ಭಾರತ ಸರ್ವಜನಾಂಗದ ಶಾಂತಿಯ ತೋಟವಾಗಲಿ

KannadaprabhaNewsNetwork |  
Published : Oct 08, 2023, 12:02 AM IST
ಫೋಟೊ 07 ಎಚ್,ಎನ್,ಎಮ್, 01 ಹನುಮಸಾಗರದ ಹಳೆ ಬಸ್ ನಿಲ್ದಾಣದ ಶಾಲಾ ಅವರಣದಲ್ಲಿ ಶುಕ್ರವಾರ ಸಿರಿಯತ್ ಅಭಿಯಾನ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಇವರ ಆಶ್ರಯದಲ್ಲಿ ಸಮಾನತೆಯ ಸಮಾಜದ ಶಿಲ್ಪ ಪ್ರವಾದಿ ಮಹಮ್ಮದ್ ಅವರ ವಿಷಯ ಕುರಿತು ಮಾತ ನಾಡಿದರು. | Kannada Prabha

ಸಾರಾಂಶ

ಪ್ರವಾದಿ ಅವರ ತತ್ವಗಳು ಸಮಾನತೆ ಸಾರುತ್ತವೆ. ಪ್ರವಾದಿಯವರ ತತ್ವಗಳು ಎಲ್ಲರಿಗೂ ಮುಟ್ಟಿಸುವ ಕಾರ್ಯ ಸೀರತ್‌ ಅಭಿಯಾನ ಅಡಿಯಲ್ಲಿ ಮಾಡಲಾಗುತ್ತಿದೆ. ಪ್ರವಾದಿಯರು ಅನಾಥವಾಗಿ ಹುಟ್ಟಿ ಬೆಳೆದು ಜಗತ್ತಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಉನ್ನತ ಹುದ್ದೆಯಲ್ಲಿರುವ ತಂದೆ-ತಾಯಿಗಳು ಅನಾಥಾಶ್ರಮದಲ್ಲಿ ಬದುಕುತ್ತಿದ್ದಾರೆ. ಶಿಕ್ಷಣವು ಸಂಸ್ಕಾರದಿಂದ ಕೂಡಿರಬೇಕು.

