ದೇಶ ನಿರ್ಮಾಣಕ್ಕೆ ಸೌಹಾರ್ದತೆ ಮೂಲ ಮಂತ್ರವಾಗಲಿ: ಮಹಾದೇವ ಸನಮುರೆ

KannadaprabhaNewsNetwork |  
Published : Aug 16, 2024, 12:54 AM IST
ಮೂಡಲಗಿ ಪಟ್ಟಣದಲ್ಲಿ ಜರುಗಿದ ಸ್ವಾತಂತ್ರೋತ್ಸವದ ಸಮಾರಂಭದಲ್ಲಿ ಮೂಡಲಗಿ ವಲಯದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಸಾಧಕರಾದ  ವೀಣಾಶ್ರೀ ಸತ್ತಿಗೇರಿ, ಪಲ್ಲವಿ ಬುದ್ನಿ ಅವರಿಗೆ  ಡಾ.ಪ್ರದೀಪ ಸುಭಾಸ ಸೋನವಾಲಕರ ಅವರು ಕೊಡಮಾಡು ಒಂದು ಲಕ್ಷ ರೂ  ನಗದು ಬಹುಮಾನದ ಚೆಕ್ಕನ್ನು ವಿತರಿಸಿ ಸತ್ಕರಿಸಲ್ಲಾಯಿತು. | Kannada Prabha

ಸಾರಾಂಶ

ಭಾರತದ ಸ್ವಾತಂತ್ರ್ಯವನ್ನು ಪಡೆಯುವಲ್ಲಿ ಆಗಿರುವ ಹೋರಾಟ, ತ್ಯಾಗ, ಬಲಿದಾನ ಇವೆಲ್ಲವನ್ನು ನಿತ್ಯ ಸ್ಮರಿಸಿಕೊಂಡು ಸದೃಢ ದೇಶ ಕಟ್ಟುವುದಕ್ಕೆ ಸೌಹಾರ್ದತೆ ಮೂಲ ಮಂತ್ರವಾಗಬೇಕು ಎಂದು ಮೂಡಲಗಿ ತಹಸೀಲ್ದಾರ್ ಮಹಾದೇವ ಸನಮುರೆ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಭಾರತದ ಸ್ವಾತಂತ್ರ್ಯವನ್ನು ಪಡೆಯುವಲ್ಲಿ ಆಗಿರುವ ಹೋರಾಟ, ತ್ಯಾಗ, ಬಲಿದಾನ ಇವೆಲ್ಲವನ್ನು ನಿತ್ಯ ಸ್ಮರಿಸಿಕೊಂಡು ಸದೃಢ ದೇಶ ಕಟ್ಟುವುದಕ್ಕೆ ಸೌಹಾರ್ದತೆ ಮೂಲ ಮಂತ್ರವಾಗಬೇಕು ಎಂದು ಮೂಡಲಗಿ ತಹಸೀಲ್ದಾರ್ ಮಹಾದೇವ ಸನಮುರೆ ಹೇಳಿದರು.

