-ಕೊಪ್ಪಳದ ಶ್ರೀ ಗವಿಸಿದ್ಧಲಿಂಗೇಶ್ವರ ಶ್ರೀಗಳಿಂದ ಆಶೀರ್ವಚನ
-ಮಾಜಿ ಶಾಸಕ ನಾಗನಗೌಡ ಕಂದಕೂರು ಸ್ಮಾರಕಕ್ಕೆ ಪಾದಸ್ಪರ್ಷ: ಹಿತೋಪದೇಶ----
ಕನ್ನಡಪ್ರಭ ವಾರ್ತೆ ಯಾದಗಿರಿ"ಜಗತ್ತಿನಲ್ಲಿ ಅತ್ಯಂತ ಪುಣ್ಯದ ಕ್ಷೇತ್ರಗಳೆಂದರೆ ತಾಯಿಯ ಮಡಿಲು ಮತ್ತು ತಂದೆಯ ಹೆಗಲು. ಹೀಗಾಗಿ ತಂದೆತಾಯಿಗಳ ಎದೆಯಂಗಳಕ್ಕೆ ತಂಪು ತರುವ ಕೆಲಸ ಮಕ್ಕಳಿಂದಾಗಬೇಕು. " ಎಂದು "ನಡೆದಾಡುವ ದೇವರು " ಎಂದೇ ಖ್ಯಾತನಾಮರಾದ ಕೊಪ್ಪಳದ ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ನುಡಿದರು.
ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರದ ಕಂದಕೂರು ಗ್ರಾಮದಲ್ಲಿರುವ ಶಾಸಕ, ಹಿರಿಯ ರಾಜಕೀಯ ಮುತ್ಸದ್ದಿ ದಿ. ನಾಗನಗೌಡ ಕಂದಕೂರ ಅವರ ಸ್ಮಾರಕಕ್ಕೆ ಭೇಟಿ ನೀಡಿದ ನಂತರ, ನೆರೆದಿದ್ದ ಸಾವಿರಾರು ಭಕ್ತಗಣಕ್ಕೆ ಹಿತೋಪದೇಶ ನೀಡಿದ ಅವರು, ಈ ನಿಸರ್ಗದಲ್ಲಿ ನಿಜವಾದ ದೇವರು 9 ತಿಂಗಳು ತಾನು ಬೇನೆ ತಿಂದು ಮಗುವಿಗೆ ಜನ್ಮ ನೀಡುವ ಹೆತ್ತ ತಾಯಿ, ಮಗುವಿನ ಪ್ರತಿ ಹಂತದ ಬೆಳವಣಿಗೆಯಲ್ಲಿ ಅವರಿಗೆ ಹೆಗಲು ಕೊಟ್ಟು ಪ್ರೋತ್ಸಾಹ ನೀಡಿ ಶ್ರಮಿಸುವ ತಂದೆಯೇ ನಿಜವಾದ ಹೀರೋಗಳು.ಆದರೆ, ಸಿನಿಮಾ ನಟರು, ಕ್ರಿಕೆಟ್ ಪಟುಗಳನ್ನು ತಮ್ಮ ಹೀರೋಗಳನ್ನಾಗಿ ಆರಾಧಿಸಿ ಕೆಟ್ಟ ಪ್ರಭಾವಕ್ಕೆ ಒಳಗಾಗಿ ಯುವಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದ ಗವಿಶ್ರೀಗಳು, ದುಶ್ಚಟಗಳಿಂದ ದೂರವಿರುವ ಮೂಲಕ ಗುರು ಹಿರಿಯರ ಮಾರ್ಗದರ್ಶನದಲ್ಲಿ ಭಗವಂತ ತಮಗೆ ನೀಡಿರುವ ದೈವ ದತ್ತ ಕ್ಷೇತ್ರದಲ್ಲಿ ಏಕಾಗ್ರತೆ, ಆಸಕ್ತಿ, ಸಮರ್ಪಣಾ ಭಾವದಿಂದ ಕೆಲಸ ಮಾಡಬೇಕು ಅದು ನಿಮ್ಮ ಬದುಕನ್ನು ಉನ್ನತ ಮಟ್ಟಕ್ಕೆ ತಲುಪಿಸುತ್ತದೆ ಎಂದು ಕರೆ ನೀಡಿದರು.
