ನಿಮಿತ್ತ ಹುಬ್ಬಳ್ಳಿ ಮಹಾನಗರದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗಣವೇಷಧಾರಿಗಳಿಂದ ಅ.28 ರಂದು ಮಧ್ಯಾಹ್ನ 2.30 ಗಂಟೆಗೆ ಇಲ್ಲಿನ ನೆಹರು ಮೈದಾನದಿಂದ ಪಥಸಂಚಲನ ಹಮ್ಮಿಕೊಳ್ಳಲಾಗಿದೆ. ನಗರದಲ್ಲಿ ಒಟ್ಟು ಎರಡು ಗಣವೇಷಧಾರಿಗಳ ತಂಡಗಳಿಂದ ಪಥಸಂಚಲನ ನಡೆಯಲಿದೆ.ಒಂದು ತಂಡವು ನೆಹರು ಮೈದಾನ, ಕೃಷ್ಣ ಭವನ, ಕಂಬಳಿ ಮಾರ್ಗ, ಸಂಗೊಳ್ಳಿ ರಾಯಣ್ಣ ವೃತ್ತ, ದಾಜಿಬಾನ ಪೇಟೆ, ಶ್ರೀ ತುಳಜಾಭವಾನಿ ವೃತ್ತ, ಪೆಂಡಾರ ಗಲ್ಲಿ, ಶ್ರೀ ಶಂಕರ ಮಠ, ಕಂಚಗಾರ ಗಲ್ಲಿ, ಹಿರೆಪೇಟೆ, ಸರಾಫ್ ಗಟ್ಟಿ ವೃತ್ತ, ಜವಳಿ ಸಾಲ, ಬೆಳಗಾವಿ ಗಲ್ಲಿ, ದುರ್ಗದ ಬೈಲ್ ವೃತ್ತಕ್ಕೆ ಆಗಮಿಸಲಿದೆ. ಮತ್ತೊಂದು ಗಣವೇಷಧಾರಿಗಳ ತಂಡವು ನೆಹರು ಮೈದಾನ, ಟೌನ್ ಹಾಲ್, ಜೆ.ಸಿ.ನಗರ, ಶಕ್ತಿ ರಸ್ತೆ, ಸ್ಟೇಶನ್ ರಸ್ತೆ, ಗಣೇಶ ಪೇಟೆ ವೃತ್ತ, ಸಿ.ಬಿ.ಟಿ, ಮಕಾನದಾರ ಗಲ್ಲಿ, ಮಂಗಳವಾರ ಪೇಟೆ, ಇಟಗಿ ಮಾರುತಿ ಗಲ್ಲಿ, ರಾಧಾಕೃಷ್ಣ ಗಲ್ಲಿ, ದುರ್ಗದ ಬೈಲ್ ವೃತ್ತದ ವರೆಗೆ ಸಂಚರಿಸಲಿದೆ. ನಂತರ ಅಲ್ಲಿ ಎರಡೂ ತಂಡಗಳು ಸಂಗಮಗೊಂಡು ಒಟ್ಟಿಗೆ ಬ್ರಾಡವೇ, ಶಿವಾಜಿ ವೃತ್ತ, ಕೊಪ್ಪಿಕರ ರಸ್ತೆ, ಕೃಷ್ಣ ಭವನ ಮಾರ್ಗವಾಗಿ ನೆಹರು ಮೈದಾನದ ಆಗಮಿಸಲಿದೆ. ಸಂಜೆ 5.15ಗಂಟೆಗೆ ನೆಹರು ಮೈದಾನದಲ್ಲಿ ಸಾರ್ವಜನಿಕ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ದಿವ್ಯಾಂಗ ಚೇತನ ಕ್ರೀಡಾಪಟುಗಳ ರಾಷ್ಟ್ರೀಯ ತರಬೇತುದಾರ ಶಿವಾನಂದ ಗುಂಜಾಲ, ಆರ್‌ಎಸ್‌ಎಸ್‌ನ ಪ್ರಾಂತ ಸಂಪರ್ಕ ಪ್ರಮುಖ ಸುಧೀರಸಿಂಗ್ ಘೋರ್ಪಡೆ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಆರ್‌ಎಸ್‌ಎಸ್‌ನ ಮಹಾನಗರ ಸಂಘಚಾಲಕ ಶಿವಾನಂದ ಆವಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.