ಹಾನಗಲ್ಲ: ಕಾಡು ಹಾಗೂ ಕಾಡಿನ ಉತ್ಪನ್ನಗಳನ್ನು ಪರಿಸರಕ್ಕೆ ಧಕ್ಕೆಯಾಗದಂತೆ ಬಳಸಲು ಮನುಷ್ಯನಿಗೆ ಯಾರೂ ಆತಂಕ ಮಾಡುವುದಿಲ್ಲ. ಆದರೆ ಪರಿಸರವನ್ನೇ ನಾಶ ಮಾಡುವ ಉಪದ್ರವಿ ಬುದ್ಧಿಯಿಂದ ಮನುಷ್ಯ ಹೊರಬರಬೇಕು ಎಂದು ಕೃಷಿ ಇಲಾಖೆ ಸಹಾಯಕ ತಾಂತ್ರಿಕ ಅಧಿಕಾರಿ ಮಾಂತೇಶ ನಂದಿಕೊಪ್ಪ ಹೇಳಿದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಲೊಯೋಲಾ ವಿಕಾಸ ಕೇಂದ್ರದ ಫಿರಪ್ಪ ಶಿರ್ಶಿ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಪ್ರೀತಿಸುವಂತೆ ಪರಿಸರವನ್ನು ಪ್ರೀತಿಸಬೇಕು. ನಮಗೆ ಪರಿಸರ ಏನು ಕೊಟ್ಟಿದೆ ಎಂದು ಕೇಳುವುದಕ್ಕಿಂತ ನಾವು ಪರಿಸರಕ್ಕೆ ಏನು ಕೊಟ್ಟದ್ದೇವೆ ಎಂದು ಕೇಳಿಕೊಳ್ಳಬೇಕಾಗಿದೆ. ಮನೆಯಲ್ಲಿ ಜನ್ಮದಿನ, ಮದುವೆ, ಗೃಹಪ್ರವೇಶ, ವಾಹನಗಳ ಖರೀದಿ ಮಾಡಿದಾಗ ನೆನಪಿಗಾಗಿ ಸಸಿಗಳನ್ನು ನೆಟ್ಟು ಪರಿಸರ ರಕ್ಷಿಸಿ ಎಂದರು.
ಇದೇ ಸಂದರ್ಭದಲ್ಲಿ 30 ಜನವೇದಿಕೆ ನಾಯಕರಿಗೆ ಸಂಪಿಗೆ, ನಿಂಬು, ಕರಿಬೇವು, ಶ್ರೀಗಂಧದ ಗಿಡಗಳನ್ನು ವಿತರಿಸಲಾಯಿತು. ಗೋಪಾಲ ಸುಬ್ಬಣ್ಣನವರ, ಎಸ್‌ಡಿಎಂಸಿ ಅಧ್ಯಕ್ಷೆ ಹನುಮವ್ವ ಹೊಸಮನಿ, ಜನವೇದಿಕೆ ನಾಯಕರಾದ ಮಂಜಪ್ಪ ವಾಲ್ಮೀಕಿ, ರವಿ ಬೆಳವತ್ತಿ, ರಾಮಣ್ಣ ಮುದ್ದಕ್ಕನವರ, ಶಾರದಾ ದೊಡ್ಡಿರಪ್ಪನವರ, ಹೊನ್ನವ್ವ ಮೆಳಾಗಟ್ಟಿ, ಚಂದ್ರು ಚೌಡಣ್ಣನವರ, ಪದ್ಮಾ ಮಾಂಗ್ಲೇನವರ, ರಮೇಶ ಬಾರ್ಕಿ, ಹೊನ್ನಮ್ಮ ವೈ.ಎಸ್. ಇದ್ದರು.ಮಕ್ಕಳು ಸಂಸ್ಥೆಗೆ ಹೆಸರು ತರುವ ಕಾರ್ಯ ಮಾಡಲಿಶಿಗ್ಗಾಂವಿ: ಶಾಲೆಯ ಬೆಳವಣಿಗೆಯು ಗ್ರಾಮಸ್ಥರು ಹಾಗೂ ಮಕ್ಕಳ ಮೇಲಿದ್ದು, ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಂಸ್ಥೆಗೆ ಹೆಸರು ತರುವ ಕಾರ್ಯ ಮಾಡಬೇಕು ಎಂದು ನೂತನ ಅಧ್ಯಕ್ಷ ಹನುಮರೆಡ್ಡಿ ನಡುವಿನಮನಿ ತಿಳಿಸಿದರು.ತಾಲೂಕಿನ ದುಂಡಶಿ ಅರಟಾಳ ಗ್ರಾಮದ ಶ್ರೀಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ನಾಗರಿಕರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವು ಜೀವನಕ್ಕೆ ಬುನಾದಿ ಇದ್ದಂತೆ ಎಂದರು.ನಿವೃತ್ತ ಮುಖ್ಯೋಪಾಧ್ಯಾಯ ಎಸ್.ವಿ. ಕಲ್ಲೊಳ್ಳಿಮಠ ಮಾತನಾಡಿ, ಪ್ರತಿವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದವರಿಗೆ ₹10,000 ಬಹುಮಾನ ನೀಡಲಾಗುವುದು ಎಂದರು.
ದುಂಡಶಿ ಗ್ರಾಪಂ ಮಾಜಿ ಅಧ್ಯಕ್ಷ ಪ್ರಕಾಶ ಪಾಸಾರ ಮಾತನಾಡಿದರು. ಈ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಶಿವಾನಂದ ಗಾಣಿಗೇರ, ಉಪಾಧ್ಯಕ್ಷ ಯಲ್ಲಪ್ಪ ಹೊಸಮನಿ, ಗುರುನಗೌಡ ಪಾಟೀಲ, ಧರನೇಂದ್ರ ಪುಟ್ಟಣ್ಣವರ, ಸಂತೋಷ ಲಾಭಗೊಂಡ, ಪಾಯಪ್ಪ ಬ್ಯಾಟಿ, ಮುಖ್ಯೋಪಾಧ್ಯಾಯನಿ ಜೆ.ಆರ್. ಪರಮೇಕರ, ಎಸ್.ವಿ. ಕಲ್ಲೊಳ್ಳಿಮಠ, ಶೇಖರಯ್ಯ ಹಿರೇಮಠ, ವೀರಣ್ಣ ಸಮಗೊಂಡ, ಎಂ.ಎಸ್. ಹೊಸಮನಿ, ಯಲ್ಲಪ್ಪ ಬಾರಕೇರ, ಪ್ರಶಾಂತ ಬಿದರಳ್ಳಿ, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಕ್ಷಕ ಬಿ.ಆರ್. ದೇಸಾಯಿ ನಿರೂಪಿಸಿ, ವಂದಿಸಿದರು.