ಹನುಮಸಾಗರ:ಪ್ರವಾದಿ ಮುಹಮ್ಮದ್ ಪೈಗಂಬರ್ ಸಮಾನತೆ ಸಾರಿದವರು ಎಂದು ಪ್ರವಚನಕಾರ ಲಾಲ್ ಹುಸೇನ ಕಂದಗಲ್ಲ ಹೇಳಿದರು.ಗ್ರಾಮದ ಹಳೆ ಬಸ್ ನಿಲ್ದಾಣದ ಶಾಲಾ ಅವರಣದಲ್ಲಿ ಶುಕ್ರವಾರ ಸೀರತ್‌ ಅಭಿಯಾನ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಆಶ್ರಯದಲ್ಲಿ ಸಮಾನತೆಯ ಶಿಲ್ಪಿ ಪ್ರವಾದಿ ಮಹಮ್ಮದರ ಕುರಿತು ಮಾತನಾಡಿದರು.ಪ್ರವಾದಿ ಅವರ ತತ್ವಗಳು ಸಮಾನತೆ ಸಾರುತ್ತವೆ. ಪ್ರವಾದಿಯವರ ತತ್ವಗಳು ಎಲ್ಲರಿಗೂ ಮುಟ್ಟಿಸುವ ಕಾರ್ಯ ಸೀರತ್‌ ಅಭಿಯಾನ ಅಡಿಯಲ್ಲಿ ಮಾಡಲಾಗುತ್ತಿದೆ. ಪ್ರವಾದಿಯರು ಅನಾಥವಾಗಿ ಹುಟ್ಟಿ ಬೆಳೆದು ಜಗತ್ತಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಉನ್ನತ ಹುದ್ದೆಯಲ್ಲಿರುವ ತಂದೆ-ತಾಯಿಗಳು ಅನಾಥಾಶ್ರಮದಲ್ಲಿ ಬದುಕುತ್ತಿದ್ದಾರೆ. ಶಿಕ್ಷಣವು ಸಂಸ್ಕಾರದಿಂದ ಕೂಡಿರಬೇಕು. ಸಂಸ್ಕಾರ ಇಲ್ಲದೇ ವಿದ್ಯೆ ಕಲಿತವರು ರಾಕ್ಷಸ ಪ್ರವೃತ್ತಿಯುಳ್ಳವರು. ಮಾನವ ಕುಲ ಪ್ರೀತಿಸುವ ಹೃದಯವಂತಿಕೆ ಹೊಂದಿರಬೆಕು. ಹಿಂದಿನ ಕಾಲದಲ್ಲಿ ಅತಿಹೆಚ್ಚು ಗುಲಾಮಗಿರಿಯಲ್ಲಿ ಬದುಕುತ್ತಿದ್ದರು. ಸವರ್ಣೀಯರನ್ನು ಕೀಳಾಗಿ ಕಾಣುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗಿನ ಸ್ಥಿತಿಯಲ್ಲಿ ಸಮಾನತೆ ಸಾರಿದವರು. ಮನುಷ್ಯನಿಗೆ ಇಂದಿನ ದಿನಗಳಲ್ಲಿ ಶಾಂತಿ, ಸಹಬಾಳ್ವೆ, ಸಮಾನತೆ, ಸ್ವಾತಂತ್ರ್ಯದಿಂದ ಬದುಕು ಕಟ್ಟಿಕೊಳ್ಳಬೇಕು. ಕೊಡಲು ನಿಮ್ಮಲ್ಲಿ ಏನೂ ಇರದ್ದಿದ್ದರೂ ನಿಮ್ಮ ಪ್ರೀತಿಯನ್ನು ಹಂಚಿ. ಇಂದಿನ ದಿನಮಾನದಲ್ಲಿ ಜಾತಿಗಣನೆ ಮಾಡಲಾಗುತ್ತಿದೆ. ಅದನ್ನು ಬಿಟ್ಟು ಸರ್ವಜನಾಂಗದ ಶಾಂತಿಯ ತೋಟವಾಗಬೇಕು. ನಮ್ಮ ಭಾರತ, ನಮ್ಮ ಕರ್ನಾಟದಲ್ಲಿ ಎಲ್ಲರನ್ನು ಸ್ವಾಗತಿಸಿ ಸಮಾನತೆಯನ್ನು ನೀಡಿದವರು ಪ್ರವಾದಿಯವರು ಎಂದರು.ಕುದರಿಮೋತಿ ಮೈಸೂರು ಸಂಸ್ಥಾನ ಮಠದ ವಿಜಯಮಹಾಂತೇಶ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಜಾತಿಯತೆ ಹೊಡೆದು ಹಾಕಿದವರು ಬಸವಣ್ಣನವರು, ಪ್ರವಾದಿಯವರು ಒಂದೇ ಮಾರ್ಗ ಹೇಳಿಕೊಟ್ಟವರು. ಜಾತಿಯನ್ನು ನಾವು ಮಾಡ್ದಿಕೊಂಡಿದ್ದೇವೆ. ಜಾತಿವಾದಿಗಳಾಗದೇ ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು. ಕೆಟ್ಟ ಭಾವನೆಗಳು ಹೊಗಬೇಕು ಜಮಾತೆ ಎಂದರು.ಇಸ್ಲಾಮಿಕ್ ಜಿಲ್ಲಾ ಸಂಚಾಲಕ ಮಹಮ್ಮದ ದಿಲಾವರ ಅಂಬರ್ ಖಾನ್, ಎಲ್ಲೆಲ್ಲಿ ಶೋಷಣೆ ನಡೆಯುತ್ತದೆಯೋ ಅಲ್ಲಿ ಸಮಾನತೆ ಸಾರಿದವರು ಪ್ರವಾದಿಯವರು. ಒಬ್ಬ ಸಮಾನತೆಯ ಹರಿಕಾರ ಆಗಬೇಕೆಂದರ ಬಹಳ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಸಮಾನತೆಯನ್ನು 6ನೇ ಶತಮಾನದಲ್ಲಿ 23 ವರ್ಷಗಳ ಪ್ರವಾದಿಗಳು ಸಮಾನತೆ ತಂದವರು, ಮಹಿಳೆಯರಿಗೆ ವಿಶೇಷ ಸ್ಥಾನಮಾನ ತಂದುಕೊಟ್ಟವರು ಎಂದರು.ಪ್ರಮುಖರಾದ ಮೌಲಾನ ಅನ್ವರ ಪಾಷಾ ಉಮರಿ ಅಧ್ಯಕ್ಷತೆ ವಹಿಸಿದ್ದರು. ಅಂಜುಮನ್ ಕಮಿಟಿ ಅಧ್ಯಕ್ಷ ಖಾದರಸಾಬ ಮೋಮಿನ, ಜಮಾತೆ ಇಸ್ಲಾಮಿ ಹಿಂದ್‌ ಅಧ್ಯಕ್ಷ ಗೇಸುದರಾಜ ಮೂಲಿಮನಿ, ಮೈನುದ್ದಿನ್ ಖಾಜಿ, ಮೆಹಬೂಬಸಾಬ ಮೂಲಿಮನಿ, ಮಹಾಂತೇಶ ಅಗಸಿಮುಂದಿನ, ತಂಜೀಮ್ ಇಸ್ಲಾಮಿ ಕಮಿಟಿ ಅಧ್ಯಕ್ಷ ಡಾ.ನಜೀರಸಾಬ ಮೇಣೆದಾಳ, ಸುಚಪ್ಪ ದೇವರಮನಿ, ಖಲೀಲ್ ಅಹಮದ್ ಚೌದರಿ, ನಾಗರಾಜ ಕಂದಗಲ್ಲ, ಮಲ್ಲಯ್ಯ ಕೊಮಾರಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿಯಲ್ಲಿ ಹೊರ ದೇಶಗಳೊಂದಿಗೆ ಪೈಪೋಟಿ ನಡೆಸಿ
ಕ್ರೀಡಾ ಸಾಧಕಿ ಶಗುನ್‌ಗೆ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಸನ್ಮಾನ