ವಿಜಯಪುರ: ಹಳೆಯ ಆಚಾರಗಳಿಗೆ ಆಧುನಿಕ ವಿಚಾರಗಳನ್ನು ಸೇರಿಸಿದರೆ ಸಂಶೋಧನೆಯಲ್ಲಿ ಹೊಸ ದಾರಿ ಕಾಣಬಹುದು ಎಂದು ಬಿಎಲ್‌ಡಿಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ.ಆರ್.ಬಿ.ಕೊಟ್ನಾಳ ಹೇಳಿದರು.
ಗದಗ ಡಿಜಿಎಂ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಸಂತೋಷ ಬೆಳವಡಿ ಮಾತನಾಡಿ, ಈಗ ಕಾಲಕಾಲಕ್ಕೆ ಸಂಶೋಧನೆ ಕುರಿತು ವಿಚಾರ ಸಂಕಿರಣಗಳು ಅವಶ್ಯವಾಗಿದೆ. ಈ ಹಿನ್ನಲೆಯಲ್ಲಿ ಆಧುನಿಕ ಯುಗಕ್ಕೆ ತಕ್ಕಂತೆ ಭಾರತದ ಮೂಲ ಮತ್ತು ಪುರಾತನ ವಿಜ್ಞಾನವನ್ನು ಸೇರಿಸಿ ಹೊಸ ತಂತ್ರಜ್ಞಾನ ಆಧಾರಿತ ವನಸ್ಪತಿ ದ್ರವ್ಯಗಳ ಸಂಶೋಧನೆ ನಡೆಸಬೇಕು ಎಂದರು.ಕಾಲೇಜಿನ ಪ್ರಾಚಾರ್ಯ ಡಾ.ಸಂಜಯ ಕಡ್ಲಿಮಟ್ಟಿ ಮಾತನಾಡಿದರು. ಈ ಅನುಸಂಧಾನ ವಿಚಾರ ಸಂಕಿರಣದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಕೇರಳ ರಾಜ್ಯಗಳಿಂದ ವಿವಿಧ ಆಯುರ್ವೇದ, ಯುನಾನಿ, ಫಾರ್ಮಸಿ, ನರ್ಸಿಂಗ್ ವಿಭಾಗಗಳ ಸ್ನಾತಕೋತ್ತರ ಹಾಗೂ ಪಿಎಚ್‌ಡಿ ವಿದ್ಯಾರ್ಥಿಗಳು ಸೇರಿದಂತೆ 150 ಕ್ಕೂ ಹೆಚ್ಚು ಸಂಶೋಧಕರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಆಯೋಜಕ ಡಾ.ಸತೀಶ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ.ಜೋತ್ಸನಾ ಮತ್ತು ಡಾ.ಪರಮೇಶ್ವರಿ ನಿರೂಪಿಸಿದರು.