ಅಯೋಧ್ಯೆ ಇಡೀ ಜಗತ್ತಿಗೆ ಮಾದರಿಯಾಗಲಿ: ನಂಜಾವಧೂತಶ್ರೀ

KannadaprabhaNewsNetwork |  
Published : Jan 09, 2024, 02:00 AM IST
8ಶಿರಾ1: ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಹಾ ಸಂಸ್ಥಾನ ಮಠದ ಆವರಣದಲ್ಲಿ ಮನೆಮನೆಗೆ ಮಂತ್ರಾಕ್ಷತೆ ತಲುಪಿಸುವ ಕಾರ್ಯಕ್ರಮಕ್ಕೆ ಶ್ರೀ ನಂಜಾವಧೂತ ಸ್ವಾಮೀಜಿಗಳು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಸೇರಿದಂತೆ ಹಲವರು ಹಾಜರಿದ್ದರು. | Kannada Prabha

ಸಾರಾಂಶ

ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯಲ್ಲಿ ನಂಜಾವಧೂತಶ್ರೀ ಸ್ವಾಮೀಜಿ ಅವರ ನೇತೃತ್ವದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರದ ಮಂತ್ರಾಕ್ಷತೆಯನ್ನು ವಿತರಿಸಿದರು.

ಕನ್ನಡಪ್ರಭ ವಾರ್ತೆ ಶಿರಾ

ಶ್ರೀರಾಮನನ್ನು ಸಾವಿರಾರು ವರ್ಷಗಳು ಘಟಿಸಿದರು ಭಕ್ತರು ನೆನೆದು ಆರಾಧಿಸುತ್ತಾರೆ ಎಂದರೆ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಉತ್ತಮ ಆಡಳಿತ ನೀಡಿದ್ದೆ ಕಾರಣ ಅಯೋಧ್ಯೆ ಜಗತ್ತಿಗೆ ಮಾದರಿಯಾಗಲಿ ಎಂದು ಎಂದು ಶ್ರೀ ಸ್ಪಟಿಕಪುರಿ ಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹೇಳಿದರು.

ತಾಲೂಕಿನ ಪಟ್ಟನಾಯಕನಹಳ್ಳಿ ಐತಿಹಾಸಿಕ ಪ್ರಸಿದ್ಧ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಹಾ ಸಂಸ್ಥಾನ ಮಠದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಶ್ರೀರಾಮ ಪ್ರತಿಷ್ಠಾಪನೆ ಅಂಗವಾಗಿ ಮನೆಮನೆಗೆ ಮಂತ್ರಾಕ್ಷತೆ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆರ್ಶೀವಚನ ನೀಡಿದರು. ತನ್ನ ವ್ಯಕ್ತಿತ್ವದ ಮೂಲಕ ಪ್ರೀತಿ ಹಂಚುವ ಮರ್ಯಾದ ಪುರುಷೋತ್ತಮ ಶ್ರೀ ರಾಮನ ಆದರ್ಶ ಇಂದಿನ ಸಮಾಜಕ್ಕೆ ಮಾದರಿ ಎಂದರು.

ಮನೆ ಮನೆಗು ತೆರಳಿ ಮಂತ್ರಾಕ್ಷತೆ ವಿತರಣೆ ಮಾಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕೆಂಬ ಸಂಕಲ್ಪ ಕೇಂದ್ರ ಸರಕಾರ ಮಾಡಿದಾಗ 900 ಕೋಟಿ ರು. ಕ್ರಿಯಾಯೋಜನೆ ಸಿದ್ಧವಾಗಿತ್ತು. ಶ್ರೀರಾಮ ಮುಂದಿನ ಕಟ್ಟಲೇಬೇಕೆಂಬ ಭಕ್ತರ ಸಂಕಲ್ಪ ಪ್ರತಿಯೊಬ್ಬರೂ ಭಕ್ತಿ ಸಮರ್ಪಿಸುವ ಮೂಲಕ 3600 ಕೋಟಿ ರು. ಭಕ್ತರಿಂದಲೇ ಬಂದದ್ದು, ದೇಶದ ಜನರು ಶ್ರೀರಾಮ ಮೇಲಿಟ್ಟಿರುವ ಭಕ್ತಿಯನ್ನು ಸಾಕ್ಷಿಕರಿಸಿತ್ತು. ಅಯೋಧ್ಯೆಯ ಪುಣ್ಯಕ್ಷೇತ್ರಕ್ಕೆ ಎನ್ನ ಭಕ್ತರು ಒಮ್ಮೆ ನೋಡುವಂತಹ ಸೌಭಾಗ್ಯ ದೇವರು ಕಲ್ಪಿಸಲಿ ಎಂದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘಟನಾ ಕಾರ್ಯದರ್ಶಿ ದೇವರಾಜ್, ಯುವ ಮುಖಂಡ ವೇದಮೂರ್ತಿ, ಸಂತೆಪೇಟೆ ನಟರಾಜ್, ಎಂ ಶಿವಲಿಂಗಯ್ಯ, ಸಿದ್ದಲಿಂಗಪ್ಪ, ಕುಮಾರ್ ಮೇಷ್ಟ್ರು, ಎಚ್.ಜಿ. ರಾಮಕೃಷ್ಣಪ್ಪ, ಹೊಸಹಳ್ಳಿ ರಾಮಚಂದ್ರಪ್ಪ, ಕುಮಾರ್, ಚಿಕ್ಕನಕೋಟೆ ಕರಿಯಣ್ಣ, ಬರಗೂರು ಯುವರಾಜ್, ವೆಂಕಟೇಶ್, ರಂಗನಾಥ್, ಗೋಪಿಕುಂಟೆ ಪ್ರಸನ್ನ, ನಾಗರಾಜ್ ಗೌಡ, ಮಾರುತಿ, ದೇವರಾಜ್, ಕೃಷ್ಣಪ್ಪ, ರವಿಕುಮಾರ್, ಭಾಸ್ಕರ್, ಶಶಿ ಕುಮಾರ್, ಮಂಜುನಾಥ್ ಸ್ವಾಮಿ ಸೇರಿದಂತೆ ನೂರಾರು ಭಕ್ತರು ಹಾಜರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