ಸಾಧನೆಗಳ ಹೆಜ್ಜೆ ಗುರುತುಗಳನ್ನು ಇಲ್ಲಿ ಬಿಟ್ಟು ಹೋಗಬೇಕು, ಅಂದಾಗ ಮಾತ್ರ ನಿಮ್ಮ ಹೆಸರು ನಾಗರಿಕ ಸಮಾಜದಲ್ಲಿ ಬಹುಕಾಲ ಉಳಿಯುತ್ತದೆ ಎಂದ ಶ್ರೀಗಳು, ಆ ಭಗವಂತ ಮನುಕುಲಕ್ಕೆ ಹಾಗೂ ಸಕಲ ಪ್ರಾಣಿಗಳು ನೆಮ್ಮದಿಯಿಂದ ಬದುಕಲು ಭೂಮಿ ಎಂಬ ಪವಿತ್ರ ಕ್ಷೇತ್ರ ನೀಡಿದ್ದಾನೆ. ಇಲ್ಲಿ ಎಲ್ಲರೂ ನಿಸರ್ಗದ ನಿಯಮಗಳಾದ ನೀತಿ, ನಿಯತ್ತು, ಒಳ್ಳೆಯ ನಿರ್ಣಯ, ಶುದ್ಧ ಕಾಯಕ, ಪರೋಪಕಾರಿ ಜೀವನ ನಡೆಸಿದಾಗ ಮಾತ್ರ ನಮ್ಮೆಲ್ಲರ ಬದುಕಿಗೆ ಸಾರ್ಥಕ ಎಂಬ ಆತ್ಮ ತೃಪ್ತಿ ಸಿಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಪಾಲಿಸುವ ಮೂಲಕ ಶಾಂತಿ, ನೆಮ್ಮದಿ, ಪ್ರಗತಿ, ಸಾಮರಸ್ಯ ಬದುಕು ಕಟ್ಟಿಕೊಳ್ಳುವುದು ಅಗತ್ಯ ಎಂದರು.ಶಾಸಕ ಶರಣಗೌಡ ಕಂದಕೂರ, ತಂದೆ, ಮಾಜಿ ಶಾಸಕ ಲಿಂ. ನಾಗನಗೌಡ ಕಂದಕೂರ ಅವರ ಅಭಿವೃದ್ಧಿ ಕಾರ್ಯಗಳು, ತಮ್ಮ ಕೆಲಸ ಮತ್ತು ಮುಂದೆ ಹಮ್ಮಿಕೊಳ್ಳುವ ಯೋಜನೆಗಳನ್ನು ವಿವರಿಸಿದರು. ನನ್ನ ಜೀವನದಲ್ಲಿ ಏನಾದರೂ ಬದಲಾವಣೆ ಆಗಿದೆಯೆಂದರೆ ಅದು ಗವಿಶ್ರೀಗಳ ಅನುಗ್ರಹದಿಂದ. ನನ್ನ ಮನವಿಯ ಮೇರೆಗೆ ಪೂಜ್ಯ ಗವಿಶ್ರೀಗಳು ನಮ್ಮೂರು, ಕ್ಷೇತ್ರಕ್ಕೆ ಪಾದ ಬೆಳಿಸಿ ಈ ನೆಲ ಪಾವನಗೊಳಿಸಿದ್ದಾರೆ ಎಂದು ಶಾಸಕ ಕಂದಕೂರ ಹೇಳಿದರು. ಆಶೀರ್ವಚನಕ್ಕೂ ಮುನ್ನ, ಲಿಂ. ನಾಗನಗೌಡ ಕಂದಕೂರ ಅವರ ಸ್ಮಾರಕಕ್ಕೆ ಪುಷ್ಪವೃಷ್ಟಿ ನೆರವೇರಿಸಿದ ಶ್ರೀಗಳು, ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹಾಗೂ ಪರಿವಾರ ಹಾಗೂ ಅಭಿಮಾನಿಗಳು ಇದ್ದರು.
