ಹೈಟೆಕ್‌ ಮಾದರಿಯ ಅಂಬೇಡ್ಕರ್ ಭವನ ನಿರ್ಮಾಣವಾಗಲಿ

KannadaprabhaNewsNetwork |  
Published : Apr 15, 2025, 12:53 AM IST
ಕ್ಯಾಪ್ಷನ14ಕೆಡಿವಿಜಿ40 ದಾವಣಗೆರೆಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಪುಷ್ಪನಮನ ಸಲ್ಲಿಸಿದರು........ಕ್ಯಾಪ್ಷನ14ಕೆಡಿವಿಜಿ41 ದಾವಣಗೆರೆಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣದ ಕಾಮಗಾರಿಗೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಗುದ್ದಲಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

Let a high-tech Ambedkar Bhavan be built.

-ಸಮುದಾಯ ಭವನ ನಿರ್ಮಾಣದ ಕಾಮಗಾರಿಗೆ ಗುದ್ದಲಿ ಪೂಜೆ ಸಮಾರಂಭದಲ್ಲಿ ಸಚಿವ ಮಲ್ಲಿಕಾರ್ಜುನ್ ಹೇಳಿಕೆ

---

ಕನ್ನಡಪ್ರಭ ವಾರ್ತೆ, ದಾವಣಗೆರೆ

ಬೆಂಗಳೂರಿನ ಅಂಬೇಡ್ಕರ್‌ ಭವನವನ್ನು ಮೀರಿಸುವಂಥಾ ಮಾದರಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗಲಿ, ಭವನ ನಿರ್ಮಾಣಕ್ಕೆ ರೂ. 20 ಕೋಟಿ ವೆಚ್ಚವಾದರು ಪರವಾಗಿಲ್ಲ, ಹೈಟೆಕ್ ಮಾದರಿಯಲ್ಲಿ ಸರ್ವರಿಗೂ ಉಪಯೋಗವಾಗುವಂತೆ ಭವನ ನಿರ್ಮಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ತಿಳಿಸಿದರು.

ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿ.ಪಂ., ಸಮಾಜ ಕಲ್ಯಾಣ ಇಲಾಖೆ ಹಾಗೂ ಪಾಲಿಕೆಯ ಆಶ್ರಯದಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮತ್ತು ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ಅವರ ಹೆಸರಿನಲ್ಲಿ ಕಳೆದ 25 ವರ್ಷಗಳ ಹಿಂದೆಯೇ ಸಮುದಾಯ ಭವನ ನಿರ್ಮಾಣವಾಗಬೇಕಿತ್ತು. ಇಲ್ಲಿನ ನಾಯಕರು ಭವನ ನಿರ್ಮಾಣ ಮಾಡುವಲ್ಲಿ ಕಾಲವನ್ನು ದೂಡಿದರು. ಇಂದು ಭವನ ನಿರ್ಮಾಣಕ್ಕೆ ಉತ್ತಮ ಜಾಗವು ಲಭಿಸಿದೆ. ಹೈಟೆಕ್ ಮಾದರಿಯಲ್ಲಿ ಬೆಂಗಳೂರಿನಲ್ಲಿನ ಅಂಬೇಡ್ಕರ್ ಭವನ ಮೀರಿಸುವಂತ ಭವನ ನಿರ್ಮಾಣವಾಗಬೇಕು. ಭವನ ನಿರ್ಮಾಣಕ್ಕೆ ಸರ್ಕಾರದಿಂದ ಐದು ಕೋಟಿ ಅನುದಾನವಿದ್ದು, ರೂ. 20 ಕೋಟಿ ವೆಚ್ಚವಾದರು ಪರವಾಗಿಲ್ಲ ಎಂದರು.

ಬೇತೂರು ಗ್ರಾಮದಲ್ಲಿ ನಿರ್ಮಾಣವಾದ ಅಂಬೇಡ್ಕರ್ ಭವನವು ಅನೇಕ ಸಮುದಾಯಗಳಿಗೆ ಆಸರೆಯಾಗಿದ್ದರು, ನಿರ್ವಹಣೆಯ ಕೊರತೆ ಕಾಣುತ್ತಿದೆ ಎಂದು ತಿಳಿಸಿದ ಸಚಿವರು,

