ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ರಾಜ್ಯದಲ್ಲಿ ತಾಯಿ ಭಾಷೆಯಾಗಿರುವ ಕನ್ನಡ ಹೃದಯ ಬದುಕಿನ ಸಂಸ್ಕೃತಿಯ ಭಾಷೆ. ವ್ಯಾವಹಾರಿಕವಾಗಿ ಇಂಗ್ಲೀಷ್ ಅನಿವಾರ್ಯವಾಗಿರಬಹುದು. ಆದರೆ ಮನೆಯೊಳಗೆ, ಮನದೊಳಗೆ ಕನ್ನಡವೇ ನಲಿದಾಡಬೇಕು ಎಂದು ಹಿರಿಯ ರಂಗ ನಟ, ಚಿತ್ರನಟ ಡಾ.ಮುಖ್ಯಮಂತ್ರಿ ಚಂದ್ರು ಹೇಳಿದರು.ಒಂಟಿಕಟ್ಟೆಯ ವೀರರಾಣಿ ಅಬ್ಬಕ್ಕ ನಗರದಲ್ಲಿ ಶನಿವಾರ ನಡೆದ ಅಂತರಾಷ್ಟ್ರೀಯ ಲಯನ್ಸ್ ಕ್ಲಬ್ ಜಿಲ್ಲೆ 317 ಡಿ ಇದರ ಪ್ರಾಂತ್ಯ 12 ಸಮ್ಮೇಳನ ನಿನಾದ ದಲ್ಲಿ ಮುಖ್ಯ ಅತಿಥಿಯಾಗಿದ್ದ ಮಾತನಾಡಿದ ಅವರು ಮಾತೃಭಾಷೆಯಲ್ಲಿ ಸೊಬಗು ಮತ್ತು ಶ್ರೀಮಂತಿಕೆಯಿದೆ. ನಮ್ಮ ಕನಸೂ ಕೂಡಾ ಮಾತೃಭಾಷೆಯಲ್ಲೇ ಇರುತ್ತದೆ ಎಂದರು.ತುಳು ರಂಗಭೂಮಿ ಕಲಾವಿದ ಅರವಿಂದ ಬೋಳಾರ್ ಲಯನ್ಸ್ ಕ್ಲಬ್ ಜಾತ್ಯತೀತ ಸಿದ್ಧಾಂತದ ಸಂಸ್ಥೆ. 25 ವರ್ಷಗಳ ಹಿಂದೆ ಪರಿಚಯವಾದ ಹೆರಾಲ್ಡ್ ತಾವ್ರೊ ಗಾಯಕರಾಗಿ ಜತೆಗೆ ತನ್ನ ಪತ್ನಿ ಮಕ್ಕಳನ್ನು ಈ ಕ್ಷೇತ್ರದಲ್ಲಿ ಬೆಳೆಸಿದ್ದಾರೆ. ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ಮೂಲಕ ಸಮಾಜ ಸೇವೆಯಲ್ಲು ತೊಡಗಿಸಿಕೊಂಡಿರುವುದು ಶ್ಲಾಘನಾರ್ಹ ಎಂದರು.
ಲಯನ್ ಪ್ರಾಂತ್ಯ 12 ರ ಅಧ್ಯಕ್ಷ ಹೆರಾಲ್ಡ್ ತಾವ್ರೊ ಮಾತನಾಡಿ ಈ ಅವಧಿಯಲ್ಲಿ 3 ಲಿಯೊ ಕ್ಲಬ್ ಮತ್ತು 1 ಲಯನ್ಸ್ ಕ್ಲಬ್ ಸ್ಥಾಪನೆಯಾಗಿದೆ. ಪ್ರಾಂತ್ಯ 12 ರಿಂದ ಅತಿ ಹೆಚ್ಚು ಸದಸ್ಯತ್ವ ಸೇರ್ಪಡೆಯಾಗಿದೆ. ಮೌಲ್ಯಧಾರಿತ ಸ್ನೇಹ, ಬೆಲೆ ಕಟ್ಟಲಾಗದ ಬಂಧುತ್ವ ಲಯನ್ಸ್ ಕ್ಲಬ್‌ನಿಂದ ದೊರೆತಿದೆ ಎಂದು ನಿನಾದ ಯಶಸ್ಸಿಗೆ ಸಹಕರಿಸಿದವರನ್ನು ಕೃತಜ್ಞತೆಯಿಂದ ಸ್ಮರಿಸಿಕೊಂಡರು. ಪ್ರಾಂತ್ಯದ ಪ್ರಥಮ ಮಹಿಳೆ ಪ್ರೆಸಿಲ್ಲಾ ತಾವ್ರೊ ಸಮ್ಮೇಳನವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಪ್ರಾಂತೀಯ 12 ರ ಅಧ್ಯಕ್ಷ ದಂಪತಿಯನ್ನು ಸನ್ಮಾನಿಸಲಾಯಿತು. ವಿವಿಧ ಸೇವಾ ಕಾರ‍್ಯಗಳು ನಡೆದವು.ಸಮ್ಮೇಳನ ಅಧ್ಯಕ್ಷ ಜೆರಾಲ್ಡ್ ಲೋಬೊ, ಪ್ರಮುಖರಾದ ವೆಂಕಟೇಶ್ ಹೆಬ್ಬಾರ್, ಜಗದೀಶ್ಚಂದ್ರ ಡಿ.ಕೆ, ಧರ್ಮಗುರು ಬೇಸಿಲ್ ವಾಸ್, ಕೆ. ಶ್ರೀಪತಿ ಭಟ್, ರೋಶನ್ ಡಿಸೋಜಾ, ಪ್ರಕಾಶ್ ಶೆಟ್ಟಿ, ಜೇಮ್ಸ್ ಮೆಂಡ, ಪ್ರತಿಭಾ ಹೆಬ್ಬಾರ್, ದಿನೇಶ್ ಎಂ.ಕೆ, ಅಶೋಕ್ ನಾಯಕ್, ಡಾ. ದೇವಿಪ್ರಸಾದ್ ಬೊಲ್ಮ ಉಪಸ್ಥಿತರಿದ್ದರು. ಲಯನ್ ರಾಜ್ಯಪಾಲ ಡಾ.ಮೆಲ್ವಿನ್ ಡಿಸೋಜಾ ಸಹಿತ ಪ್ರಮುಖರು ಶುಭ ಹಾರೈಸಿದರು. ಎರಿಕ್ ಲೋಬೊ, ಧರಣೆಂದ್ರ ಜೈನ್ ಹಾಗೂ ಮನೋಹರ ಕುಟಿನ್ಹಾ ನಿರೂಪಿಸಿದರು.