ಮಾನವನೇ ತಂತ್ರಜ್ಞಾನದಂತೆ ಕಾರ್ಯ ನಿರ್ವಹಿಸಲಿ

KannadaprabhaNewsNetwork |  
Published : Jul 22, 2024, 01:21 AM IST
ಸಮಾರೋಪ ಸಮಾರಂಭ | Kannada Prabha

ಸಾರಾಂಶ

ತಂತ್ರಜ್ಞಾನವನ್ನು ಅವಲಂಬಿಸಿಕೊಳ್ಳುವುದಕ್ಕಿಂತಲೂ ಮಾನವನೇ ತಂತ್ರಜ್ಞಾನದಂತೆ ಕಾರ್ಯನಿರ್ವಹಿಸುವುದು ಉತ್ತಮ

ಕನ್ನಡಪ್ರಭ ವಾರ್ತೆ ತುಮಕೂರುತಂತ್ರಜ್ಞಾನವನ್ನು ಅವಲಂಬಿಸಿಕೊಳ್ಳುವುದಕ್ಕಿಂತಲೂ ಮಾನವನೇ ತಂತ್ರಜ್ಞಾನದಂತೆ ಕಾರ್ಯನಿರ್ವಹಿಸುವುದು ಉತ್ತಮ ಎಂದು ಬೆಂಗಳೂರು ಉತ್ತರ ವಿವಿಯ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಹೇಳಿದರು.ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಭಾರತೀಯ ಸಂವಹನ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಪತ್ರಿಕೋದ್ಯಮ ಮತ್ತು ಸಂವಹನ ಅಧ್ಯಾಪಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ‘ವಿಕಸಿತ್ ಭಾರತ್ 2024: ಭಾರತದ ಸಮಗ್ರ ಅಭಿವೃದ್ಧಿಯಲ್ಲಿ ಡಿಜಿಟಲ್‌ ರೂಪಾಂತರ ಮತ್ತು ಮಾಧ್ಯಮ ಸಂಗಮದ ಪಾತ್ರ’ ಕುರಿತ ನವದೆಹಲಿಯ ಭಾರತೀಯ ಸಮಾಜ ವಿಜ್ಞಾನ ಸಂಶೋಧನ ಪರಿಷತ್ (ಐಸಿಎಸ್‌ಎಸ್‌ಆರ್) ಪ್ರಾಯೋಜಿತ ಬಹುಶಾಸ್ತ್ರೀಯ ರಾಷ್ಟ್ರೀಯ ಸಮ್ಮೇಳನ ಹಾಗೂ‘ಇಂಪ್ರೆಶನ್-2047’ಮಾಧ್ಯಮ ಹಬ್ಬದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಮಾಧ್ಯಮ ಅಧ್ಯಯನದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ಜ್ಞಾನಕ್ಕಿಂತಲೂ ಹೆಚ್ಚಾಗಿ ಪ್ರಾಯೋಗಿಕ ಜ್ಞಾನ ಅವಶ್ಯಕವಾಗಿದೆ. ವಿದ್ಯಾರ್ಥಿಗಳಿಗೆ ಸೃಜನಶೀಲ ಮನೋಭಾವ ಮತ್ತು ಕೌಶಲ್ಯವು ಪ್ರಥಮ ಅಗತ್ಯಎಂದರು.ಕೊಪ್ಪಳ ವಿವಿಯ ಕುಲಪತಿ ಪ್ರೊ. ಬಿ. ಕೆ.ರವಿ ಮಾತನಾಡಿ, ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳು ಭಾಗವಹಿಸಬೇಕು. ಶಿಸ್ತು, ಸಂಯಮ, ತಾಳ್ಮೆ ಜೀವನ ಸಾಧನೆಗೆ ಸೂತ್ರ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಯಾವುದೇ ಸಂದರ್ಭದಲ್ಲೂ ಧೈರ್ಯ, ತಾಳ್ಮೆಯಿಂದೆ ಸಂದರ್ಭಗಳನ್ನು ಉತ್ತಮವಾಗಿ ನಿಭಾಯಿಸುವವನೆ ಸೃಜನಶೀಲ ವಿದ್ಯಾರ್ಥಿ. ವಿದ್ಯಾರ್ಥಿಗಳಲ್ಲಿ ಪಠ್ಯೇತರ ಜ್ಞಾನ ಅವಶ್ಯಕವಾಗಿದೆ ಎಂದರು.ಪತ್ರಕರ್ತ ಎಸ್. ನಾಗಣ್ಣ ಮಾತನಾಡಿ, ಮಾಧ್ಯಮ ಪತನದ ವ್ಯವಸ್ಥೆಗೆ ತಲುಪಿದೆ.