ಹುಬ್ಬಳ್ಳಿ:
ತಾಲೂಕಿನ ವರೂರು ನವಗ್ರಹ ಕ್ಷೇತ್ರದಲ್ಲಿ ಬುಧವಾರ ಭಗವಾನ್ ಪಾರ್ಶ್ವನಾಥರ ಪ್ರತಿಮೆಗೆ ಮಹಾಮಸ್ತಕಾಭಿಷೇಕ ಅಂಗವಾಗಿ ನಡೆದ ಪ್ರಥಮ ಕಳಸದ ಅಭಿಷೇಕ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಆಚಾರ್ಯ ಗುಣಧರನಂದಿ ಮಹಾರಾಜರು ಧಾರ್ಮಿಕ ಕ್ಷೇತ್ರದಲ್ಲಷ್ಟೇ ಅಲ್ಲದೇ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಕ್ರಾಂತಿ ಮಾಡಿದ್ದು ಮುಂದಿನ ಪೀಳಿಗೆಗಳ ಉದ್ಧಾರಕ್ಕೂ ಕಟಿಬದ್ಧರಾಗಿದ್ದಾರೆ. ಲೌಕಿಕ ಶಿಕ್ಷಣದ ಜತೆ ಧರ್ಮ ಮತ್ತು ಸಂಸ್ಕೃತಿಯ ಶಿಕ್ಷಣವನ್ನೂ ನೀಡುತ್ತ ನೀವು ಇತಿಹಾಸ ಸೃಷ್ಟಿಸಿದ್ದೀರಿ. ಹಾಗಾಗಿ ಆಚಾರ್ಯರಿಗೆ ಎಲ್ಲ ಸಮಾಜಗಳ ಜನರು ಗೌರವ ನೀಡುತ್ತಾರೆ ಎಂದರು.ಈ ವೇಳೆ ಅವರನ್ನು ತೀರ್ಥಕ್ಷೇತ್ರದ ಪರವಾಗಿ ಸನ್ಮಾನಿಸಲಾಯಿತು. ದಾನಿಗಳಾದ ಮಹೇಂದ್ರ ಸಿಂಘಿ, ಅನಿಲಕುಮಾರ ಚೌಗಲೆ, ಕಿರಣ ಪಾಟೀಲ, ಸುಮೇರು ಪರ್ವತದ ಸೆಂಟ್ರಿಂಗ್ ಮಾಡಿದ ಪ್ರವೀಣ ಭಾಯಿ ಸೇರಿದಂತೆ ಹಲವರನ್ನು ರಾಜ್ಯಪಾಲರು ಸನ್ಮಾನಿಸಿದರು.
ನಂತರ 405 ಎತ್ತರದ ಸುಮೇರು ಪರ್ವತದ ಒಳಂಗಣದಲ್ಲಿರುವ ತೀರ್ಥಂಕರ ಮೂರ್ತಿಗಳಿಗೆ ಪುಷ್ಪಾರ್ಪಣೆ ಸಲ್ಲಿಸಿದರು. ಈ ವೇಳೆ ಗುರುದೇವ ಆಚಾರ್ಯ ಕುಂತುಸಾಗರ ಮಾಹಾರಾಜರು, ಆಚಾರ್ಯ ಗುಣಧರನಂದಿ ಮಹಾರಾಜರು, ಸೂರ್ಯಸಾಗರ ಮಹಾರಾಜ, ತರುಣಸಾಗರ ಮಹಾರಾಜ, ಧರ್ಮಸೇನ ಭಟ್ಟಾರಕ, ಮಹೇಂದ್ರ ಸಿಂಘಿ, ವಿಮಲ್ ತಾಳಿಕೋಟಿ ಸೇರಿದಂತೆ ಹಲವರಿದ್ದರು.