ಕೆಆರ್‌ಡಿಎಲ್‌ ಎಇಇ ಫರ್ವೇಜ್‌ ನಾಪತ್ತೆ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Sep 29, 2026, 02:30 AM IST
ಗದಗದಲ್ಲಿ ಕೆಆರ್‌ಡಿಎಲ್‌ ಎಇಇ ಫರ್ವೇಜ್‌ ನಾಪತ್ತೆ ಖಂಡಿಸಿ ಪ್ರತಿಭಟನೆ ನಡೆಯಿತು. | Kannada Prabha

ಸಾರಾಂಶ

ಕೆಆರ್‌ಡಿಎಲ್‌ ಎಇಇ ಫರ್ವೇಜ್‌ ಧಾರವಾಡ ನಾಪತ್ತೆ ಖಂಡಿಸಿ ಜಿಲ್ಲಾ ಅಲ್ಪಸಂಖ್ಯಾತರ ಒಕ್ಕೂಟದಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಗೃಹಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಗದಗ

ಕೆಆರ್‌ಡಿಎಲ್‌ ಎಇಇ ಫರ್ವೇಜ್‌ ಧಾರವಾಡ ನಾಪತ್ತೆ ಖಂಡಿಸಿ ಜಿಲ್ಲಾ ಅಲ್ಪಸಂಖ್ಯಾತರ ಒಕ್ಕೂಟದಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಗೃಹಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ಬಾಷಾಸಾಬ ಮಲ್ಲಸಮುದ್ರ ಮಾತನಾಡಿ, ಕೆಆರ್‌ಐಡಿಎಲ್ ಎಇಇ ಫರ್ವೇಜ್ ನಾಪತ್ತೆಯಾಗಿ 16 ದಿನ ಕಳೆದು ಹೋದರೂ ಸರ್ಕಾರ ಇವರನ್ನು ಹುಡುಕುವಲ್ಲಿ ವಿಫಲವಾಗಿದೆ. ಒಬ್ಬ ಅಧಿಕಾರಿ ಪತ್ರ ಬರೆದು ಅವನಿಗೆ ಕಿರುಕುಳ ನೀಡಿದ್ದಾರೆ ಎಂಬ ಮಾತು ಕೇಳಿ ಅವರನ್ನು ಹುಡುಕುವ ಬದಲು ಜನಪ್ರತಿನಿಧಿಗಳು ಬೇರೆ ರೀತಿಯ ಹೇಳಿಕೆ ನೀಡಿದ್ದು ಖಂಡನೀಯ. 3 ದಿನಗಳೊಳಗಾಗಿ ಕೆಆರ್‌ಡಿಎಲ್‌ ಎಇಇ ಫರ್ವೇಜ್‌ ಅವರನ್ನ ಹುಡಕಲು ವಿಶೇಷ ತಂಡ ರಚಿಸಬೇಕು ಹಾಗೂ ಅವರ ಕುಟುಂಬಕ್ಕೆ ಸೂಕ್ತ ಪೊಲೀಸ್ ಭದ್ರತೆ ನೀಡಬೇಕು ಇಲ್ಲದಿದ್ದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಮೌಲಾನ ಸಮುದಾಯದ ಧರ್ಮ ಗುರುಗಳಾದ ಶಬ್ಬರ ಮುಪ್ತಿಸಾಬ ಬೋದ್ಲೇಖಾನ, ಅಬ್ದುಲಗಫಸಾಬ ಪಲ್ಲೇದ, ಯುಸೂಫ ಕೊಟ್ಟೂರ, ಆರೀಫ್ ಹುನಗುಂದ, ಕರೀಂ ಸುಣಗಾರ, ಯುಸೂಫ ಡಂಬಳ, ಉಸ್ಮಾನ ಮಾಳೆಕೊಪ್ಪ, ಖಾಲಿದ್ ಕೊಪ್ಪಳ, ಮುನ್ನಾಶೇಖ, ರಾಜೇಸಾಬ ಕಲ್ಮನಿ, ಮುನ್ನಾ ಬಳ್ಳಾರಿ, ರಫೀಕ ಜಮಾಲಖಾನ, ಇರಫಾನ ಡಂಬಳ, ದಾದು ಮುಂಡರಗಿ, ರಿಯಾಜ ಗುಡಿಸಲಮನಿ, ಯಾಸೀನ್ ಖಾಜಿ, ಅಕ್ಬರ ಅತ್ತಾರ, ಯುನೂಸ ಕೌತಾಳ, ಎಂ.ಡಿ. ನದಾಫ, ಎಂ.ಎ. ಅಣ್ಣಿಗೇರಿ, ಸಾಧಿಕ ಗುಳಗುಂದಿ, ನಿಜಾಮ ಹುಬ್ಬಳ್ಳಿ ಮುಂತಾದವರಿದ್ದರು.ಫರ್ವೇಜ್ ಕುಟುಂಬಕ್ಕೆ ಧೈರ್ಯ ಹೇಳಿದ ಎಚ್‌.ಕೆ. ಪಾಟೀಲ

