ಬ್ಯಾಡಗಿ: ಲಕ್ಷಾಂತರ ಹೋರಾಟಗಾರರ ತ್ಯಾಗ ಬಲಿದಾನದ ನಂತರ ಭಾರತ ಸ್ವಾತಂತ್ರ್ಯ ಪಡೆದುಕೊಂಡಿದೆ, ಆದ್ದರಿಂದ ಪ್ರತಿಯೊಬ್ಬರು ದೇಶ ಹಾಗೂ ದೇಶಾಭಿಮಾನ ರೂಢಿಸಿಕೊಂಡು ದೇಶದ ಬೆಳವಣಿಗೆ ಸಾಥ್ ನೀಡಿದಲ್ಲಿ ಮಾತ್ರ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಸಿಗಲಿದೆ ಎಂದು ಬಿಜೆಪಿ ತಾಲೂಕಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ ಹೇಳಿದರು.
ಜಗತ್ತಿನಲ್ಲಿ ಎಲ್ಲ ದೇಶಗಳಲ್ಲಿ ಯುದ್ದೋನ್ಮಾದ ಹೆಚ್ಚಾಗಿದೆ, ಇದರಿಂದ ದೇಶ ಸೇವೆಗೆ ಎಲ್ಲರೂ ತಯಾರಾದಲ್ಲಿ ಮಾತ್ರ ನಾವು ನೀವು ಉಳಿಯಲು ಸಾಧ್ಯ, ಕೆಲವು ಕಾಣದ ಕೈಗಳು ನಮ್ಮ ಸಾರ್ವಭೌತ್ವಕ್ಕೆ ಧಕ್ಕೆ ತರುವಂತಹ ಪ್ರಯತ್ನದಲ್ಲಿ ತೊಡಗಿದ್ದು ಇದಕ್ಕೆ ನಾವೇ ಸಡ್ಡು ಹೊಡೆದು ನಿಲ್ಲಬೇಕಿದೆ ಎಂದರು.
ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸುರೇಶ ಉದ್ಯೋಗಣ್ಣನವರ ಮಾತನಾಡಿ, ಭಾರತದಲ್ಲಿ ಯಾವುದೇ ಜಾತಿ ಬೇಧವಿಲ್ಲದೇ ನಾವೆಲ್ಲರೂ ಭಾರತೀಯರು ಎಂಬ ಭಾವನೆ ಹೆಚ್ಚಾಗಬೇಕಿದೆ, ಎಂತಹ ಸಂದರ್ಭ ಎದುರಾದರೂ ನಾವಿರುವ ದೇಶ ಮೊದಲು ಎಂಬ ಮನೋಭಾವನೆ ಪ್ರತಿಯೊಬ್ಬ ಪ್ರಜೆಯಲ್ಲಿ ಮೂಡಬೇಕಿದೆ ಹಾಗಾದಲ್ಲಿ ಭಾರತ ಯಾರಿಂದಲೂ ಅಲುಗಾಡಿಸಲು ಸಾಧ್ಯವಾಗಲ್ಲ ಎಂದರು.ಈ ವೇಳೆ ಮುಖಂಡರಾದ ಮುರಿಗೆಪ್ಪ ಶೆಟ್ಟರ್, ವಿಜಯ ಭರತ ಬಳ್ಳಾರಿ, ಸುರೇಶ ಆಸಾದಿ, ಸುರೇಶ ಚಲವಾದಿ, ನಿಂಗ ರಾಜ ಹರ್ಲಾಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.