ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಬಾಪೂಜಿ ಸಭಾಂಗಣದಲ್ಲಿ ಭಾನುವಾರ ರಂಗಭೂಮಿ ದಾವಣಗೆರೆ ರಂಗಾಯಣದ 2024-25ನೇ ಸಾಲಿನ ರಂಗ ಚಟುವಟಿಕೆಗಳ ನಾಂದಿ-ಆರಂಭೋತ್ಸವ ಕಾರ್ಯಕ್ರಮದ ಭಾಗವಾಗಿ ನಡೆದ ‘ವರ್ತಮಾನದ ವೃತ್ತಿ ರಂಗಭೂಮಿ ಬಿಕ್ಕಟ್ಟು ಮತ್ತು ಪರಿಹಾರ ವಿಷಯ ಕುರಿತ’ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ದಿಕ್ಸೂಚಿ ಮಾತುಗಳನ್ನಾಡಿದ ಅವರು, ದಾವಣಗೆರೆ ವೃತ್ತಿ ರಂಗಾಯಣವು ವೃತ್ತಿ ಪರ ನಾಯಕರನ್ನುಹಾಗೂ ಸ್ಟಾರ್‌ಗಳನ್ನು ಕಟ್ಟಿಕೊಡುವಂತಹ ದೊಡ್ಡ ಸಂಸ್ಥೆಯಾಗಿ ಬೆಳೆಯಲಿ ಹೇಳಿದರು.
ಕನ್ನಡದ ವೃತ್ತಿ ನಾಟಕ ಶಾಲೆ ಸ್ಥಾಪಿಸುವ ಕನಸನ್ನು ಬಿ.ವಿ.ಕಾರಂತರು ಕಂಡಿದ್ದರು. ಮಧ್ಯ ಕರ್ನಾಟಕದ ದಾವಣಗೆರೆ ವೃತ್ತಿ ರಂಗಾಯಣ ಓದಿದ ಮತ್ತು ಓದದ 30 ಜನರನ್ನು ಆಯ್ಕೆಮಾಡಿ, ಸೂಕ್ತ ತರಬೇತಿಯ ಕೇಂದ್ರದ ಜೊತೆಗೆ ಮಾದರಿ ಕಲಾ ಶಾಲೆಯಾಗಿ ಹೊರ ಹೊಮ್ಮಬೇಕು. ಇಲ್ಲಿನ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಸೇರಿ ಇತರರು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ವೃತ್ತಿ ರಂಗಭೂಮಿ, ರಂಗಾಯಣ ಚಟುವಟಿಕೆಗಿಂತಲೂ ಹೆಚ್ಚಾಗಿ ವೃತ್ತಿ ರಂಗಭೂಮಿ ಚಳವಳಿ ನಡೆಸಬೇಕು. ಚಟುವಟಿಕೆಗಳಿಗಿಂತ ರಂಗಭೂಮಿ ಚಳವಳಿ ಇಲ್ಲಿ ಆಗಲಿ ಎಂದರು.ಹರಿಹರ ತಾಲೂಕಿನಲ್ಲಿ ಕೊಂಡಜ್ಜಿಯಲ್ಲಿ ನೀಡಿದ 10 ಎಕರೆ ಜಾಗದಲ್ಲಿ ರಂಗಭೂಮಿ ಪರಂಪರೆ ಕಟ್ಟಿಕೊಂಡುವ ವಸ್ತು ಸಂಗ್ರಹಾಲಯ ಸ್ಥಾಪಿಸುವ ಕನಸು ನನಸಾಗಲಿ. ನಟರು ಮತ್ತು ಪ್ರೇಕ್ಷಕರ ಮಧ್ಯೆ ಕೊಂಡಿಯಾದ ವೃತ್ತಿ ರಂಗಭೂಮಿ ಮತ್ತೆ ತನ್ನ ಗತವೈಭವ ಮರಳಿ ಪಡೆಯುವಂತಹ ಅವಕಾಶ ನಿರ್ಮಾಣವಾಗಿದೆ. ಅದನ್ನು ಸದ್ಭಳಕೆ ಮಾಡಿಕೊಳ್ಳುವ ಕೆಲಸವಾಗಲಿ ಎಂದು ನುಡಿದರು.
ಸಂಸ್ಥೆಯ ಪ್ರಸಕ್ತ ಸಾಲಿನ ಚಟುವಟಿಕೆಗಳಿಗೆ ಚಾಲನೆ ನೀಡಿದ ಡಿಸಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ಮುಂದಿನ ದಿನಗಳಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಲಾಗುವುದು. ಜಿಲ್ಲೆಯ ಜನತೆಗೆ ಸಾಂಸ್ಕೃತಿಕ ಮನೋರಂಜನೆ ಒದಗಿಸುವ ಉದ್ದೇಶದಿಂದ ಗಾಜಿನಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿರುವಂತೆ ಹೆಚ್ಚು ಕಾರ್ಯಕ್ರಮ ನಡೆಸಲಾಗುವುದು. ಜಿಲ್ಲೆಯ ಮತ್ತು ಹೊರ ಜಿಲ್ಲೆಯ ಕಲಾವಿದರರನ್ನು ಆಹ್ವಾನಿಸಿ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.