ಡೆತ್‌ ನೋಟ್‌ ಬರೆದಿಟ್ಟು ನಾಪತ್ತೆಯಾಗಿರುವ ಗದಗ ಕೆಆರ್‌ಐಡಿಎಲ್‌ ಎಇಇ ಫರ್ವೇಜ್ ಧಾರವಾಡ ಅವರ ಕುಟುಂಬಕ್ಕೆ ಮಾಜಿ ಸಚಿವ, ಶಾಸಕ ಎಚ್‌.ಕೆ. ಪಾಟೀಲ ಧೈರ್ಯ ತುಂಬಿದರು.ಫರ್ವೇಜ್ ತಂದೆ ಜಾಫರ್ ಅವರಿಗೆ ಫೋನ್‌ ಕರೆಯಲ್ಲಿ ಸಮಾಧಾನದ ಮಾತು ಹೇಳಿ, ಫರ್ವೇಜ್ ಯಾಕೆ ಈ ರೀತಿ ಮಾಡಿದ, ಏನು ಸಮಸ್ಯೆಯಾಗಿತ್ತು ಇದರ ಬಗ್ಗೆ ನಿಮ್ಮ ಜತೆ ಏನಾದರೂ ಮಾತನಾಡಿದ್ದರಾ ಎಂದು ಶಾಸಕ ಎಚ್‌.ಕೆ. ಪಾಟೀಲ ಜಾಫರ್ ಅವರನ್ನ ಕೇಳಿದರು, ಇದಕ್ಕೆ ಉತ್ತರಿಸಿದ ಫರ್ವೇಜ್‌ ತಂದೆ, ಇಲ್ಲ ಸರ್ ಮನೆಲೀ ಈ ಬಗ್ಗೆ ಏನೂ ಹೇಳುತ್ತಿರಲಿಲ್ಲ ಎಂದು ಉತ್ತರಿಸಿದರು.ಅದಕ್ಕೆ ಶಾಸಕರು 15 ದಿನಗಳ ಹಿಂದೆ ರೈತ ಭವನದ್ದೊಂದು ಅಡಿಗಲ್ಲು ಸಮಾರಂಭದಲ್ಲಿ ಭಾರಿ ಹುರುಪಿಂದ ಇದ್ದ ಎಂದು ಹೇಳಿದ್ದಲ್ಲದೇ. ನೀವು ಧೈರ್ಯ ಮಾಡರೀ, ನಿಮಗೆ ಏನಾದರು ಆತ ಫೋನ್‌ ಮಾಡಿದರೆ, ಬಾ ನೀನು ಸುಮ್ನೇ ಅಂತಾ ಹೇಳಿ ಧೈರ್ಯ ತುಂಬರ್ರೀ ಅವನಿಗೆ ಎಂದರು. ಅದಕ್ಕೆ ಜಾಫರ್‌ ಸಾಹೇಬರೇ ನಮ್ಮ ಮಗನ ಹುಡುಕಿ ಕರೆ ತರುವ ಪ್ರಯತ್ನ ಮಾಡಿಸಿ ಎಂದು ಮನವಿ ಮಾಡಿದರು, ಸರಿ ಆಯಿತು ಪೊಲೀಸರಿಗೆ ಹೇಳತೇನಿ, ನೀವು ಧೈರ್ಯದಿಂದ ಇರ್ರೀ ಎಂದು ಶಾಸಕರು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಕ್ರಮ ಅಗತ್ಯ: ರಮಿತಾ
ಮೂಡ್ಲಕಟ್ಟೆ ನರ್ಸಿಂಗ್‌ ಕಾಲೇಜಿನಿಂದ ಆತ್ಮಹತ್ಯೆ ತಡೆ ಮಾಸಾಚರಣೆ