....ಬಾಕ್ಸ್:1...ಕಂದಕೂರಿಗೆ ಆಗಮಿಸಿದ್ದ ಭಕ್ತಸಾಗರ
ಪೂಜ್ಯ ಶ್ರೀ ಗವಿ ಸಿದ್ಧೇಶ್ವರ ಶ್ರೀಗಳ ಪಾವನ ಸನ್ನಿಧಿಯ ದರ್ಶನ ಮತ್ತು ಗುರುಗಳ ಆಶೀರ್ವಚನ ಆಲಿಸಲು ಕಂದಕೂರ ಗ್ರಾಮಕ್ಕೆ ಭಕ್ತಸಾಗರವೇ ಹರಿದು ಬಂದಿತ್ತು. ಯಾದಗಿರಿ ಜಿಲ್ಲಾ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಶ್ರೀಗಳ ಆಗಮನದ ಹಿನ್ನೆಲೆಯಲ್ಲಿ ಅವರ ಆಶಿರ್ವಾದ ಪಡೆಯಲು ಪುಟ್ಟ ಬಾಲಕರಿಂದ ಹಿಡಿದು ವಯೋವೃದ್ಧರು ದಿ.ನಾಗನಗೌಡರ ಸ್ಮಾರಕದಲ್ಲಿ ಜಮಾಯಿಸಿದ್ದರು. ಸುಮಾರು 7-8 ಸಾವಿರ ಜನತೆಗೆ ನಾಗನಗೌಡ ಕಂದಕೂರ ಫೌಂಡೇಶನ್ ವತಿಯಿಂದ ಅಚ್ಚುಕಟ್ಟಾದ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರತಿಯೊಬ್ಬರು ಊಟ ಮಾಡಿಕೊಂಡು ತಮ್ಮೂರಿಗೆ ತೆರಳುವ ವರೆಗೂ ಫೌಂಡೇಶನ್ ಸ್ವಯಂಸೇವಕರು ಕಾಳಜಿ ವಹಿಸಿದ್ದು ವಿಶೇಷವಾಗಿತ್ತು.- ಅಮರಯ್ಯ ಸ್ವಾಮಿ ಜಾಲಿಬೆಂಚಿ ಸ್ವಾಗತಿಸಿದರು.
....ಬಾಕ್ಸ್:2..- ಶಾಸಕರ ಕೊಂಡಾಡಿದ ಜನತೆ
ರಾಜಕೀಯದಲ್ಲಿದ್ದುಕೊಂಡು ಅನೇಕ ಸಾಮಾಜಿಕ ಕೈಂಕರ್ಯ ಕೈಗೊಳ್ಳುತ್ತಿರುವ ಶಾಸಕ ಶರಣಗೌಡ ಕಂದಕೂರ ಅವರ ಜನಪರ ಕಾಳಜಿಗೆ ಸಭೆಯಲ್ಲಿದ್ದ ಕ್ಷೇತ್ರದ ಜನರಿಂದ ಮೆಚ್ಚುಗೆಯ ಮಾತುಗಳು ಕೇಳಿ ಬಂದವು. ಕೋವಿಡ್ ಕಾಳಿಕೆ ಸಂದರ್ಭದಿಂದ ಸತತವಾಗಿ ಕಂದಕೂರು ಮನೆತನ ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವುದು ಔಚಿತ್ಯವೇ ಸರಿ ಎಂದರು.....ಬಾಕ್ಸ್:3....
ದಿವ್ಯಾಂಗರಿಗೆ ತ್ರಿಚಕ್ರ ವಾಹನ ವಿತರಣೆ... (ಗವಿಸಿದ್ದೇಶ್ವರ್ ಸ್ವಾಮೀಜಿ ಫೋಟೋ ಬಳಸಿ)ಲಿಂ. ನಾಗನಗೌಡ ಕಂದಕೂರ ಫೌಂಡೇಶನ್‌ನಿಂದ ಐವರು ದಿವ್ಯಾಂಗರಿಗೆ ಅಭಿನವ ಶ್ರೀ ಗವಿ ಸಿದ್ದೇಶ್ವರ ಸ್ವಾಮಿಗಳಿಂದ ತ್ರಿಚಕ್ರ ವಾಹನ ವಿತರಣೆ ಮಾಡುವ ಮೂಲಕ ಫೌಂಡೇಶನ್, ತನ್ನ ಚೊಚ್ಚಲ ಸಮಾಜಿಕ ಕಾರ್ಯಕ್ಕೆ ಮುಂದಡಿ ಇರಿಸಿತು.
