ಸಾಮಾಜಿಕ ಕಳಕಳಿ ಇರುವ ಚಿತ್ರಗಳು ಪ್ರದರ್ಶನಗೊಳ್ಳಲಿ: ಬಿ. ಪ್ರಾಣೇಶ

KannadaprabhaNewsNetwork |  
Published : Sep 29, 2026, 02:30 AM IST
ಗಂಗಾವತಿ ಸಮೀಪದ ದಾಸನಾಳ ಗ್ರಾಮದಲ್ಲಿ ಸಿದ್ಧಾರ್ಥ ನಿರ್ಮಿಸಿ, ನಿರ್ದೇಶಿಸಿ ನಟಿಸಿರುವ ಕಲ್ಯಾಣ ಚಲನಚಿತ್ರದ ಶೀರ್ಷಿಕೆ ಬಿಡುಗಡೆ ಸಮಾರಂಭವನ್ನು ಹಾಸ್ಯ ಸಾಹಿತಿ ಬಿ. ಪ್ರಾಣೇಶ ಉದ್ಘಾಟಿಸಿದರು. | Kannada Prabha

ಸಾರಾಂಶ

ಗಂಗಾವತಿ ಸಮೀಪದ ದಾಸನಾಳ ಗ್ರಾಮದಲ್ಲಿ ಸಿದ್ಧಾರ್ಥ ನಿರ್ಮಿಸಿ, ನಿರ್ದೇಶಿಸಿ ನಟಿಸಿರುವ, ಕಲ್ಯಾಣ ಚಲನಚಿತ್ರದ ಶೀರ್ಷಿಕೆಯನ್ನು ಹಾಸ್ಯ ಸಾಹಿತಿ ಬಿ. ಪ್ರಾಣೇಶ ಬಿಡುಗಡೆಗೊಳಿಸಿದರು.

ಗಂಗಾವತಿ: ಕುಟುಂಬದ ಎಲ್ಲ ಸದಸ್ಯರು ಒಟ್ಟಿಗೆ ಕುಳಿತು ನೋಡುವಂತಹ ಮತ್ತು ಸಾಮಾಜಿಕ ಕಳಕಳಿ ಇರುವ ಚಲನಚಿತ್ರಗಳು ಮೂಡಿಬರಲಿ ಎಂದು ಗಂಗಾವತಿಯ ಹಾಸ್ಯ ಸಾಹಿತಿ ಬಿ. ಪ್ರಾಣೇಶ ಆಶಿಸಿದರು.

ಸಮೀಪದ ದಾಸನಾಳ ಗ್ರಾಮದಲ್ಲಿ ಸಿದ್ಧಾರ್ಥ ನಿರ್ಮಿಸಿ, ನಿರ್ದೇಶಿಸಿ ನಟಿಸಿರುವ, ಕಲ್ಯಾಣ ಚಲನಚಿತ್ರದ ಶೀರ್ಷಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ತಾವು ಚಿಕ್ಕವರಿದ್ದಾಗ ನೋಡಿದ ಸಿನಿಮಾಗಳಿಗೂ, ಇಂದು ಬರುತ್ತಿರುವ ಸಿನಿಮಾಗಳಿಗೂ ವ್ಯತ್ಯಾಸ ವಿವರಿಸಿದ ಅವರು, ಉತ್ತರ ಕರ್ನಾಟಕದ ಕಲಾವಿದರು ಬೆಳೆಯುವುದು ಕಷ್ಟ, ಇಂತಹ ಸಂದರ್ಭದಲ್ಲಿ, ಸಿದ್ಧಾರ್ಥ ಅವರು ಕಲ್ಯಾಣ ಎನ್ನುವ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ, ಕುಟುಂಬ ಕುಳಿತು ನೋಡುವಂತಹ ಸಿನಿಮಾ ನೀಡಿರುವುದು ಸಂತೋಷದ ಸಂಗತಿ ಎಂದರು. ಅಲ್ಲದೆ ನಮ್ಮ ಭಾಗದ ಕಲಾವಿದರು ನಟಿಸಿರುವ ಈ ಸಿನಿಮಾವನ್ನು ಚಿತ್ರಮಂದಿರಕ್ಕೆ ಹೋಗಿ ನೋಡಿ ಹರಸಿ ಹಾರೈಸಿರಿ ಎಂದು ಮನವಿ ಮಾಡಿದರು.

ಪತ್ರಕರ್ತ ರಾಮಮೂರ್ತಿ ನವಲಿ ಮಾತನಾಡಿದರು. ಚಿತ್ರದ ನಿರ್ಮಾಪಕ ಸಿದ್ಧಾರ್ಥ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿತ್ರ ತಂಡದ ಎಲ್ಲ ಕಲಾವಿದರನ್ನು ಸನ್ಮಾನಿಸಲಾಯಿತು.

ಚಿತ್ರದ ನಾಯಕಿ ಪ್ರೀತಿ ಆಚಾರ್ಯ, ಸಂಗೀತ ನಿರ್ದೇಶಕ ಸಲೀಮ್ ರಾಜ್, ನೃತ್ಯ ನಿರ್ದೇಶಕ ಯಶವಂತ ಬಡಿ, ಸಹಾಯಕ ನಿರ್ದೇಶಕ ಅರ್ಜುನ್, ಚಲನಚಿತ್ರ ನಟಿ ಡಾ. ಸಿ. ಮಹಾಲಕ್ಷ್ಮಿ, ಬಿಜೆಪಿ ಮುಖಂಡ ಸಂಗಮೇಶ್ ಸುಗ್ರೀವ, ದೇವಾನಂದ, ಹಿರೇಮಠದ ಸ್ವಾಮಿಗಳಾದ ಜಡೆಸಿದ್ದ ಸ್ವಾಮಿ, ಗ್ರಾಮದ ಹಿರಿಯರಾದ ವೀರಭದ್ರಗೌಡ ಮಾಲಿಪಾಟೀಲ್, ಹನುಮಂತಗೌಡ ರಾಯನಗೌಡ, ನಾಗಪ್ಪ ದಾಸಾಪುರ, ಮಲ್ಲನಗೌಡ ಬುಡ್ಡನಗೌಡ್ರು, ದೇವಪ್ಪ ಪೂಜಾರಿ, ವಿರೂಪಾಕ್ಷಯ್ಯ ಸ್ವಾಮಿ ಹಿರೇಮಠ, ರಸುಲ್ ಸಾಬ್, ಮಹಮದ್ ಸಾಬ್ ದಳಪತಿ, ದುರ್ಗೇಶ ನಾಯಕ್, ಡಾ. ಮಲ್ಲಿಕಾರ್ಜುನ ಕೋರಿ, ಬಸನಗೌಡ ಬುಡ್ಡನ ಗೌಡ್ರು ಉಪಸ್ಥಿತರಿದ್ದರು. ಇದೇ ವೇಳೆ ಚಿತ್ರ ತಂಡದವರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಕ್ರಮ ಅಗತ್ಯ: ರಮಿತಾ
ಮೂಡ್ಲಕಟ್ಟೆ ನರ್ಸಿಂಗ್‌ ಕಾಲೇಜಿನಿಂದ ಆತ್ಮಹತ್ಯೆ ತಡೆ ಮಾಸಾಚರಣೆ