ವಿದ್ಯಾರ್ಥಿಗಳಿಲ್ಲಿ ಭಾಷೆ, ಬರೆವಣಿಗೆ, ಸಂವಹನ ಕೌಶಲ್ಯವಿಲ್ಲ. ಇದರಿಂದ ಭಾರತ ಕೊಳ್ಳುಬಾಕ ದೇಶವಾಗಿದೆ ಎಂದರು.ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರತಿನಿಧಿಗಳು 100 ಕ್ಕೂ ಹೆಚ್ಚು ಸಂಶೋಧನ ಪ್ರಬಂಧಗಳನ್ನು ಮಂಡಿಸಲಾಯಿತು. ಮಾಧ್ಯಮ ಹಬ್ಬದ ಅಂಗವಾಗಿ ರಾಜ್ಯದ ವಿವಿಧ ಕಾಲೇಜು ಹಾಗೂ ವಿವಿಗಳ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆಗಳು ನಡೆದವು.ರಾಜ್ಯದ ವಿವಿಧೆಡೆಯಿಂದ ಆಗಮಿಸಿದ 20 ಕ್ಕೂ ಹೆಚ್ಚು ಕಾಲೇಜಿನ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎರಡು ದಿನಗಳ ಮಾಧ್ಯಮ ಹಬ್ಬದಲ್ಲಿ ಭಾಗವಹಿಸಿದ್ದರು. 11 ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.‘ಇಂಪ್ರೆಶನ್-2024 ’ ಮಾಧ್ಯಮ ಹಬ್ಬದ ಅಂಗವಾಗಿ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ಬೆಳಗಾವಿಯ ಕೆಎಲ್‌ಇ ಲಿಂಗರಾಜು ಕಾಲೇಜು ಸಮಗ್ರ ಚಾಂಪಿಯನ್‌ಶಿಪ್ ಪ್ರಶಸ್ತಿ ಪಡೆದುಕೊಂಡಿತು.ಪೋಸ್ಟರ್ ವಿನ್ಯಾಸದಲ್ಲಿ ಅಪೂರ್ವ ಪ್ರಥಮ ಬಹುಮಾನ ಹಾಗೂ ಚರ್ಚಾ ಸ್ಪರ್ಧೆಯಲ್ಲಿ ಸ್ವಾತಿ ಮತ್ತು ಸಮೀದ್ ಪ್ರಥಮ ಬಹುಮಾನ ಪಡೆದುಕೊಂಡರೆ, ನುಡಿಚಿತ್ರ ಬರೆವಣಿಗೆಯಲ್ಲಿ ಪೂಜ ದ್ವಿತೀಯ ಬಹುಮಾನ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಠ್ಠಲ್ ಮತ್ತು ಮುರಳೀಧರ್ ತೃತೀಯ ತಮ್ಮದಾಗಿಸಿಕೊಂಡರು. ಸಮ್ಮೇಳನ ಹಾಗೂ ಮಾಧ್ಯಮ ಹಬ್ಬದ ಸಂಘಟನಾ ಕಾರ್ಯದರ್ಶಿ ಡಾ.ಸಿಬಂತಿ ಪದ್ಮನಾಭ ಕೆ. ವಿ.,ಭೋಪಾಲ್‌ನ ಮಖನ್‌ಲಾಲ್‌ಚತುರ್ವೇದಿ ಪತ್ರಿಕೋದ್ಯಮ ವಿಶ್ವವಿದ್ಯಾನಿಲಯದ ಕುಲಪತಿಪ್ರೊ. ಕೆ.ಜಿ. ಸುರೇಶ್, ಭಾರತೀಯ ಸಂವಹನ ಕಾಂಗ್ರೆಸ್‌ನಅಧ್ಯಕ್ಷ, ಪಶ್ಚಿಮ ಬಂಗಾಳದ ವಿಶ್ವಭಾರತಿ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಪ್ರಾಧ್ಯಾಪಕ ಪ್ರೊ.ಬಿಪ್ಲಬ್ ಲೋಹೋ ಚೌಧರಿ, ಒಡಿಶಾದಉತ್ಕಲ್ ವಿಶ್ವವಿದ್ಯಾನಿಲಯದ ಮಾಧ್ಯಮಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ.ಉಪೇಂದ್ರ ಪಾಢಿ, ಉದ್ಯಮಿಗಳಾದ ಆರ್.ಎಲ್. ರಮೇಶ್ ಬಾಬು, ಎಚ್. ಜಿ. ಚಂದ್ರಶೇಖರ್, ವಿವಿ ಕುಲಸಚಿವೆ ನಾಹಿದಾ ಜಮ್‌ ಜಮ್‌ ಉಪಸ್ಥಿತರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