ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
2500 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಜಗತ್ತಿನ ಅತಿ ಹಳೆಯ ಭಾಷಗಳಲ್ಲಿ ಒಂದಾಗಿದೆ. ವಿಶ್ವದ 33ನೇ ಸ್ಥಾನದಲ್ಲಿದೆ ಎಂಬುದು ನಮ್ಮ ಹೆಮ್ಮೆ. ದೇಶದ ಶ್ರೀಮಂತ ಸಂಸ್ಕೃತಿ, ಕಲೆ, ನೆಲ, ಜಲ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಹೊಣೆಯಾಗಿದೆ. ರಾಜ್ಯ ಇಂದು 69ನೇ ರಾಜ್ಯೋತ್ಸವ ಆಚರಿಸಿಕೊಳ್ಳುತ್ತಿದೆ. ಕನಟಕ ಹೆಸರು ಪಡೆದು 50 ನೇ ಸುವರ್ಣ ಸಂಭ್ರಮಾಚಾರಣೆ ಸಂದರ್ಭದಲ್ಲಿ ನಮ್ಮ ನಾಡಿನ ಉತ್ಸವ ನಿತ್ಯೋತ್ಸವಾಗಲಿ ಎಂದು ಪುರಸಭೆ ಅಧ್ಯಕ್ಷ ಯಲ್ಲಣ್ಣಗೌಡ ಪಾಟೀಲ ಹೇಳಿದರು.ನಗರದ ಬಸವೇಶ್ವರ ವೃತ್ತದಲ್ಲಿ ಕರವೇ ನಗರ ಘಟಕ ಆಯೋಜಿಸಿದ 69ನೇ ರಾಜ್ಯೋತ್ಸವ ಕಾರ್ಯಕ್ರಮವನ್ನು ನಾಡ ದೇವಿ ಫೋಟೋ ಪೂಜಿಸುವ ಮೂಲಕ ಉದ್ಘಾಟಸಿ ಮಾತನಾಡಿ, ವಿಶ್ವದ ಸುಂದರ ಭಾಷೆ, ಸಿರಿ ಗಂಧದ ನಾಡು, ಚಿನ್ನದ ಬಿಡು, ಸಂಗೀತದ ನೆಲೆಯಾಗಿದೆ. ನಾವೆಲ್ಲರೂ ಈ ನಾಡಿನಲ್ಲಿರುವುದು ನಮ್ಮ ಪುಣ್ಯ. 8 ಜ್ಞಾನ ಪೀಠ, 2 ಸರಸ್ವತಿ ಸಮ್ಮಾನ ಪುರಸ್ಕಾರ ಪಡೆದುಕೊಂಡ ಶ್ರೀಮಂತ ಸಾಹಿತ್ಯ ಕನ್ನಡದ್ದು. ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ಪೂರೈಸಿದ ಈ ಸುವರ್ಣ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಆಡಳಿತ, ಸಿನಿಮಾ, ಕ್ರೀಡೆ, ಸಾಹಿತ್ಯ, ವಿಜ್ಞಾನ ಹಾಗೂ ಕೈಗಾರಿಕೆ ತನಕ ಕನ್ನಡ ನಾಡು ಇಡೀ ದೇಶ ಕಣ್ಣರಳಿಸುವ ಮಾದರಿಯಲ್ಲಿ ಸಾಧನೆ ತೋರಿದೆ ಎಂದರು.
ಕರವೇ ಅಧ್ಯಕ್ಷ ಮೋಸಿನ ಅತ್ತಾರ ಮಾತನಾಡಿ, ಕನ್ನಡ ನಾಡಿನಲ್ಲಿ ಕನ್ನಡಿಗರೇ ಸಾರ್ವಭೌಮರು. ಕನ್ನಡ ಭಾಷೆಯೇ ಮೇಲ್ಪಂಕ್ತಿ ಭಾಷೆಯಾಗಿ ಕನ್ನಡಿಗರ ಮನೆ ಮನಗಳಲ್ಲಿ ಎಲ್ಲಿಯವರೆಗೆ ರಾರಾಜಿಸುವುದಿಲ್ಲವೋ, ಸರ್ಕಾರಗಳು ಕನ್ನಡತನವನ್ನು ಮೆರೆಯುವುದಿಲ್ಲವೋ, ಅಲ್ಲಿಯವರೆಗೆ ಕನ್ನಡವು