ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಅವರು, ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಮುಂಗಾರು ಬೆಳೆ ಸಮೀಕ್ಷೆ 2024-25ನೇ ಸಾಲಿನ ಮೊಬೈಲ್ ಆಪ್ ಮಾಹಿತಿ ರಥಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರ ಗ್ರಾಮೀಣ ಭಾಗಗಳಲ್ಲಿ ಹಲವಾರು ತಾಂತ್ರಿಕ ಸಮಸ್ಯೆಯಿಂದ ರೈತರ ಜಮೀನಲ್ಲಿರುವ ಬೆಳಗಳನ್ನು ದಾಖಲು ಮಾಡುವಲ್ಲಿ ಅನೇಕ ತಪ್ಪುಗಳು ಕಂಡುಬಂದಿವೆ. ಇದರಿಂದ ರೈತ ಸಂಕಷ್ಟಕ್ಕೆ ಈಡಾಗುತ್ತಾನೆ. ಕೃಷಿ ಇಲಾಖೆ ರೈತರ ಪಾಲಿಗೆ ಬೆಳಕಾಗಬೇಕೆಂದರು.
ಸಹಾಯಕ ಕೃಷಿ ನಿರ್ದೇಶಕ ಜೆ. ಅಶೋಕ್ ಮಾತನಾಡಿ, ತಾಲೂಕಿನಾದ್ಯಂತ ಎರಡು ದಿನಗಳ ಹಿಂದೆ ಉತ್ತಮ ಮಳೆಯಾಗಿದೆ. ಕುಂಠಿತಗೊಂಡ ಬಿತ್ತನೆ ಕಾರ್ಯಕ್ಕೆ ಮರುಚಾಲನೆ ದೊರೆತಂತಾಗಿದೆ. ಕೃಷಿ ಇಲಾಖೆ ಮುಂಗಾರು ಬೆಳೆ ಸಮೀಕ್ಷೆಗೆ ನೂತನ ತಾಂತ್ರಿಕತೆಯಿಂದ ಕೂಡಿದ ಆಪ್ ಅನ್ನು ಬಳಕೆಗೆ ತಂದಿದೆ. ಇಲಾಖೆಯ ವಾಹನದ ಮೂಲಕವೇ ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ದಾಖಲಾತಿಗಳ ಜಾಗೃತಿ ಮೂಡಿಸಲಾಗುವುದು ಎಂದರು.ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಗುಜ್ಜಾರಪ್ಪ, ಚೌಳೂರು ಬಸವರಾಜು, ಇಒ ಶಶಿಧರ, ಬಿಇಒ ಕೆ.ಎಸ್. ಸುರೇಶ್, ಡಿವೈಎಸ್ಪಿ ಟಿ.ಬಿ.ರಾಜಣ್ಣ, ಪೌರಾಯುಕ್ತ ಎಚ್.ಜಿ.ಜಗರೆಡ್ಡಿ, ನಗರಸಭಾ ಸದಸ್ಯ ಎಂ.ಜೆ. ರಾಘವೇಂದ್ರ, ಟಿ. ಮಲ್ಲಿಕಾರ್ಜುನ್, ಎನ್. ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.