ರಾಜ್ಯ ಸರ್ಕಾರದ ಸಾಧನೆ ಬಗ್ಗೆ ಶ್ವೇತಪತ್ರ ಹೊರಡಿಸಲಿ

KannadaprabhaNewsNetwork |  
Published : Jun 22, 2025, 01:18 AM IST
ಕೋಡಿಮಠದಲ್ಲಿ     ಕೇಂದ್ರ ರೈಲ್ವೆಖಾತೆ ರಾಜ್ಯ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ಮಾತನಾಡಿದರು,  | Kannada Prabha

ಸಾರಾಂಶ

ರಾಜ್ಯ ಸರ್ಕಾರದ ಸಾಧನೆ, ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ಆಗ್ರಹಿಸಿದರು. ಒಬ್ಬೊಬ್ಬರು ಒಂದೊಂದು ದಿನ ಹೀಗೆ ಮಾಡಿ ಜನರ ದಾರಿ ತಪ್ಪಿಸಬಾರದು. ಅವರ ಬಳಿ ಹಣ ಇಲ್ಲ, ಅದನ್ನ ಮರೆಸಲು ಹೀಗೆ ಮಾಡ್ತಾ ಇದಾರೆ, ಇವರು ಹೀಗೆ ಪತ್ರ ಬರೆಯೋದು, ನಾವು ನೀವು ಚರ್ಚೆ ಮಾಡ್ತಾ ಎಲ್ಲವನ್ನೂ ಮರೆಯುವಂತಾಗಿದೆ ಎಂದರು. ಸರ್ಕಾರದವರು ಬಿಜೆಪಿಯನ್ನು ಟೀಕಿಸುತ್ತಿರುವುದಕ್ಕೆ ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಅದನ್ನು ಮೊದಲು ನೋಡಿಕೊಳ್ಳಲಿ ಎಂದು ಟಾಂಗ್ ನೀಡಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ರಾಜ್ಯ ಸರ್ಕಾರದ ಸಾಧನೆ, ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ಆಗ್ರಹಿಸಿದರು.

ತಾಲೂಕಿನ ಕೋಡಿಮಠದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ಎಲ್ಲಿದೆ ಎಂದು ಪ್ರಶ್ನಿಸಿದರು. ಕಾನೂನು ಸಚಿವ ಎಚ್.ಕೆ. ಪಾಟೀಲ್ ಪತ್ರ ವಿಚಾರದ ಬಗ್ಗೆ ಒಬ್ಬೊಬ್ಬ ಸಚಿವರು ಒಂದೊಂದು ರೀತಿ ಜಾಣಕುರುಡರಾಗಿದ್ದಾರೆ. ದೈನಂದಿನ ಸಮಸ್ಯೆ ಬಗ್ಗೆ ಚರ್ಚೆ ಮಾಡದೆ ಜನರನ್ನು ದಾರಿ ತಪ್ಪಿಸಲು ಹೀಗೆ ಮಾಡುತ್ತಿದ್ದಾರೆ, ತಪ್ಪಾಗಿದ್ದರೆ ಕ್ರಮ ಕೈಗೊಳ್ಳಲು ಇವರಿಗೆ ಬೇಡ ಅಂದಿರೋರು ಯಾರು ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಒಬ್ಬೊಬ್ಬರು ಒಂದೊಂದು ದಿನ ಹೀಗೆ ಮಾಡಿ ಜನರ ದಾರಿ ತಪ್ಪಿಸಬಾರದು. ಅವರ ಬಳಿ ಹಣ ಇಲ್ಲ, ಅದನ್ನ ಮರೆಸಲು ಹೀಗೆ ಮಾಡ್ತಾ ಇದಾರೆ, ಇವರು ಹೀಗೆ ಪತ್ರ ಬರೆಯೋದು, ನಾವು ನೀವು ಚರ್ಚೆ ಮಾಡ್ತಾ ಎಲ್ಲವನ್ನೂ ಮರೆಯುವಂತಾಗಿದೆ ಎಂದರು. ಸರ್ಕಾರದವರು ಬಿಜೆಪಿಯನ್ನು ಟೀಕಿಸುತ್ತಿರುವುದಕ್ಕೆ ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಅದನ್ನು ಮೊದಲು ನೋಡಿಕೊಳ್ಳಲಿ ಎಂದು ಟಾಂಗ್ ನೀಡಿದರು.

ತೆಂಗು ಬೆಳೆಗೆ ರೋಗ ಬಾಧೆ ಕುರಿತ ಪ್ರಶ್ನೆಗೆ ತುಮಕೂರು ಭಾಗದಲ್ಲಿ ವಿಜ್ಞಾನಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸಂಶೋಧನೆ ನಡೆಸಿ ಬಳಿಕ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಪ್ರಯತ್ನಿಸಲಾಗುವುದು ಎಂದರು.

ರಾಜಕಾರಣ ಮುಳ್ಳಿನ ಹಾಸಿಗೆ, ನಿಂತ ನೀರಲ್ಲ, ನಾನು ಎರಡು ಕಡೆ ಸೋತು ಬಂದಾಗ ಶ್ರೀಗಳು ದಕ್ಷಿಣದಿಂದ ಉತ್ತರಕ್ಕೆ ಹೋಗ್ತಿಯಾ ಅಂದಿದ್ದರು. ಪ್ರಧಾನಿಗಳ ಅರೋಗ್ಯ, ಅವರ ತೀರ್ಮಾನಗಳ ಬಗ್ಗೆ ಶ್ರೀಗಳ ಬಳಿ ಕೇಳಿದೆ, ಸೂರ್ಯ, ಚಂದ್ರ ಇರುವವರೆಗೆ ಪ್ರಧಾನಿ ಅವರ ಹೆಸರು ಇರಲಿದೆ ಎಂದರು. ಪಹಲ್ಗಾಮ್ ದಾಳಿ ಬಳಿಕ ಪ್ರಧಾನಿ ಅವರು ಕೈಗೊಂಡ ತೀರ್ಮಾನಗಳ ಬಗ್ಗೆ ಮಾತನಾಡಿದೆ ಎಂದರು. ಇದಕ್ಕೂ ಮುನ್ನ ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿಗೆ ತಾಲೂಕಿನ ಹಾರನಹಳ್ಳಿಯ ಕೋಡಿಮಠಕ್ಕೆ ಭೇಟಿ ನೀಡಿದ ಸೋಮಣ್ಣ, ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳ ಆಶೀರ್ವಾದ ಪಡೆದರು.

ಸಚಿವರಿಗೆ ಬೇಲೂರು ಶಾಸಕ ಎಚ್.ಕೆ. ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಮಾಜಿ ಶಾಸಕ ಜಿ.ಎಸ್. ಪರಮೇಶ್ವರಪ್ಪ, ಜಿವಿಟಿ ಬಸವರಾಜ್ ಹಾಗೂ ಎನ್‌. ಆರ್‌ ಸಂತೋಷ್ ಮೊದಲಾದವರು ಜೊತೆಯಲ್ಲಿದ್ದರು.

PREV

Recommended Stories

ಸಂಜೆ ಕೋರ್ಟ್‌ಗೆ ವಕೀಲರ ಸಂಘಗಳ ವಿರೋಧ
ಕಾರ್ಯಕ್ರಮಕ್ಕೆ ಸಾರಿಗೆ ಬಸ್ಸಲ್ಲಿ ಬಂದ ಹೈಕೋರ್ಟ್‌ ನ್ಯಾಯಾಧೀಶರು!