ಕನ್ನಡಪ್ರಭ ವಾರ್ತೆ ಹನೂರುಜಿಆರ್ ನಗರ ಸುತ್ತಮುತ್ತ ಚಿರತೆ ಉಪಟಳ ಹೆಚ್ಚಾಗಿದ್ದರಿಂದ ಅರಣ್ಯ ಇಲಾಖೆ ಸೆರೆ ಹಿಡಿಯಲು ಪಂಜರ ಅಳವಡಿಕೆ ಮಾಡಿದೆ.
ಚಿರತೆ ಸೆರೆಗೆ ಬೋನ್ ಅಳವಡಿಕೆ:
ಕಳೆದ ಹಲವಾರು ತಿಂಗಳುಗಳಿಂದ ಮಲೆಮಾದೇಶ್ವರ ವನ್ಯಜೀವಿ ವಿಭಾಗದ ಗಂಗನ ದೊಡ್ಡಿ, ಬಸಪ್ಪನ ದೊಡ್ಡಿ ಸೇರಿದಂತೆ ವಿವಿಧ ಗ್ರಾಮಗಳ ಉಡುತೊರೆ ಹಳ್ಳ ಅಂಚಿನಲ್ಲಿ ಬರುವ ತೋಟದ ಮನೆಗಳಲ್ಲಿರುವ ಸಾಕು ಪ್ರಾಣಿಗಳನ್ನು ಚಿರತೆ ರಾತ್ರಿ ವೇಳೆ ದಾಳಿ ಮಾಡಿ ಕುರಿ ಕೋಳಿ ಮೇಕೆ ಮತ್ತು ನಾಯಿಗಳನ್ನು ಸಹ ತಿಂದಿರುವ ಘಟನೆಯ ಬೆನ್ನಲ್ಲೇ ಕಾವೇರಿ ವನ್ಯಧಾಮ ವಿಭಾಗದ ವ್ಯಾಪ್ತಿಗೆ ಒಳಪಡುವ ಜಿ ಆರ್ ನಗರ ಹಾಗೂ ದೊಮ್ಮನಗದ್ದೆ ಸುತ್ತಮುತ್ತಲಿನ ಉಡುತೊರೆ ಹಳ್ಳ ಹಂಚಿನಲ್ಲಿ ರೈತರ ಜಮೀನುಗಳಲ್ಲಿ ಸಾಕುಪ್ರಾಣಿಗಳನ್ನು ತಿನ್ನಲು ಹೊಂಚು ಹಾಕುತ್ತಿರುವ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಅಧಿಕಾರಿಗಳು ರೈತರ ಒತ್ತಾಯಕ್ಕೆ ಮಣಿದು ಬೋನ್ ಇಡಲಾಗಿದೆ.ಚಿರತೆ ಜಿ.ಆರ ನಗರದ ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿ ಓಡಾಡುತ್ತಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿಕೊಂಡು ಗ್ರಾಮದ ರೈತ ತವಮಣಿ ಜಮೀನಿನಲ್ಲಿ ಪಂಜರವನ್ನು ಅಳವಡಿಸಿ ಸಂಜೆ ವೇಳೆ ಸಾಕು ಪ್ರಾಣಿಗಳನ್ನು ಪಂಜರದೊಳಗೆ ಕಟ್ಟುವಂತೆ ರೈತರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ದಿನನಿತ್ಯ ನಿದ್ದೆಗೆಡಿಸಿರುವ ಚಿರತೆಯನ್ನು ಕೂಡಲೇ ಸೆರೆ ಹಿಡಿಯಲು ರೈತರು ಆಗ್ರಹ ಪಡಿಸಿದ ಹಿನ್ನೆಲೆಯಲ್ಲಿ ಒತ್ತಡಕ್ಕೆ ಮುನಿದು ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಇಡುವ ಮೂಲಕ ಕ್ರಮಕ್ಕೆ ಮುದ್ದಾಗಿದ್ದಾರೆ.
ಇತ್ತೀಚೆಗೆ ತಾಲೂಕಿನಲ್ಲಿ ರೈತರ ಜಮೀನುಗಳ ಫಸಲನ್ನು ಕಾಡು ಪ್ರಾಣಿಗಳು ತಿಂದು ನಾಶಪಡಿಸುತ್ತಿದೆ. ಹೀಗಾಗಿ ಮಲೆಮಾದೇಶ್ವರ ವನ್ಯಜೀವಿ ವಿಭಾಗ ಹಾಗೂ ಕಾವೇರಿ ವನ್ಯಧಾಮ ವ್ಯಾಪ್ತಿಗೆ ಒಳಪಡುವ ಅರಣ್ಯದಂಚಿನ ಭಾಗದಲ್ಲಿರುವ ರೈತರ ಜಮೀನುಗಳಿಗೆ ದಿನನಿತ್ಯ ಕಾಡುಪ್ರಾಣಿಗಳ ಲಗ್ಗೆ ಇಟ್ಟು ಫಸಲನ್ನು ನಾಶಗೊಳಿಸುತ್ತಿದೆ. ಮತ್ತೊಂದೆಡೆ ಕ್ರೂರ ಪ್ರಾಣಿ ಚಿರತೆ ಕಳೆದ ಹಲವು ತಿಂಗಳುಗಳಿಂದ ಬೊನ್‌ಗೆ ಬೀಳದೆ ಚಿರತೆ ಓಡಾಡುತ್ತಿದೆ. ರೈತರು ಎಚ್ಚರಿಕೆಯಿಂದ ಇರಬೇಕು, ಜೊತೆಗೆ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ಕೂಡಲೇ ಚಿರತೆ ಸೆರೆ ಹಿಡಿಯಲು ಸೂಕ್ತ ಕ್ರಮ ಕೈಗೊಳ್ಳಬೇಕು.ಅಮ್ಜದ್ ಖಾನ್, ರಾಜ್ಯ ರೈತ ಸಂಘ ತಾಲೂಕು ಅಧ್ಯಕ್ಷ, ಹನೂರು