ಕನ್ನಡಪ್ರಭ ವಾರ್ತೆ ಬೀಳಗಿ
ಇಲ್ಲಿನ ರಾಘವೇಂದ್ರ ದೇವಸ್ಥಾನ ಸಭಾಭವನದಲ್ಲಿ ನೂತನವಾಗಿ ಆರಂಭಗೊಂಡ ಗುಢೂರ ಎಂಟರಪ್ರೈಸಿಸ್ ಅವರ ಸಿಆರ್‌ಐ ಪಂಪ್ ಸೆಟ್ ಮಳಿಗೆಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಉದ್ಯಮ ಆರಂಭಿಸುವವರು ನಮಗೇನು ಲಾಭ ಎಂಬುದನ್ನು ನೋಡಿ ಉದ್ಯಮ ಆರಂಭಿಸುತ್ತಾರೆ. ಆದರೆ ಗುಢೂರ ಮನೆತನದವರು ರೈತರಿಗೆ ಲಾಭವಾಗಲಿ ಎಂದು ಮಳಿಗೆ ಆರಂಭ ಮಾಡಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಅಕ್ಷಯ ನಾಯ್ಕರ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಬಹು ದೊಡ್ಡ ತ್ಯಾಗ ಮಾಡಿದ ಬೀಳಗಿ ತಾಲೂಕು ಎಲ್ಲ ರಂಗದಲ್ಲೂ ಹತ್ತು ಹಲವಾರು ಸಮಸ್ಯೆ ಎದುರಿಸುತ್ತಿದೆ. ರೈತರು, ಜನರಿಗೆ ಅಗತ್ಯವಾಗಿ ಬೇಕಿರುವ ಸಾಮಗ್ರಿಗಳನ್ನು ಬೇರೆ ಬೇರೆ ಪ್ರದೇಶಗಳಿಗೆ ಹೋಗಿ ತರಲಾಗುತ್ತದೆ. ಆದರೆ ಈಗ ಬೀಳಗಿಯಲ್ಲಿಯೇ ಮಳಿಗೆ ಆರಂಭಿಸಿದ ಗುಢೂರ ಎಂಟರಪ್ರೈಸಿಸ್‌ನವರು ಈ ಭಾಗದ ರೈತರಿಗೆ ಆಸರೆಯಾಗಲಿದ್ದಾರೆ ಮತ್ತು ಯುವಕರಿಗೆ ಉದ್ಯೋಗ ಸೃಷ್ಠಿಸುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಬಣ್ಣಿಸಿದರು.
ಸಮಾರಂಭದಲ್ಲಿ ಗುಢೂರ ಎಂಟರಪ್ರೈಸಿಸ್‌ನ ಅನೀಲ ಹನುಮಂತ ಗುಢೂರ, ಅಕ್ಷಯ ಗುಢೂರ, ಆಕಾಶ ಗುಢೂರ, ಹಿರಿಯರಾದ ಕೃಷ್ಣಾ ಬಾಡಗಂಡಿ, ಸಿಆರ್‌ಐನ ವಿಶ್ವನಾಥ ಹೂಗಾರ, ಅಶೋಕ ಜೋಶಿ, ಶೇಖರ ಗೊಳಸಂಗಿ, ಶ್ರೀಶೈಲ ಜತ್ತಿ, ರವಿ ಪಾಟೀಲ, ಸುರೇಂದ್ರ ನಾಯಕ, ಬಸಯ್ಯ ಹಿರೇಮಠ ಇತರರು ಇದ್ದರು.