ಕನ್ನಡ ಬದುಕಿನ ಭಾಷೆಯಾಗಲಿ: ಬಿ.ಎನ್. ವಾಸರೆ

KannadaprabhaNewsNetwork |  
Published : Sep 25, 2024, 12:46 AM IST
24ಎಚ್.ಎಲ್.ವೈ-1:  ಉತ್ತರ ಕನ್ನಡ ಜಿಲ್ಲೆಯ ಗಡಿತಾಲೂಕವಾಗಿರುವ ಹಳಿಯಾಳಕ್ಕೆ  ಮಂಗಳವಾರ ಸಂಜೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಯನ್ನು ತಾಲೂಕಾಡಳಿತ ಮತ್ತು ಕಸಾಪ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು ಸ್ವಾಗತಿಸಿದವು. | Kannada Prabha

ಸಾರಾಂಶ

ಎಲ್ಲರೂ ಕನ್ನಡವನ್ನು ಬೆಳೆಸೋಣ. ಕನ್ನಡವು ಉಸಿರಾಗಲಿ, ಬದುಕಾಗಲಿ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದರು.

ಹಳಿಯಾಳ: ಜಿಲ್ಲೆಯ ಗಡಿ ತಾಲೂಕವಾಗಿರುವ ಹಳಿಯಾಳದಲ್ಲಿ ಮಂಗಳವಾರ ಸಂಜೆ ಕನ್ನಡ ಜ್ಯೋತಿ ರಥಯಾತ್ರೆಯನ್ನು ತಾಲೂಕಾಡಳಿತದ ಪರವಾಗಿ ಗ್ರೇಡ್- 2 ತಹಸೀಲ್ದಾರ್ ಅನಂತ ಚಿಪ್ಪಲಗಟ್ಟಿಯವರು ಪೂಜೆ ಸಲ್ಲಿಸುವ ಮೂಲಕ ಬರಮಾಡಿಕೊಂಡರು.ನಂತರ ಕನ್ನಡ ಜ್ಯೋತಿ ರಥವನ್ನು ಮೆರವಣಿಗೆಯಲ್ಲಿ ತಾಲೂಕು ಆಡಳಿತ ಸೌಧಕ್ಕೆ ತರಲಾಯಿತು. ತಾಲೂಕು ಆಡಳಿತ ಸೌಧದ ಆವರಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಗ್ರೇಡ್- 2 ತಹಸೀಲ್ದಾರ್ ಅನಂತ ಚಿಪ್ಪಲಗಟ್ಟಿ, ಪ್ರಭಾರ ಇಒ ಸತೀಶ ಆರ್. ಹಾಗೂ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ ಹಾಗೂ ಹೆಸ್ಕಾಂ ಎಇಇ ರವೀಂದ್ರ ಮೆಟಗುಡ್ಡ ಹಾಗೂ ತಾಲೂಕು ಕಸಾಪ ಪರವಾಗಿ ಕಸಾಪ ಅಧ್ಯಕ್ಷೆ ಸುಮಂಗಲಾ ಅಂಗಡಿ ಮತ್ತು ಪದಾಧಿಕಾರಿಗಳು ರಥದ ಪೂಜೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಕಸಾಪ ಅಧ್ಯಕ್ಷ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಅವರು, ಎಲ್ಲರೂ ಕನ್ನಡವನ್ನು ಬೆಳೆಸೋಣ. ಕನ್ನಡವು ಉಸಿರಾಗಲಿ, ಬದುಕಾಗಲಿ ಎಂದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯಕ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಶಾಂತ ನಾಯ್ಕ, ಕಸಾಪ ಪದಾಧಿಕಾರಿಗಳಾದ ಕಾಳಿದಾಸ ಬಡಿಗೇರ, ಶಾಂತಾರಾಮ ಚಿಬುಲಕರ, ವಿಠ್ಠಲ ಕೊರ್ವೆಕರ, ಗೋಪಾಲ ಅರಿ, ಜಿ.ಡಿ. ಗಂಗಾಧರ್, ಪ್ರೊ. ಸುರೇಶ್ ಕಡೆಮನಿ ಇತರರು ಇದ್ದರು.

ದಾಂಡೇಲಿಯಲ್ಲಿ ಕನ್ನಡ ಜ್ಯೋತಿ ರಥಕ್ಕೆ ಭವ್ಯ ಸ್ವಾಗತ

ದಾಂಡೇಲಿ: ಮಂಡ್ಯದಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಭಾಗವಾಗಿ ರಾಜ್ಯಾದ್ಯಂತ ಕನ್ನಡ ಜ್ಯೋತಿ ರಥವು ಸಂಚರಿಸುತ್ತಿದ್ದು, ಮಂಗಳವಾರ ದಾಂಡೇಲಿಗೆ ಆಗಮಿಸಿತು. ರಥವನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.ನಗರದ ಪಟೇಲ್ ವೃತ್ತಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥಕ್ಕೆ ತಾಲೂಕು ಆಡಳಿತ ಮತ್ತು ನಗರಾಡಳಿತದಿಂದ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು.ಪಟೇಲ್‌ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಪೂರ್ಣಕುಂಭ, ವಾದ್ಯಗಳ ಮೂಲಕ ಮೆರವಣಿಗೆಯಲ್ಲಿ ನಗರಸಭೆಯ ಆವರಣದಲ್ಲಿ ಸಮಾವೇಶಗೊಂಡಿತು. ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದರು.

ನಗರಸಭೆ ಅಧ್ಯಕ್ಷ ಅಷ್ಪಾಕ್ ಶೇಖ, ಉಪಾಧ್ಯಕ್ಷ ಶೀಲ್ಪಾ ಕೊಡೆ, ಪೌರಾಯುಕ್ತರಾದ ರಾಜಾರಾಮ ಪವಾರ, ಕಸಾಪ ತಾಲೂಕು ಅಧ್ಯಕ್ಷ ನಾರಾಯಣ ನಾಯ್ಕ ಕನ್ನಡ ಜ್ಯೋತಿ ರಥಕ್ಕೆ ಪೂಜೆ ಸಲ್ಲಿಸಿದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