ಕನ್ನಡಪ್ರಭ ವಾರ್ತೆ ಬಾದಾಮಿ
ಶನಿವಾರ ತಾಲೂಕಿನ ಚಿಕ್ಕಮುಚ್ಚಳಗುಡ್ಡ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ತಾಯಂದಿರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಯಾವ ಮಕ್ಕಳೂ ದಡ್ಡರಿರುವುದಿಲ್ಲ. ಎಲ್ಲರಲ್ಲೂ ಬುದ್ಧಿಶಕ್ತಿಯಿರುತ್ತದೆ. ಅದನ್ನು ಹೊರತರುವ ನಿಟ್ಟಿನಲ್ಲಿ ನಾವೆಲ್ಲರೂ ಉತ್ತಮವಾದ ವಾತಾವಾರಣ ನಿರ್ಮಿಸಬೇಕು. ಮಕ್ಕಳ ಕಲಿಕೆಯ ಗುಣಮಟ್ಟ ಹೆಚ್ಚಿಸುವಲ್ಲಿ ತಾಯಂದಿರ ಪಾತ್ರ ಅಪಾರವಾಗಿದ್ದು, ಮಕ್ಕಳು ದೂರದರ್ಶನದಿಂದ ದೂರವಿರುವಂತೆ ವಿಶೇಷ ಕಾಳಜಿ ವಹಿಸಬೇಕು ಎಂದು ಹೇಳಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವಯ್ಯ ಹಿರೇಮಠ, ಪ್ರಭಾರಿ ಮುಖ್ಯಶಿಕ್ಷಕಿ ಭಾಗ್ಯಲಕ್ಷ್ಮೀ ಟಿ.ಎಚ್. ಮಾತನಾಡಿದರು. ಎಸ್‌ಡಿಎಂಸಿ ಸದಸ್ಯರಾದ ಅಮೀನಸಾಬ ನದಾಫ್, ಗಾಯಿತ್ರಿ ಚಿತ್ತರಗಿ, ಶಿಕ್ಷಕರಾದ ಶಂಕರರಾವ್ ಕುಲಕರ್ಣಿ, ಶ್ರೀನಿವಾಸ ಈಳಗೇರ, ಕೀರ್ತಿ ಬಡಿಗೇರ, ಬಸವರಾಜ ಚಿಕ್ಕನ್ನವರ, ಬಸವರಾಜ ಸಿಂದಗಿಮಠ, ರಮೇಶ ಕತ್ತಿಕೈ, ರಮೇಶ ಹಂಜಿ, ಕೇಶವ ರಘುವೀರ, ಅಶೋಕ ಪೂಜಾರಿ, ಕಾವ್ಯಾ ಪಾಟೀಲ, ಸಂಗಮೇಶ ಉಳ್ಳಾಗಡ್ಡಿ, ಹನಮಂತ ಬಿ, ದಾನಮ್ಮ ಬಂಡಿಗಣಿ ಉಪಸ್ಥಿತರಿದ್ದರು.