ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಈ ವೇಳೆ ಮಾತನಾಡಿದ ಹೂವರಸನಹಳ್ಳಿ ರಾಜಪ್ಪ ಬೂದಿಕೋಟೆ ಹೋಬಳಿಯು ತಾಲೂಕಿನ ಗಡಿ ಹೋಬಳಿಯಾಗಿದ್ದು, ತಮಿಳುನಾಡು ಗಡಿಗೆ ಹೊಂದಿಕೊಂಡಿದ್ದು ತೀರಾ ಹಿಂದುಳಿದ ಹೋಬಳಿಯಾಗಿದೆ. ಹೋಬಳಿಯ ಗ್ರಾಮಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಹಾಗೂ ಇತರೆ ಹಿಂದಿಳಿದ ವರ್ಗಗಳ ಜನ ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಹಳ ಹಿಂದುಳಿದಿದ್ದಾರೆ ಎಂದರು.
ಪರಿಶಿಷ್ಟರ ಅಭಿವೃದ್ಧಿಗೆ ಪೂರಕಆದ್ದರಿಂದ ಬೂದಿಕೋಟೆ ಹೋಬಳಿ ಕೇಂದ್ರ ಸ್ಥಾನವಾದ ಬೂದಿಕೋಟೆ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಿಸಿಕೊಟ್ಟರೆ ಹೋಬಳಿಯಲ್ಲಿ ವಾಸ ಇರುವ ಪರಿಶಿಷ್ಟ ಜಾತಿ, ಮತ್ತು ಪರಿಶಿಷ್ಟ ವರ್ಗ ಹಾಗೂ ಇತರೆ ಹಿಂದುಳಿದ ವರ್ಗದ ಜನ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ತುಂಬಾ ಅನುಕೂಲವಾಗಲಿದೆ. ಜೊತೆಗೆ ಬೂದಿಕೋಟೆ ಹೋಬಳಿ ಭಾಗದ ದಲಿತರು ಸಾಂಸ್ಕೃತಿಕ, ಶೈಕ್ಷಣಿಕಕ್ಕೆ ಸಂಬಂಧಿಸಿದಂತೆ ಮುಂದುವರಿಯಲು ಹಾಗೂ ವಿಚಾರ ಸಂಕಿರಣಗಳು ಮತ್ತು ಸಭೆ-ಸಮಾರಂಭಗಳನ್ನು ನಡೆಸಿಕೊಳ್ಳಲು ತುಂಬಾ ಅನುಕೂಲವಾಗಲಿದೆ. ಆದ್ದರಿಂದ ಬೂದಿಕೋಟೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಿಸುವಂತೆ ಮನವಿ ಮಾಡಿದರು.