ಕನ್ನಡಿಗರ ಅನ್ನದ ಭಾಷೆಯಗಲು ಸಾಧ್ಯವಿಲ್ಲ. ಕನ್ನಡ ಭಾಷೆಯು ಕನ್ನಡಿಗರ ಆಶೋತ್ತರಗಳ ಭಾವನೆಯನ್ನು ಪ್ರತಿಬಿಂಬವಾಗಿ ರೂಪುಗೊಂಡಾಗ ಮಾತ್ರ ರಾಜ್ಯೋತ್ಸವ ಆಚರಣೆಗಳಿಗೆ ಬೆಲೆ ಬರುತ್ತದೆ. ಇಲ್ಲದಿದ್ದರೆ ಕೇವಲ ಆಚರಣೆಗಷ್ಟೇ ಸೀಮಿತವಾಗಿ ಕನ್ನಡ ನಾಡಿನಲ್ಲಿ ಕನ್ನಡಿಗರೇ ಅಲ್ಪಸಂಖ್ಯಾರಾದರೂ ಅಚ್ಚರಿಯಿಲ್ಲ ಎಂದರು.ಪುರಸಭೆಯಲ್ಲಿ ಕನ್ನಡ ರಾಜ್ಯೋತ್ಸವ:
ನಗರದ ಆಡಳಿತ ಭವನದಲ್ಲಿ ಪುರಸಭೆ ಸದಸ್ಯ ಬಲವಂತಗೌಡ ಪಾಟೀಲ ನಾಡದೇವಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಮಾತನಾಡಿ, ನಾಡಿನ ಎಲ್ಲ ಕನ್ನಡಿಗರು ಹೆಮ್ಮೆ ಪಡುವ ಕ್ಷಣ ಇದಾಗಿದೆ. ಎಲ್ಲರೂ ನಾಡಿನ ಏಳಿಗೆಗಾಗಿ ದುಡಿಯೋಣ ಸುಂದರ ನಾಡು ಕಟ್ಟೋಣ. ಕನ್ನಡಿಗರು ಎಂಬ ಹೆಮ್ಮೆಯಿಂದ ಬಾಳೋಣ ಬದುಕೋಣ ಎಂದ ಅವರು, 50 ವರ್ಷದ ಸುವರ್ಣ ಸಂಭ್ರಮ ಕಾರ್ಯಕ್ರಮ ಆಯೋಜಿಸಿ ನಾಡುನುಡಿಗೆ ಗೌರವ ಸಲ್ಲಿಸೋಣ ಎಂದರು.ಈ ಸಂಧರ್ಭದಲ್ಲಿ ಪುರಸಭೆ ಸದಸ್ಯರಾದ ಚನ್ನಬಸು ಯರಗಟ್ಟಿ, ಮುಸ್ತಾಕ ಚಿಕ್ಕೋಡಿ, ರಾಜು ಗೌಡಪ್ಪಗೋಳ ಅಧಿಕಾರಿಗಳಾದ ಎಸ್.ಏನ್.ಪಾಟೀಲ, ಎಂ ಎಂ ಮುಗಳಖೊಡ, ವಿ.ಜಿ.ಕುಲಕರ್ಣಿ, ಸಿ.ಎಸ್.ಮಠಪತಿ, ಎಸ್.ಜಿ.ಅಳ್ಳಿಮಟ್ಟಿ, ಆರ್.ಎಸ್.ಹೂಗಾರ, ಎಸ್.ಎ.ಲಮಾಣಿ, ಎಂ.ಎಸ್.ಮುಲ್ಲಾ, ಬಿ.ಏನ್. ಬಳಿಗಾರ, ಎಸ್.ಎಂ.ಕಲಬುರ್ಗಿ, ಶ್ರೀಮತಿ ಆರ್.ಬಿ.ಸೊರಾಗಾಂವಿಮಾರುತಿ ದಳವಾಯಿ, ಉಪ ಸಿಬ್ಬಂದಿ ರಾಮು, ಎಂ.ಡಿ.ಆನಂದ, ರಾಜೇಶ ಭಾವಿಕಟ್ಟಿ, ಶಿವಬಸು ಗೌಂಡಿ, ಸುನೀಲಗೌಡ ಪಾಟೀಲ, ಬಸವರಾಜ್ ರಾಯರ, ಪಂಡಿತ ಬಡಿಗೇರ, ನಿಂಗಪ್ಪ ಬಾಳಿಕಾಯಿ, ಅರ್ಜುನ್ ಮೊಪಗಾರ, ಗೋಪಾಲ ಟೋನಪೆ, ಅಮಿತ ಮದ್ದಿನಮಠ, ಮಹಾಲಿಂಗ ದಡುತಿ, ಸಿರಾಜ ಪೆಂಡಾರಿ, ಸಂತೋಷ ಹುದ್ದಾರ, ಇರ್ಫಾನ, ಸಜ್ಜದ, ರಿಹಾನ, ಸೈಯಾದ, ಪಾರುಕ, ಸಮೀರ್, ಗೌಸ್, ಉಮರ, ಬಸವರಾಜ್ ಹುಕ್ಕೇರಿ, ಸೇರಿ ಹಲವರು ಇದ್ದರು. ರವಿ ಹಲಸಪ್ಪಗೋಳ ನಿರೂಪಿಸಿ, ವಂದಿಸಿದರು.