ಪರಿಶಿಷ್ಟ ಜಾತಿ ಹಾಗೂ ಪಂಗಡ, ಅಲ್ಪ ಸಂಖ್ಯಾತ ಹಿಂದುಳಿದ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ಲಭಿಸಬೇಕು. ಅವರು ಹಾಸ್ಟೇಲ್ ವ್ಯವಸ್ತೆಯಿಂದ ವಂಚಿತರಾಗಬಾರದು. ಉಳಿದ ಪೌರಕಾರ್ಮಿಕರ ಸೇವೆ ಖಾಯಂ ಆಗಬೇಕು. ಶೀಘ್ರದಲ್ಲೇ ಅಂಬೇಡ್ಕರ್ ಭವನ ನಿರ್ಮಾಣವಾಗುವುದರೊಂದಿಗೆ ಸರ್ವರಿಗೂ ಸದುಪಯೋಗವಾಗಲಿ. ಡಿಸಿಸಿ ಬ್ಯಾಂಕ್ ಅಡಿಯಲ್ಲಿದ್ದ ಭವನ ನಿರ್ಮಾಣದ ಸ್ಥಳವನ್ನು 78 ಲಕ್ಷ ರೂಪಾಯಿ ನೀಡಿ ಭವನ ನಿರ್ಮಾಣಕ್ಕೆ ಪಡೆಯಲಾಗಿದೆ. ಸಮುದಾಯ ಭವನದ ನಿರ್ಮಾಣಕ್ಕೆ ಈಗಾಗಲೇ 1.5 ಕೋಟಿ ರೂ. ಬಿಡುಗಡೆಯಾಗಿದ್ದು, ಉತ್ತಮ ಕಾಮಗಾರಿ ಮಾಡುವವರಿಗೆ ಗುತ್ತಿಗೆ ನೀಡಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ಮಾಯಕೊಂಡ ಶಾಸಕರಾದ ಬಸವಂತಪ್ಪ, ಜಿಲ್ಲಾ ಪಂಚಾಯತ್ ಸಿಇಓ ಸುರೇಶ್ ಇಟ್ನಾಳ್, ಎಸ್ಪಿ ಉಮಾ ಪ್ರಶಾಂತ್, ಪಾಲಿಕೆ ಆಯುಕ್ತರಾದ ರೇಣುಕಾ, ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ನಿವೃತ್ತ ಎಎಸ್ಪಿ ರವಿನಾರಾಯಣ್ ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಪಾಲಿಕೆಯ ಅಧಿಕಾರಿಗಳು ಸಿಬ್ಬಂದಿವರ್ಗದವರು, ಅಂಬೇಡ್ಕರ್ ಅಭಿಮಾನಿಗಳು ಬಳಗದವರು ಇತರರು ಇದ್ದರು.

...ಬಾಕ್ಸ್...

ಅನೈತಿಕ ಚಟುಚಟಿಕೆ ತಾಣ ಜಗಜೀವನರಾಂ ಭವನ

ದಾವಣಗೆರೆ ರಿಂಗ್ ರಸ್ತೆಯಲ್ಲಿ ಬಾಬು ಜಗಜೀವನರಾಂ ಅವರ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲಾಗಿದ್ದು ಅದು ಉಪಯೋಗಕ್ಕೆ ಬಾರದೆ ಅನೈತಿಕ ಚಟುವಟಿಕೆ ತಾಣವಾಗಿದೆ ಎಂಬದು ಗಮನಕ್ಕೆ ಬಂದಿದೆ‌ ಎಂದು ಬೇಸರ ವ್ಯಕ್ತಪಡಿಸಿದ ಸಚಿವರು, ಯಾವುದೇ ಭವನ ನಿರ್ಮಾಣವಾದರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಅವನತಿಯಲ್ಲಿರುವ ಬಾಬು ಜಗಜೀವನರಾಂ ಭವನವನ್ನು ಅಭಿವೃದ್ಧಿ ಪಡಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಸಚಿವರು ಸೂಚಿಸಿದರು‌.

..........

ಸಚಿವರಿಗೆ ಮನವಿ:ದಾವಣಗೆರೆ ಜಿಲ್ಲೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿಯುತ ಹಾಸ್ಟೇಲ್ ಸೇರಿದಂತೆ ಅನೇಕ ಹಾಸ್ಟೇಲ್ ಗಳು ಅಭಿವೃದ್ಧಿಯಾಗಬೇಕಿವೆ ಎಂದು ಸಚಿವರು ತಿಳಿಸಿದರು‌. ಮೊದಲ ಬಾರಿಗೆ ಮಂತ್ರಿಯಾದಗಲೇ ಜಿಲ್ಲೆಯಲ್ಲಿ ಹೆಚ್ಚು ಹಾಸ್ಟೇಲ್ ಗಳನ್ನು ನಿರ್ಮಾಣ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಅದರ ಫಲವಾಗಿ ಹೆಚ್ಚು ಹಾಸ್ಟೇಲ್ ವ್ಯವಸ್ಥೆಗಳು ಜಿಲ್ಲೆಯಲ್ಲಿವೆ. ಆದರೆ ಹಾಸ್ಟೇಲ್ ಗಳಲ್ಲಿ ಅವ್ಯವಸ್ಥೆಗಳು ತುಂಬಿವೆ ಎಂದು ಕೇಳಿ ಬಂದಿದೆ. ಹಾಸ್ಟೇಲ್ ಗಳ ಅಭಿವೃದ್ಧಿಗೆ ಸಮಾಜ ಕಲ್ಯಾಣ ಇಲಾಖೆಯ ಸಚಿವ ಮಹಾದೇವಪ್ಪ ಅವರಿಗೆ ಕೋರಲಾಗುವುದು ಎಂದು ಸಚಿವರು ತಿಳಿಸಿದರು.

........

ಕ್ಯಾಪ್ಷನ14ಕೆಡಿವಿಜಿ40 ದಾವಣಗೆರೆಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಪುಷ್ಪನಮನ ಸಲ್ಲಿಸಿದರು.

.......

ಕ್ಯಾಪ್ಷನ14ಕೆಡಿವಿಜಿ41 ದಾವಣಗೆರೆಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣದ ಕಾಮಗಾರಿಗೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಗುದ್ದಲಿ ಪೂಜೆ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''