ತಾಲೂಕು ಆಡಳಿತದಿಂದ ಪಟ್ಟಣದ ಬಸವರಂಗ ಮಂಟಪದಲ್ಲಿ ಆಯೋಜಿಸಿದ್ದ 78ನೇ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಮಾತನಾಡಿ, ಭಾರತ ಕೃಷಿ, ಕೈಗಾರಿಕೆ, ತಂತ್ರಜ್ಞಾನ, ಬಾಹ್ಯಾಕಾಶ, ಕಲೆ, ಸಾಹಿತ್ಯ, ಸಂಸ್ಕೃತಿಯಲ್ಲಿ ಇಡೀ ಜಗತ್ತು ಬೆರಗಾಗುವಂತೆ ಅಗಾಧವಾಗಿ ಬೆಳೆದು ನಿಂತಿರುವುದನ್ನು ನಾವೆಲ್ಲ ಹೆಮ್ಮೆಪಡಬೇಕು ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಎಸ್.ಆರ್. ಸೋನವಾಲಕರ, ಬಿಇಒ ಅಜಿತ್ ಮನ್ನಿಕೇರಿ, ಕೆ.ಎಚ್. ಸೋನವಾಲಕರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ಗುಬಚಿ, ಉಮಾಬಾಯಿ ಸ್ವಾಮಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಂದ್ಯಾ ಈಟಿ ಮಾತನಾಡಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಸರ್ಕಾರಿ ಶಾಲೆಯಲ್ಲಿ ಕಲಿಯುವ ಹೆಣ್ಣು ಮಕ್ಕಳಿಗೆ ಮೂಡಲಗಿಯ ಪಟ್ಟಣದ ಸ್ವಾತಂತ್ರ ಸೇನಾನಿ ದಿ.ರಾವಜೆಪ್ಪ ಬಾಲಪ್ಪ ಸೋನವಾಲಕರ ಅವರ ಸ್ಮಣಾರ್ಥವಾಗಿ ವೈದ್ಯ ಡಾ.ಪ್ರದೀಪ ಸುಭಾಸ ಸೋನವಾಲಕರ ಕೊಡಮಾಡುವ ಒಂದು ₹1ಲಕ್ಷ ನಗದು ಬಹುಮಾನವನ್ನು ಮೂಡಲಗಿಯ ಕೆ.ಎಚ್. ಸೋನವಾಲಕರ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಪಲ್ಲವಿ ಪಾಂಡು ಬುದ್ನಿ, ಹಾಗೂ ಶಿಂಧಿಕುರಬೇಟ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ವೀಣಾಶ್ರೀ ಸಿದ್ದಪ್ಪ ಸತ್ತಿಗೇರಿಗೆ ತಲಾ ₹50 ಸಾವಿರ ನಗದು ಬಹುಮಾನ ಚೆಕ್‌ಗಳನ್ನು ಎಸ್.ಆರ್. ಸೋನವಾಲಕರ ವಿತರಿಸಿ ಸನ್ಮಾನಿಸಿದರು.

ಬೆಳಗ್ಗೆ ಪಟ್ಟಣದ ಎಲ್ಲ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಪುರಸಭೆಯಿಂದ ಪ್ರಾರಂಭಗೊಂಡ ಪ್ರಭಾತಪೇರಿಯ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಬಸವರಂಗ ಮಂಟಪದಲ್ಲಿ ಬಳಿ ಸಮಾವೇಶಗೊಂಡಿತು.

ವೇದಿಕೆಯಲ್ಲಿ ತಾಪಂ ಇಒ ಎಫ್.ಎಸ್. ಚಿನ್ನನವರ, ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಸಿಪಿಐ ಶ್ರೀಶೈಲ್ ಬ್ಯಾಕೂಡ, ಪಿಎಸ್‌ಐ ಪೂಜೇರಿ, ಸಿಡಿಪಿಒ ಯಲ್ಲಪ್ಪ ಗದಾಡಿ, ಹೆಸ್ಕಾಂ ಎಇಇ ಎಂ.ಎಸ್. ನಾಗಣ್ಣವರ, ಕೆ.ಟಿ. ಗಾಣಿಗೇರ, ಪುರಸಭೆ ಸದಸ್ಯರು ಹಾಗೂ ಗಣ್ಯರು ಇದ್ದರು. ವಿವಿಧ ಶಾಲಾ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ಜರುಗಿದವು. ಬಿಇಒ ಕಚೇರಿಯ ಶಿಕ್ಷಣ ಸಂಯೋಜಕ ಕೆ.ಬಸವರಾಜ ಮತ್ತು ಪುರಸಭೆ ಆರೋಗ್ಯಾಧಿಕಾರಿ ಚಿದಾನಂದ ಮುಗಳಖೋಡ ನಿರೂಪಿಸಿದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