ಕನ್ನಡಪ್ರಭ ವಾರ್ತೆ ಲೋಕಾಪುರ
ಪಟ್ಟಣದ ಲೋಕೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಘಟಪ್ರಭಾ ಬಲದಂಡೆ ಕಾಲುವೆ ಜಿಆರ್‌ಬಿಸಿ ನೀರು ಹಂಚಿಕೆ, ಅಕ್ರಮ ತಡೆ ಹಾಗೂ ಸಮಗ್ರ ನಿರ್ವಹಣೆ ಕುರಿತು ಸಭೆಯಲ್ಲಿ ಮಾತನಾಡಿದರು. ಆ.೧೪ ರಂದು ನಡೆಸಿದ ಹೋರಾಟದ ಪ್ರತಿಫಲವಾಗಿ, ನೀರಾವರಿ ಇಲಾಖೆಯ ಮೇಲಾಧಿಕಾರಿಗಳು ರೈತರ ಕಾಲುವೆ ನೀರಿನ ಸಮಸ್ಯೆಗಳಿಗೆ ತುರ್ತು ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಭೆ ನಡೆಸುತ್ತಿರುವುದು ಸ್ವಾಗತಾರ್ಹ. ಮೇಲ್ಭಾಗದ ರೈತರಿಗೆ ಮಾತ್ರ ನೀರು ಸಿಗುವ ಪರಿಸ್ಥಿತಿ ತಪ್ಪಿಸಿ, ಕೆಳಭಾಗದ ರೈತರಿಗೂ ನ್ಯಾಯಯುತವಾಗಿ ನೀರು ದೊರೆಯುವಂತೆ ನೀರು ಹಂಚಿಕೆಯ ವ್ಯವಸ್ಥೆ ರೂಪಿಸಬೇಕು ಎಂದರು. ರೈತ ಮುಖಂಡ ಲೋಕಣ್ಣ ಕತ್ತಿ ಮಾತನಾಡಿ, ಕಾಲುವೆಯ ದುರಸ್ತಿ ಮತ್ತು ಸ್ವಚ್ಛತೆ, ಹೂಳು, ಗಿಡಗಂಟಿಗಳು ಹಾಗೂ ಹಾನಿಗೊಳಗಾದ ಕಾಲುವೆ ಭಾಗಗಳನ್ನು ತಕ್ಷಣ ದುರಸ್ತಿ ಮಾಡಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ನೀರಿನ ಹರಿವಿನ ನಿರಂತರ ಮೇಲ್ವಿಚಾರಣೆ ಕಾಲುವೆಗೆ ನೀರು ಬಿಟ್ಟ ನಂತರ ಅದು ಯಾವ ಗ್ರಾಮಗಳವರೆಗೆ ತಲುಪಿದೆ ಎಂಬುದನ್ನು ಅಧಿಕಾರಿಗಳು ಸ್ಥಳದಲ್ಲೇ ಪರಿಶೀಲಿಸಬೇಕು. ರೈತರ ದೂರಗಳಿಗೆ ತುರ್ತು ಸ್ಪಂದನೆ ಮಾಡಿ, ನೀರು ಬಾರದ ಸಂದರ್ಭದಲ್ಲಿ ತಾಲೂಕು ಮಟ್ಟದಲ್ಲಿ ತುರ್ತು ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಪಿಕೆಪಿಎಸ್ ಅಧ್ಯಕ್ಷ ಅರ್ಜುನ ಕೊಪ್ಪದ ಮಾತನಾಡಿ, ರೈತರು ನೀರಿಗಾಗಿ ಹೋರಾಟ ನಡೆಸುವ ಪರಿಸ್ಥಿತಿ ಬರದಂತೆ ಕಾಲುವೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಇಲಾಖೆ ಸ್ಪಷ್ಟವಾದ ಕಾರ್ಯಯೋಜನೆ ಮತ್ತು ಕಾಲಮಿತಿ ನಿಗಡಿಪಡಿಸಬೇಕು. ಪಾರದರ್ಶಕ ವೇಳಾಪಟ್ಟಿ ಪ್ರಕಟಣೆ ಮಾಡಿ ಕಾಲುವೆಗೆ ನೀರು ಎಂದು ಬಿಡಲಾಗುತ್ತಿದೆ ಎಷ್ಟು ದಿನಗಳ ಕಾಲ ನಿರಂತರವಾಗಿ ಹರಿಯುತ್ತದೆ? ಮತ್ತು ಎಷ್ಟು ಕ್ಯೂಸೆಕ್ ಪ್ರಮಾಣದಲ್ಲಿ ನೀರು ಹರಿಸಲಾಗುತ್ತದೆ ಎಂಬ ಸ್ಪಷ್ಟ ವೇಳಾಪಟ್ಟಿಯನ್ನು ಗ್ರಾಮ ಪಂಚಾಯತಿಗಳ ಮಟ್ಟದಲ್ಲಿ ಪ್ರಕಟಿಸಬೇಕು ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು.-----
