ಹಿಂದುಗಳೆಲ್ಲ ಒಗ್ಗೂಡಲಿ: ಶಂಕರ ಭಟ್ಟ

KannadaprabhaNewsNetwork |  
Published : Nov 29, 2026, 02:15 AM IST
ಫೋಟೋ : ೨೮ಕೆಎಂಟಿ_ಎನ್‌ಒವಿ_ಕೆಪಿ೧ : ಧಾರೇಶ್ವರದಲ್ಲಿ ವಿಶ್ವ ಹಿಂದು ಪರಿಷತ್ ಕುಮಟಾ ಪ್ರಖಂಡದ ಹಿತಚಿಂತಕ ಅಭಿಯಾನದಲ್ಲಿ ನಿವೃತ್ತ ಪ್ರೊ ಶಂಕರ ಭಟ್ ಮಾತನಾಡಿದರು. ವಿ.ಕೆ.ಭಟ್, ರಾಮಚಂದ್ರ ಅಡಿ, ಸಂತೋಷ ನಾಯ್ಕ ಇತರರು ಇದ್ದರು. | Kannada Prabha

ಸಾರಾಂಶ

ನಿವೃತ್ತ ಶಿಕ್ಷಕ ವಿ.ಕೆ. ಭಟ್ಟ ಮಾತನಾಡಿ, ಹಿಂದು ಎಂಬುದು ಕೇವಲ ಒಂದು ಮತವಲ್ಲ, ಅತ್ಯಂತ ಉತ್ಕೃಷ್ಟವಾದ ಜೀವನ ವಿಧಾನವಾಗಿದೆ ಎಂದರು.

ಕುಮಟಾ: ಹಿಂದುತ್ವವನ್ನು ಹತ್ತಿಕ್ಕಲು ಜಾಗತಿಕ ಮಟ್ಟದಲ್ಲಿ ದೊಡ್ಡ ಪಿತೂರಿ ಕಾರ್ಯಗಳು ನಿರಂತರ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಹಿಂದುಗಳನ್ನು ಒಗ್ಗೂಡಿಸಿ ಸನಾತನ ಧರ್ಮದ ಮೌಲ್ಯಗಳನ್ನು ಜಗತ್ತಿಗೆ ಸಾರುತ್ತಿರುವ ವಿಶ್ವ ಹಿಂದೂ ಪರಿಷತ್‌ನ ಕಾರ್ಯ ಶ್ಲಾಘನೀಯ. ಪರಿಷತ್ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ನಿವೃತ್ತ ಉಪನ್ಯಾಸಕ ಶಂಕರ ಎಸ್. ಭಟ್ಟ ಸತ್ರಮಠ ಹೇಳಿದರು.

ವಿಶ್ವ ಹಿಂದು ಪರಿಷತ್‌ನಿಂದ ಧಾರೇಶ್ವರದ ಧಾರಾನಾಥ ದೇವಾಲಯದ ಆವಾರದಲ್ಲಿ ಆಯೋಜಿಸಿದ್ದ ಹಿತಚಿಂತಕರ ಅಭಿಯಾನದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಅಭಿಯಾನಕ್ಕೆ ಚಾಲನೆ ನೀಡಿದ ಊರಿನ ಹಿರಿಯರಾದ ನಿವೃತ್ತ ಶಿಕ್ಷಕ ವಿ.ಕೆ. ಭಟ್ಟ ಮಾತನಾಡಿ, ಹಿಂದು ಎಂಬುದು ಕೇವಲ ಒಂದು ಮತವಲ್ಲ, ಅತ್ಯಂತ ಉತ್ಕೃಷ್ಟವಾದ ಜೀವನ ವಿಧಾನವಾಗಿದೆ. ಇದನ್ನು ನಾವೆಲ್ಲರೂ ಒಗ್ಗಟ್ಟಿನಿಂದ ಬಲಿಷ್ಠ ಪಡಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಎಂದು ಅಭಿಯಾನಕ್ಕೆ ಶುಭ ಹಾರೈಸಿದರು.

ಕುಮಟಾ ಪ್ರಖಂಡದ ಅಧ್ಯಕ್ಷ ರಾಮಚಂದ್ರ ಅಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ತಾಲೂಕಿನಲ್ಲಿ ಪರಿಷತ್ತಿನ ಸಂಘಟನೆಯನ್ನು ವಿಸ್ತರಿಸಿ ಬಲಪಡಿಸುವ ಹಾಗೂ ಸಂಘಟನೆಯೊಂದಿಗೆ ಕೈಜೋಡಿಸಲು ಸಮಾಜದ ಎಲ್ಲರನ್ನೂ ಕೂಡಿಕೊಳ್ಳುವ ಉದ್ದೇಶದಿಂದ ಅಭಿಯಾನ ಮಾಡಲಾಗುತ್ತದೆ. ಸಂಘಟನೆಯ ದೃಷ್ಟಿಯಿಂದ ಇದಕ್ಕೆ ಎಲ್ಲ ಸಜ್ಜನರ ಸಹಕಾರ ಅಗತ್ಯವಿದೆ ಎಂದರು.

ವಿಹಿಂಪ ಜಿಲ್ಲಾ ಸಹ ಕಾರ್ಯದರ್ಶಿ ಸಂತೋಷ ನಾಯ್ಕ ಪರಿಷತ್ತಿನ ಕಾರ್ಯ ಕಲಾಪಗಳು ಕುರಿತು ವಿವರಿಸಿ ಧನ್ಯವಾದಗೈದರು. ಸತ್ಸಂಗ ಪ್ರಖಂಡದ ಕೇಶವ ನಾಯ್ಕ, ಸಹ ಕಾರ್ಯದರ್ಶಿ ನಾಗರಾಜ ನಾಯ್ಕ, ಇತರ ಪದಾಧಿಕಾರಿಗಳು, ಊರವರು, ಮಾತೆಯರು ಇತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿ ರೈತರಿಗೆ ₹ 50 ಸಾವಿರ ಪರಿಹಾರ ನೀಡಿ
ಕಣ್ಣು ಕತ್ತಲಾದರೂ ಅಕ್ಷರಗಳ ಬೆಳಕು ಆರಲಿಲ್ಲ!