ಭವಿಷ್ಯದ ಮಕ್ಕಳಿಗೆ ಸ್ವಾತಂತ್ರ್ಯದ ತಿರುಳು ತಿಳಿಯಲಿ: ಕೃಷ್ಣೇಗೌಡ

KannadaprabhaNewsNetwork | Published : Aug 16, 2024 12:46 AM

ಸಾರಾಂಶ

ಭಾರತ ಸಂಪತ್ಬರಿತವಾದ ರಾಷ್ಟ್ರ. ಒಳಜಗಳದಿಂದ ಬ್ರಿಟೀಷರು ಆಳ್ವಿಕೆ ನಡೆಸಿ ಗುಲಾಮರಾಗಿಸಿಕೊಂಡರು. ನಮ್ಮ ರಾಷ್ಟ್ರವನ್ನು ಮತ್ತೆ ಪಡೆಯಲು ಸಹಸ್ರಾರು ಮಹನೀಯರು ನೆತ್ತರು ಹರಿಸಿ ಪ್ರಾಣ ತೆತ್ತರು. ಇನ್ನಾದರೂ ನಮ್ಮಲ್ಲಿ ರಾಷ್ಟ್ರಾಭಿಮಾನದ ಜೊತೆ ಸುಭದ್ರ ದೇಶವಾಗಲು ಐಕ್ಯತೆ ಮೂಡಬೇಕಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಭವಿಷ್ಯದ ಎಳೆಮನಸ್ಸುಗಳಿಗೆ ಸ್ವಾತಂತ್ರ್ಯ ದಿನ, ಮಡಿದ ಮಹಾನೀಯರ ಪರಿಚಯ ಮಾಡಿಕೊಡಬೇಕಿದೆ ಎಂದು ಕೆಪಿಎಸ್ ಶಾಲೆ ಕಮಿಟಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಕೆಪಿಎಸ್ ಶಾಲಾವರಣದಲ್ಲಿ 78ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತ ಸಂಪತ್ಬರಿತವಾದ ರಾಷ್ಟ್ರ. ಒಳಜಗಳದಿಂದ ಬ್ರಿಟೀಷರು ಆಳ್ವಿಕೆ ನಡೆಸಿ ಗುಲಾಮರಾಗಿಸಿಕೊಂಡರು ಎಂದರು.

ನಮ್ಮ ರಾಷ್ಟ್ರವನ್ನು ಮತ್ತೆ ಪಡೆಯಲು ಸಹಸ್ರಾರು ಮಹನೀಯರು ನೆತ್ತರು ಹರಿಸಿ ಪ್ರಾಣ ತೆತ್ತರು. ಇನ್ನಾದರೂ ನಮ್ಮಲ್ಲಿ ರಾಷ್ಟ್ರಾಭಿಮಾನದ ಜೊತೆ ಸುಭದ್ರ ದೇಶವಾಗಲು ಐಕ್ಯತೆ ಮೂಡಬೇಕಿದೆ ಎಂದರು.

ಕಪಿಸಿಸಿ ಸದಸ್ಯ ಸುರೇಶ್ ಮಾತನಾಡಿ, ನಮ್ಮ ನೆಮ್ಮದಿ ಬದುಕಿಗಾಗಿ ಪ್ರಾಣತೆತ್ತ ಹುತಾತ್ಮರನ್ನು ಸ್ಮರಿಸಬೇಕು. ಮಕ್ಕಳ ಮನಸ್ಸಲ್ಲಿ ದೇಶಾಭಿಮಾನದ ಶಿಕ್ಷಣ ಕಲಿಸಿಕೊಡಬೇಕಿದೆ ಎಂದರು.

ಇದೇ ವೇಳೆ ಕೆಪಿಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆ, ಪ್ರಾಥಮಿಕ ಶಾಲೆ, ನರ್ಸರಿ ವಿಭಾಗ, ರೋಹಿತ್‌ ಕಾನ್ವೆಂಟ್, ಕೇಂಬ್ರಿಡ್ಜ್ ಶಾಲೆ, ನವೀನ, ವಿನಯ್‌ಕಾನ್ವೆಂಟ್, ರಾಯಲ್, ದ್ರೋಣಾಲಯ, ಹೊಯ್ಸಳ ಮತ್ತಿತರ ಶಾಲೆ ಮಕ್ಕಳು ತ್ರಿವರ್ಣಧ್ವಜ ಹಿಡಿದು ರಾಷ್ಟ್ರ ನಾಯಕ ಸ್ಮರಣೆ, ಜೈಕಾರ ಹಾಕುತ್ತ ಆಕರ್ಷಕ ಪಥಸಂಚಲನ ನಡೆಸಿದರು.

ವಿವಿಧ ಶಾಲಾ ಮಕ್ಕಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಗೌರವಿಸಲಾಯಿತು. ವಿವಿಧ ಸಂಘ-ಸಂಸ್ಥೆಗಳಿಂದ ಮಕ್ಕಳಿಗೆ ಸಿಹಿ ವಿತರಣೆ ನಡೆಯಿತು.

ಈ ವೇಳೆ ಗ್ರಾಪಂ ಉಪಾಧ್ಯಕ್ಷೆ ಜ್ಯೋತಿ ದಯಾನಂದ್, ಪ್ರಾಂಶುಪಾಲ ದೊರೆಸ್ವಾಮಿ, ಉಪಪ್ರಾಂಶುಪಾಲ ಚಲುವನಾರಾಯಣ ಸ್ವಾಮಿ, ಜೆಡಿಎಸ್ ಹೋಬಳಿ ಅಧ್ಯಕ್ಷ ಕಾಯಿ ಮಂಜೇಗೌಡ, ಮಾಜಿ ಯೋಧ ಲೋಕೇಶ್, ಮುಖಂಡರಾದ ಶೇಖರ್, ಸುರೇಶ್‌ಬಾಬು, ಎಲ್.ಪಿ.ನಂಜಪ್ಪ, ಮಹದೇವ, ವಕೀಲ ಎಲ್.ಕೆ.ಕಾಳೇಗೌಡ, ರೈತಸಂಘ ನಾರಾಯಣಸ್ವಾಮಿ, ಜವರಾಯಿಗೌಡ, ಸಾಸಲು ನಂಜಪ್ಪ, ಎನ್‌ಎಸ್‌ಎಸ್‌ಘಟಕಾಧಿಕಾರಿ ಕುಮಾರಸ್ವಾಮಿ, ಎನ್‌ಸಿಸಿ ಅಧಿಕಾರಿ ಎಸ್.ಎಂ.ಬಸವರಾಜು ಉಪಸ್ಥಿತರಿದ್ದರು.

Share this article