ಕೋಟ್‌ನಮಗೆ ಭರವಸೆ ಮಾತ್ರ ಬೇಡ. ಕಾಲುವೆಗೆ ನೀರು ಬೇಕು, ತಾತ್ಕಾಲಿಕ ಪರಿಹಾರ ಬೇಡ, ಶಾಶ್ವತ ಪರಿಹಾರ ಬೇಕು. ನೀರಾವರಿ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆಗಳನ್ನು ಸಂಪೂರ್ಣವಾಗಿ ಆಲಿಸಿ, ಯಾವ ದಿನಾಂಕದೊಳಗೆ ಯಾವ ಕಾಮಗಾರಿ ಕೈಗೊಳ್ಳಲಾಗುತ್ತದೆ, ಯಾವ ಪ್ರಮಾಣದಲ್ಲಿ ನೀರು ಹರಿಸಲಾಗುತ್ತದೆ ಮತ್ತು ಶಾಶ್ವತ ಪರಿಹಾರಕ್ಕೆ ಯಾವ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂಬುದನ್ನು ಲಿಖಿತವಾಗಿ ತಿಳಿಸಬೇಕು. ರೈತರ ಹೋರಾಟ ಯಾರ ವಿರುದ್ಧವು ಅಲ್ಲ, ನಮ್ಮ ಹೊಲಗಳಿಗೆ ನೀರು, ನಮ್ಮ ಬದುಕಿಗೆ ಭದ್ರತೆ ಮತ್ತು ನಮ್ಮ ಹಕ್ಕಿಗಾಗಿ.ಆನಂದಗೌಡ ಪಾಟೀಲ, ರೈತ ಮುಖಂಡ----ಕೋಟ್‌ಸದರಿ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ಬಾಗಲಕೋಟ ವಿಭಾಗ ೧ರ ಘಟಪ್ರಭಾ ಬಲದಂಡೆ ಕಾಲುವೆ ಕಿ.ಮೀ. ನಂ.೧೧೯ರಿಂದ ತಮ್ಮ ವಿಭಾಗದ ವ್ಯಾಪ್ತಿಯ ಕಾಲುವೆಗಳಿಗೆ ಯಾವುದೇ ಅಡಚಣೆ ಇಲ್ಲದೇ ನೀರನ್ನು ಸಮರ್ಪಕವಾಗಿ ಒದಗಿಸಲು ನಿರ್ದೇಶನ ನೀಡಲಾಗಿದೆ. ಮಕರಂದ ಪೆಡನೇಕರ್, ಅಧೀಕ್ಷಕ ಅಭಿಯಂತರರು, ಜಿಆರ್‌ಬಿಸಿಸಿರೈತರಾದ ಮುತ್ತಪ್ಪ ಕೋಮಾರ, ಎ.ಡಿ.ಸಂಗಣ್ಣವರ, ವಿಠ್ಠಲಗೌಡ ಪಾಟೀಲ, ಯಮನಪ್ಪ ಹೊರಟ್ಟಿ, ಆನಂದ ಹವಳಖೋಡ, ರಮೇಶ ದೇವರಡ್ಡಿ, ಲೋಕಣ್ಣ ಉಳ್ಳಾಗಡ್ಡಿ, ಸದಾಶಿವ ಉತ್ತೂರ, ರಾಮನಗೌಡ ಪಾಟೀಲ, ಬಸು ಯಾವಗಲ್, ಪಾಂಡುರಂಗ ಹೂವಣ್ಣವರ, ಗುರುನಾಥ ಪಾಟೀಲ, ಪರಮಾನಂದ ಕನಕಪ್ಪನವರ, ಮಂಜು ಗಸ್ತಿ, ಗೋವಿಂದಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಸದಾಶಿವ ಯಡಹಳ್ಳಿ, ಶಂಕರ ನಾಯ್ಕ, ಶ್ರೀನಿವಾಸ ಮರೆಗುದ್ದಿ, ಕಾಂತು ಹಿತ್ತಲಮನಿ, ವಿಷ್ಣು ಮರೆಗುದ್ದಿ, ತಿಮ್ಮಾಪುರ, ಹೆಬ್ಬಾಳ, ಹಲಕಿ, ದಾದನಟ್ಟಿ, ಹೊಸಕೊಟಿ, ವರ್ಚಗಲ್, ಚೌಡಾಪುರ, ಚಿಕ್ಕೂರ, ಚಿತ್ರಭಾನುಕೋಟಿ, ಜಿನ್ನೂರ, ಭಂಟನೂರ, ಅರಳಿಕಟ್ಟಿ, ಲಕ್ಷಾನಟ್ಟಿ, ಕಾಡರಕೊಪ್ಪ, ಅನೇಕ ಸುತ್ತಮುತ್ತಲಿನ ರೈತ ಸಂಘಟನೆಗಳ ಪದಾಧಿಕಾರಿಗಳು, ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ನಾರಾಯಣ, ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ವಿಜಯಕುಮಾರ ಜಿ.ಕೆ. ಲೋಕಾಪುರ, ಉಪತಹಶೀಲ್ದಾರ್ ಬಿ.ಎಸ್.ರಂಗಣ್ಣವರ, ಮುದೋಳ ಸಿಪಿಐ ಎಂ.ನಾಗರಡ್ಡಿ, ಪಿಎಸ್‌ಐ ಕೆ.ಬಿ.ಜಕ್ಕನ್ನವರ ಇದ್ದರು.