ಕನ್ನಡಪ್ರಭ ವಾರ್ತೆ ಹನೂರು
ಭಯಭೀತರಾದ ಬೋರೆ ಮಾಳ ರೈತರು:
ಅರಣ್ಯದಂಚಿನ ತೋಟದ ಮನೆಗಳಲ್ಲಿ ವಾಸಿಸುವ ರೈತರು ಭಯಭೀತರಾಗಿದ್ದು, ಕಳೆದ ವಾರ ಎರಡು ನಾಯಿಗಳನ್ನು ಕೊಂದಿರುವ ಚಿರತೆ ಮತ್ತೆ ಭಾನುವಾರ ರಾತ್ರಿ ತೋಟದ ಮನೆಗಳಲ್ಲಿ ಮುಂಭಾಗ ಓಡಾಡಿರುವ ಹೆಜ್ಜೆ ಗುರುತಿನಿಂದ ಭಯಭೀತರಾಗಿರುವ ರೈತಾಪಿ ವರ್ಗದವರು ಹಾಗೂ ಎಲೆಮಾಳ ರಸ್ತೆಯಲ್ಲಿ ನೂರಾರು ವಾಹನಸವಾರರು ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿ ಬರುವ ಪ್ರಮುಖ ಮಾರ್ಗವಾಗಿದ್ದು ಮಲೆ ಮಹದೇಶ್ವರ ವನ್ಯ ಧಾಮ ಅರಣ್ಯ ಪ್ರದೇಶದ ಮಧ್ಯಭಾಗದಲ್ಲಿ ಹಾದುಹೋಗಿರುವ ರಸ್ತೆ ಆಗಿರುವುದರಿಂದ ಈ ಭಾಗದಲ್ಲಿ ಚಿರತೆ ಓಡಾಡುತ್ತಿರುವುದು ತೋಟದ ಮನೆಗಳಲ್ಲಿ ವಾಸಿಸುವ ರೈತರಿಗೆ ನಿದ್ದೆ ಕೆಡಿಸಿದೆ. ಹೀಗಾಗಿ ಕ್ರೂರ ಪ್ರಾಣಿ ಆಗಿರುವುದರಿಂದ ರೈತರ ಹಾಗೂ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳುವ ದ್ವಿಚಕ್ರ ವಾಹನದಲ್ಲಿ ಹೆಚ್ಚಾಗಿ ಬರುವ ಭಕ್ತರ ಮೇಲೆ ಚಿರತೆ ದಾಳಿ ಮಾಡಿದರೆ ಏನು ಮಾಡುವುದು ಎಂದು ಈ ಭಾಗದ ರೈತರ ಆತಂಕವಾಗಿದೆ. ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಪರಿಶೀಲಿಸಿ ಈ ಭಾಗದಲ್ಲಿ ಓಡಾಡುತ್ತಿರುವ ಚಿರತೆಯನ್ನು ಸೆರೆ ಹಿಡಿದು ಬೆರಡೆ ಬಿಡಲು ಪಂಜರವನ್ನು ಇಡಲು ಒತ್ತಾಯಿಸಿದ್ದಾರದಿನನಿತ್ಯ ಇಟಿಎಫ್ ಅರಣ್ಯ ಸಿಬ್ಬಂದಿ, ಮುಖ್ಯ ಸಿಬ್ಬಂದಿ ರಾತ್ರಿ ವೇಳೆ ಗಸ್ತು ನಡೆಸುತ್ತಿದ್ದಾರೆ. ಚಿರತೆ ಓಡಾಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ತೋಟದ ಮನೆಗಳಲ್ಲಿ ವಾಸಿಸುವ ರೈತರು ತಮ್ಮ ಜನ ಜಾನುವಾರುಗಳ ಬಗ್ಗೆ ಗಮನಹರಿಸಿ ಸುರಕ್ಷಿತ ಸ್ಥಳದಲ್ಲಿ ಜಾನುವಾರುಗಳನ್ನು ಕಟ್ಟಿ ಹಾಕಬೇಕು. ಮಕ್ಕಳ ಬಗ್ಗೆ ಎಚ್ಚರವಿರಲಿ. ಹೆಚ್ಚಿನ ಸಿಬ್ಬಂದಿ ಕಳುಹಿಸಿ ಈ ಭಾಗದಲ್ಲಿ ಗಸ್ತು ನಡೆಸಿ ಕ್ರಮ ಕೈಗೊಳ್ಳಲಾಗುವುದು.- ಪ್ರವೀಣ್, ವಲಯ ಅರಣ್ಯ ಅಧಿಕಾರಿ