-------.......ಕೋಟ್......
ಕಂದಕೂರು ಮನೆತನ ಸುಸಂಸ್ಕೃತ, ಅಪಾರ ಜನರ ವಿಶ್ವಾಸ ಪಡೆದುಕೊಂಡಿದೆ. ದಿ. ನಾಗಣ್ಣಗೌಡ ಕಂದಕೂರು ಅವರ ಹೆಸರಿನ ಫೌಂಡೇಶನ್ ಮೂಲಕ ಸಾಮಾಜಿಕ ಕಾರ್ಯಗಳನ್ನು ನಿರಂತರ ಮುಂದುವರೆಸಿಕೊಂಡು ಹೋಗಲಿ, ಅದು ಮುಂದೆ ಒಳ್ಳೆಯ ಹೆಸರು ತರುವ ಜೊತೆಗೆ ಎಲ್ಲವನ್ನೂ ಆ ಭಗವಂತ ನೀಡುತ್ತಾನೆ.- ಕೊಪ್ಪಳದ ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು. (ಫೋಟೊ ಬಳಸಿ.. 6ವೈಡಿಆರ್16)
------6ವೈಡಿಆರ್12 : ಕಂದಕೂರು ಗ್ರಾಮದಲ್ಲಿನ ಲಿಂ. ನಾಗನಗೌಡ ಕಂದಕೂರ ಅವರ ಸ್ಮಾರಕಕ್ಕೆ ಪುಷ್ಪವೃಷ್ಟಿ
ನೆರವೇರಿಸಿದ ಕೊಪ್ಪಳದ ಗವಿಸಿದ್ಧೇಶ್ವರ ಶ್ರೀಗಳು, ಪುಷ್ಪವೃಷ್ಟಿಗೈದರು.-----ಪ್ಯಾನಲ್‌ಗೆ ಬಳಸಿ---
6ವೈಡಿಆರ್13 : ಕಂದಕೂರ ಗ್ರಾಮಕ್ಕೆ ಆಗಮಿಸಿದ್ದ ಕೊಪ್ಪಳದ ಗವಿಸಿದ್ಧಲಿಂಗೇಶ್ವರ ಶ್ರೀಗಳಿಗೆ ಶಾಸಕ ಶರಣಗೌಡ ಕಂದಕೂರ ಹಾಗೂ ಹಿರಿಯ ಸಹೋದರ, ಉದ್ಯಮಿ ಮಲ್ಲಿಕಾರ್ಜುನರೆಡ್ಡಿ ಕಂದಕೂರ ಸ್ಮರಣಿಕೆ ನೀಡಿ, ಗೌರವಿಸಿದರು.-----
6ವೈಡಿಆರ್14 : ಲಿಂ. ನಾಗನಗೌಡ ಕಂದಕೂರ ಫೌಂಡೇಶನ್‌ನಿಂದ ದಿವ್ಯಾಂಗರಿಗೆ ಅಭಿನವ ಶ್ರೀ ಗವಿ ಸಿದ್ದೇಶ್ವರ ಸ್ವಾಮಿಗಳಿಂದ ತ್ರಿಚಕ್ರ ವಾಹನ ವಿತರಣೆ ಮಾಡುವ ಮೂಲಕ ಫೌಂಡೇಶನ್, ತನ್ನ ಚೊಚ್ಚಲ ಸಮಾಜಿಕ ಕಾರ್ಯಕ್ಕೆ ಮುಂದಡಿ ಇರಿಸಿತು.----
6ವೈಡಿಆರ್15 : ಮಾಜಿ ಶಾಸಕ ಲಿಂ. ನಾಗನಗೌಡ ಕಂದಕೂರ ಸ್ಮರಣೆಯಲ್ಲಿ ಕಂದಕೂರ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೊಪ್ಪಳದ ಗವಿಸಿದ್ಧೇಶ್ವರ ಶ್ರೀಗಳು ಹಿತೋಪದೇಶ ನೀಡಿದರು.