ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಜಾನಪದ ಲೋಕದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಆಯೋಜಿಸಿರುವ ಎರಡು ದಿನಗಳ ವಿದ್ಯಾರ್ಥಿ ಜಾನಪದ ಲೋಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಾನಪದರ ಕಾಶಿ ಎಂದೇ ಕರೆಯಲ್ಪಡುವ ಜಾನಪದ ಲೋಕಕ್ಕೆ ಸರ್ಕಾರದ ಅನುದಾನ ಸಾಕಾಗುತ್ತಿಲ್ಲ. ಕಾರ್ಪೋರೇಟ್ ಸಂಸ್ಥೆಗಳು ಕೋಟ್ಯಂತರ ರುಪಾಯಿ ಸಿಎಸ್ ಆರ್ ಅನುದಾನವನ್ನು ಎಲ್ಲೆಲ್ಲಿಗೋ ಕೊಡುತ್ತವೆ. ಜಾನಪದ ಲೋಕಕ್ಕೆ ಕೊಡಲು ಏಕೆ ಹಿಂದೇಟು ಹಾಕುತ್ತಿವೆಯೊ ಗೊತ್ತಿಲ್ಲ. ಇನ್ನಾದರೂ ಅನುದಾನ ನೀಡಿ ಜಾನಪದ ಲೋಕಕ್ಕೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಮಾಡಲಿ ಎಂದರು.ಪ್ರತಿ ವರ್ಷ ರಸ್ತೆ ಮತ್ತು ಕಟ್ಟಡಗಳ ನಿರ್ಮಾಣಗಳಲ್ಲಿ ಅಭಿವೃದ್ಧಿ ಕಾಣುತ್ತಿದ್ದೇವೆ. ಆದರೆ, ಇಡೀ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೂರಕವಾಗಿರುವ ಜಾನಪದ ಲೋಕಕ್ಕೆ ಬೇಕಾದ ನೆಲೆಗಟ್ಟನ್ನು ಕಟ್ಟಿಕೊಡುವಲ್ಲಿ ನಾವೆಲ್ಲರೂ ಹಿಂದೆ ಬಿದ್ದಿದ್ದೇವೆ. ಎಲ್ಲಿ ಸಾಂಸ್ಕೃತಿಕ ನೆಲೆಗಟ್ಟು ಗಟ್ಟಿಯಾಗಿರುತ್ತದೆಯೋ ಅಲ್ಲಿ ಸಮಾಜ ಗಟ್ಟಿಯಾಗಿರುತ್ತದೆ. ಅಂತಹ ಸಮಾಜವನ್ನು ರೂಪಿಸುವ ಜಾನಪದ ಲೋಕ ಆರ್ಥಿಕ ಮುಗ್ಗಟ್ಟಿನಿಂದ ಸೊರಗುತ್ತಿದೆ. ಇದರ ಪ್ರಗತಿ ಯಾರಿಗೂ ಅಭಿವೃದ್ಧಿ ಅನ್ನಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಿಬ್ಬಂದಿಗೆ ವೇತನ ನೀಡಲೂ ಹಣ ಇಲ್ಲ:
ಸಾನ್ನಿಧ್ಯ ವಹಿಸಿದ್ದ ಚುಂಚನಗಿರಿ ಶಾಖಾ ಮಠದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ, ಜಾನಪದ ಲೋಕ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಕಾಣುತ್ತಿದ್ದು, ಇದಕ್ಕೆ ಸರ್ಕಾರ ಮತ್ತು ಸಾರ್ವಜನಿಕರ ಸಹಕಾರ ಅಗತ್ಯವಿದೆ. ಲೋಕದಲ್ಲಿ ಗಿರಿಜ ಕುಟೀರಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಡಿಪ್ಲೋಮೊ ಕಾಲೇಜಿಗೂ ಮತ್ತಷ್ಟು ಕೊಡುಗೆ ಬೇಕಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಮುಖ್ಯ ಅತಿಥಿಯಾದ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಕೆ.ವಿ.ಪ್ರಭಾಕರ್ ಮಾತನಾಡಿ, ಜಾನಪದ ಲೋಕಕ್ಕೆ ರಾಜ್ಯಸರ್ಕಾರ ನೀಡುತ್ತಿರುವ ಅನುದಾನವನ್ನು ಹೆಚ್ಚಿಸಿ, ಬಿಡುಗಡೆ ಮಾಡಿಸುವ ವಿಚಾರದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯರವರು ಹಳ್ಳಿಗಾಡಿನಿಂದ ಬಂದವರು. ಗ್ರಾಮೀಣ ಸೊಗಡು ಎಲ್ಲರಲ್ಲೂ ಬೇರೂರಬೇಕೆಂದು ಬಯಸುವವರು. ಈ ಲೋಕಕ್ಕೆ ಅನುದಾನದ ನೆರವು ಒದಗಿಸುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.
-------
- ಟಿ.ಎಸ್.ನಾಗಾಭರಣ , ರಂಗಭೂಮಿ ನಿರ್ದೇಶಕರು.
-----ನಾವೆಲ್ಲರೂ ಹಳ್ಳಿಯ ಜೀವನದಲ್ಲಿ ಕಲೆ - ಸಂಸ್ಕೃತಿಯನ್ನು ಮೖಗೂಡಿಸಿಕೊಂಡು ಬೆಳೆದಿದ್ದೇವೆ.ಈಗಿನ ಆಧುನಿಕ ಯುಗದಲ್ಲಿ ಜಾನಪದ ಕಲೆ, ಗೀತೆಗಳು ಉಳಿಯಲು ಕಲಾವಿದರು ಕಾರಣ. ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ವಹಿಸಿ ಜಾನಪದವನ್ನು ಅಧ್ಯಯನ ಮಾಡುವ ಮೂಲಕ ಮುಂದಿನ ತಲೆ ಮಾರಿಗೆ ಕೊಂಡೊಯ್ಯುವ ಕೆಲಸ ಮಾಡಬೇಕು.
-ಕೆ.ರಾಜು, ಜಿಲ್ಲಾಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ. ಬೆಂ.ದಕ್ಷಿಣ