*ದಾವಣಗೆರೆ ಮತ್ತೆ ರಂಗಭೂಮಿ ತವರಾಗುತ್ತಿದೆ: ಡಾ.ಪ್ರಭಾ
ಕನ್ನಡಪ್ರಭ ವಾರ್ತೆ ದಾವಣಗೆರೆ:
ನಗರದ ಬಾಪೂಜಿ ಸಭಾಂಗಣದಲ್ಲಿ ಭಾನುವಾರ ರಂಗಬೂಮಿ ದಾವಣಗೆರೆ ರಂಗಾಯಣದ 2024-25ನೇ ಸಾಲಿನರಂಗ ಚಟುವಟಿಕೆಗಳ ನಾಂದಿ-ಆರಂಭೋತ್ಸವದಲ್ಲಿ ಮಾತನಾಡಿದ ಅವರು, ಜಿಲ್ಲಾ ರಂಗಭೂಮಿ ದುರಸ್ಥಿಗೆ ₹4.5 ಕೋಟಿ ಜೊತೆಗೆ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಲ್ಲೂ ಎಲ್ಲಾ ರೀತಿಯ ನೆರವು, ಸಹಕಾರ ನೀಡುತ್ತೇವೆ ಎಂದರು.
ರಂಗಜ್ಯೋತಿ ಬೆಳಗಿದ ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ದಾವಣಗೆರೆಯಲ್ಲಿ ವಿಶ್ವ ರಂಗಭೂಮಿಯಾಗಬೇಕು. ಸಮಾಜದಲ್ಲಿ ಸಾಮರಸ್ಯ ಕಾಪಾಡುವುದೇ ಕಲೆಯಾಗಿದೆ. ರಾಜ್ಯದಲ್ಲಿ ಹವ್ಯಾಸಿ ಮತ್ತು ವೃತ್ತಿ ರಂಗಭೂಮಿ ಇವೆ. ಕೊಂಡಜ್ಜಿಯಲ್ಲಿ ವೃತ್ತಿ ರಂಗಭೂಮಿ ರಂಗಾಯಣಕ್ಕೆ ನೀಡಿದ 10 ಎಕರೆಯಲ್ಲಿ ವಿಶ್ವ ರಂಗಭೂಮಿಯಾಗಲಿ. ಥೈಲ್ಯಾಂಡ್‌ನಲ್ಲಿ ದೊಡ್ಡ ರಂಗಭೂಮಿ ಇದೆ. ಸಿಯಾಮ್ ನಿರಾಮಿತ್ ನಂತರ ದೊಡ್ಡ ರಂಗ ವೇದಿಕೆ ದಾವಣಗೆರೆಯಲ್ಲಿ ಆಗಬೇಕು. ಶ್ರೀ ವೃತ್ತಿ ರಂಗಾಯಣವಾಗಲಿ. ದೊಡ್ಡ ವಿಶ್ವ ರಂಗಮಂದಿರ ಇಲ್ಲಿ ನಿರ್ಮಾಣವಾಗಲಿ ಎಂದು ಹಾರೈಸಿದರು.
ಸಾಣೇಹಳ್ಳಿ ರಂಗ ಜಂಗಮ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಂಗ ಸಾನ್ನಿಧ್ಯ ವಹಿಸಿದ್ದರು. ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅಧ್ಯಕ್ಷತೆ ವಹಿಸಿದ್ದರು. ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ವಿಪ ಮಾಜಿ ಸದಸ್ಯ ಮೋಹನಕುಮಾರ ಕೊಂಡಜ್ಜಿ, ರಂಗ ಭೂಮಿ ನಟರಾದ ರಾಜು ತಾಳಿಕೋಟೆ, ಚಿಂದೋಡಿ ಶ್ರೀಕಂಠೇಶ್, ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ, ವಿಶೇಷಾಧಿಕಾರಿ ರವಿಚಂದ್ರ ಇತರರು ಇದ್ದರು.ಸಂಜೆ ಗದಗದ ಶ್ರೀಕುಮಾರೇಶ್ವರ ಕೃಪಾ ಪೋಷಿತ ಪಂಡಿತ ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘದಿಂದ ಪ್ರಸ್ತುತ ಪಡಿಸುವ ಅಕ್ಕ ಮಹಾದೇವಿ ನಾಟಕ ಪ್ರದರ್ಶನಗೊಂಡಿತು.