ಕನ್ನಡಪ್ರಭ ವಾರ್ತೆ ಗೌರಿಬಿದನೂರು
ನಂತರ ಮಾತನಾಡಿದ ಅವರು, ಪ್ರತಿಯೊಂದು ಮಗುವು ದೇಶದ ಒಬ್ಬೊಬ್ಬ ವಿಜ್ಞಾನಿ. ವಿದ್ಯಾರ್ಥಿಗಳು, ಕಲಿಕಾ ಹಂತದಿಂದಲೇ, ಜೀವನದಲ್ಲಿ ವಿಜ್ಞಾನವನ್ನು ಅಳವಡಿಸಿಕೊಳ್ಳಬೇಕು, ಶಾಲಾ ಹಂತದಿಂದಲೇ ಶಿಕ್ಷಕರಿಂದ ಮಾರ್ಗದರ್ಶನ ಪಡೆದು ವಿಜ್ಞಾನದ ವಿವಿಧ ಪ್ರಯೋಗಗಳನ್ನು ಮಾಡುವ ಆಸಕ್ತಿ ಬೆಳೆಸಿಕೊಳ್ಳಬೇಕು, ಆಗ ಮಾತ್ರ ಸಾಧನೆ ಮಾಡಲು ಪ್ರೇರಣೆಯಾಗುತ್ತದೆ ಎಂದರು.
ವೈಜ್ಞಾನಿಕ ಮನೋಭಾವ:ಕಾರ್ಯದರ್ಶಿ ನಂಜೇಗೌಡ ಮಾತನಾಡಿ, ವೈಜ್ಞಾನಿಕ ಅನ್ವೇಷಣೆಗಳು ಜಗತ್ತನ್ನೇ ಬದಲಿಸುವಷ್ಟು ಶಕ್ತಿ ಹೊಂದಿವೆ, ವಿದ್ಯಾರ್ಥಿಗಳು ಶಾಲಾ ಹಂತದಿಂದಲೇ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳ ಬೇಕು, ವೈಜ್ಞಾನಿಕ ಅಂಶಗಳನ್ನು ಅರಿತು ಬದುಕಿನ ಪ್ರತಿ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ವಿಜ್ಞಾನ ಕ್ಷೇತ್ರದ ಅರಿವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ವಸ್ತು ಪ್ರದರ್ಶನದಲ್ಲಿ ಶಾಲೆ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು. 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ವಸ್ತು ಪ್ರದರ್ಶನ ನೋಡುಗರನ್ನು ಹೊಸ ಲೋಕಕ್ಕೆ ಕರೆದೊಯ್ಯುವ ಜತೆಗೆ ಜ್ಞಾನ ಹೆಚ್ಚಿಸುವಲ್ಲೂ ಯಶಸ್ವಿಯಾಯಿತು.ಇದೇ ಸಂದರ್ಭದಲ್ಲಿ, ಸಿ ಆರ್ ಪಿ ನವೀನ್ ಕುಮಾರ್, ಪ್ರಾಧ್ಯಾಪಕ ರಾಮಪ್ಪ, ಶಿಕ್ಷಕರಾದ, ವರದರಾಜು, ವಿನಯ್, ಮಂಜುನಾಥ್, ಗೌಸಿಯಾಖಾನಂ, ಶ್ರೀನಿವಾಸ್, ನೂರ್ ಆಯಿಷಾ, ವೈಶಾಲಿ, ಪೋಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.