ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿಶ್ವಕರ್ಮ ಸಮಾಜ ಬೆಣ್ಣೂರು ಹಾಗೂ ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರರ ಮತ್ತು ಸಂಶೋಧಕರ ವೇದಿಕೆ, ಕಮಲಾಪುರ ಇವರ ಸಹಯೋಗದಲ್ಲಿ ಗ್ರಾಮದೇವತೆ ದ್ಯಾಮವ್ವ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಎರಡನೇ ವರ್ಷದ ವಿಶ್ವಕರ್ಮ ಪೂಜಾ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಒಳಮೀಸಲಾತಿ ವಿಚಾರದಲ್ಲಿ ವಿಶ್ವಕರ್ಮ ಸಮಾಜಕ್ಕೆ ಅನ್ಯಾಯವಾಗಿದೆ. ಜನಗಣತಿಯಲ್ಲಿ ಸಮಾಜದವರು ಒಂದೇ ಹೆಸರಿನಡಿ ನೋಂದಾಯಿಸಿಕೊಂಡಾಗ ಮಾತ್ರ ಸಮುದಾಯದ ನಿಖರ ಜನಸಂಖ್ಯೆ ತಿಳಿಯಲು ಸಾಧ್ಯವಾಗುತ್ತದೆ. ಸಮಾಜ ರಾಜಕೀಯವಾಗಿ ಅಧಿಕಾರ ಮತ್ತು ಪ್ರಾತಿನಿಧ್ಯ ಪಡೆದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ. ಈ ಭಾಗದ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 15 ಸಾವಿರ ನಿರ್ಣಾಯಕ ಮತಗಳಿದ್ದು, ಸಮಾಜದ ಒಗ್ಗಟ್ಟು ಮತ್ತು ಶಕ್ತಿ ರಾಜಕೀಯ ಪಕ್ಷಗಳಿಗೆ ತೋರಿಸಬೇಕಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶಿರಸಂಗಿಯ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷ ಪ್ರೊ.ಪಿ.ಬಿ. ಬಡಿಗೇರ ಮಾತನಾಡಿ,ವಿಶ್ವಕರ್ಮ ಸಮಾಜ ತನ್ನ ಸಂಸ್ಕೃತಿ, ಪರಂಪರೆ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕು ಎಂದರು.
ಡಾ.ವೀರೇಶ ಬಡಿಗೇರ ಆಶಯ ನುಡಿಗಳನ್ನಾಡಿದರು. ವಿಶ್ವಕರ್ಮ ಸಂಸ್ಕೃತಿ ಪುಸ್ತಕದ ರಚನೆಕಾರ, ಕಲಬುರಗಿಯ ಹಿರಿಯ ಸಾಹಿತಿ ದತ್ತಾತ್ರೇಯ ವಿಶ್ವಕರ್ಮ, ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯ ಉಪಾಧ್ಯಕ್ಷ ಅಶೋಕ ಪೋದ್ದಾರ, ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯಾಧ್ಯಕ್ಷ ಕನ್ನಡ ಸೋಮು ಎಂ. ಸೋಮಶೇಖರ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮಿ ಬಡಿಗೇರ ಹಾಗೂ ಕಾರವಾರದ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ತರಬೇತುದಾರ ಪ್ರಶಾಂತ ಆಚಾರ್ಯ ಮಾತನಾಡಿದರು.
ಪುಸ್ತಕ ಲೋಕಾರ್ಪಣೆ:
ಮೆರವಣಿಗೆಗೆ ಚಾಲನೆ: ವಿಶ್ವಕರ್ಮ ಮಹಾಪ್ರಭುವಿನ ಭಾವಚಿತ್ರದ ಭವ್ಯ ಮೆರವಣಿಗೆಗೆ ಶಾಸಕ ಉಮೇಶ ಮೇಟಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಸಿದ್ದಪ್ಪ ಪತ್ತಾರ, ಸಿದ್ದಪ್ಪ ಓಲೆಕಾರ, ರಾಚಪ್ಪ ಬೀಳಗಿ, ಯಲ್ಲಪ್ಪ ಹುಂಡೆಕಾರ, ಎಚ್.ಆರ್. ಮಾಳಿ, ಮಹಾದೇವಪ್ಪ ಹುಂಡೆಕಾರ, ಮುತ್ತು ಬಡಿಗೇರ, ಕಾಶಿನಾಥ ಬಡಿಗೇರ, ರಮೇಶ ಬಡಿಗೇರ ಸೇರಿ ಸಮಾಜದ ನೂರಾರು ಬಂಧುಗಳು ಹಾಗೂ ಮಹಿಳೆಯರು ಭಾಗವಹಿಸಿದ್ದರು.