-ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ವಿಷಾಧ
ಕನ್ನಡಪ್ರಭವಾರ್ತೆ, ಚಿತ್ರದುರ್ಗ
ಸ್ವಾತಂತ್ರ‍್ಯ, ಸಮಾನತೆ, ಭಾತೃತ್ವ ಗೌರವಿಸದವರ ಕೈಯಲ್ಲಿ ಪ್ರಜಾಪ್ರಭುತ್ವದ ಚುಕ್ಕಾಣಿ ಸಿಗುತ್ತಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.ಚಿತ್ರದುರ್ಗ ನಗರದ ಕೋಟೆನಾಡು ಬುದ್ಧ ವಿಹಾರದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಪ್ರಜಾಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಹಣವಿಲ್ಲದೆ ಒಂದು ಗ್ರಾ.ಪಂ ಚುನಾವಣೆ ಗೆಲ್ಲಲಾಗದಂತಹ ಸ್ಥಿತಿಗೆ ಪ್ರಜಾಪ್ರಭುತ್ವ ಬಂದಿರುವುದಕ್ಕೆ ಕಾರಣ ಯಾರು? ಎಂಬುದನ್ನು ಅರಿಯಬೇಕಾಗಿದೆ.ಇಂತಹ ಸ್ಥಿತಿಯಲ್ಲಿ ಪ್ರಜಾಪ್ರಭುತ್ವದ ಮೌಲ್ಯ ಗಟ್ಟಿಗೊಳಿಸಲು ಕರ್ನಾಟಕ ಸರ್ಕಾರವು ಆಚರಿಸುತ್ತಿರುವ 2500ಕಿಮೀ ಉದ್ದದ ಮಾನವ ಸರಪಳಿ ಕಾರ್ಯಕ್ರಮ ಅಭಿನಂದನಾರ್ಹ ಎಂದರು.
ಮತದಾನದ ಹಕ್ಕು ಚಲಾಯಿಸಲು ಮತದಾರನಿಗೆ ಹಣ ನೀಡುವುದು ಕಡ್ಡಾಯವೆನ್ನುವಂತಾಗಿರುವು ದರಿಂದಲೇ ಕಾರ್ಪೊರೇಟರ್ ಗಳ ಹಣತೆಯಂತೆ ರಾಜಕೀಯ ಪಕ್ಷಗಳು ಕುಣಿಯುತ್ತಿವೆ. ಹಣ, ಜಾತಿ ಬಲ ಇರುವ ವ್ಯಕ್ತಿಗಳು ವಿಧಾನಸೌಧ-ಪಾರ್ಲಿಮೆಂಟ್ ಗಳನ್ನು ವಂಶಪಾರಂಪರ್ಯದ ಜಹಾಗೀರ್ ಎಂದುಕೊಂಡಿವೆ ಎಂದರು.
ಚುನಾವಣೆಯಲ್ಲಿ ಹಣ, ಮದ್ಯ, ಜಾತಿ ಪ್ರೇಮಕ್ಕಾಗಿ ಮತದಾನ ಮಾಡುವುದ ತಿರಸ್ಕರಿಸಿದಾಗಲೇ ಪ್ರಜಾಪ್ರಭುತ್ವ ಗೆಲ್ಲಲು ಸಾಧ್ಯ. ಆಮಿಷ ರಹಿತ ಚುನಾವಣೆಗಳು ನಡೆದಾಗ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ. ಇದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಬೇಕಿದೆ ಎಂದರು.
---------------
ಚಿತ್ರದುರ್ಗದ ನಗರದ ಕೋಟೆ ನಾಡು ಬುದ್ಧ ವಿಹಾರದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಪ್ರಜಾಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಸಂವಿಧಾನ ಪೀಠಿಕೆ ಪಠಣ ಮಾಡಲಾಯಿತು.
ಫೋಟೋ ಫೈಲ್ ನೇಮ್- 15 ಸಿಟಿಡಿ5