ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಲಿ: ಶೇಷಾದ್ರಿ

KannadaprabhaNewsNetwork |  
Published : Dec 15, 2025, 02:15 AM IST
14ಕೆಆರ್ ಎಂಎನ್ 2.ಜೆಪಿಜಿರಾಮನಗರದ ಕೆಂಗಲ್‌ ಹನುಮಂತಯ್ಯ ವೃತ್ತದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ಕರ್ನಾಟಕದಲ್ಲಿ ಹುಟ್ಟಿದ ನಾವೆಲ್ಲರೂ ಕನ್ನಡ ತಾಯಿಯ ಮಕ್ಕಳು ಎಂಬ ಭಾವನೆಯಿಂದ ಬದುಕು ನಡೆಸೋಣ. ಆಗ ಮಾತ್ರ ಸಾಮರಸ್ಯದಿಂದ ಬದುಕು ನಡೆಸಲು ಸಾಧ್ಯ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಕರೆ ನೀಡಿದರು.

ರಾಮನಗರ: ಕರ್ನಾಟಕದಲ್ಲಿ ಹುಟ್ಟಿದ ನಾವೆಲ್ಲರೂ ಕನ್ನಡ ತಾಯಿಯ ಮಕ್ಕಳು ಎಂಬ ಭಾವನೆಯಿಂದ ಬದುಕು ನಡೆಸೋಣ. ಆಗ ಮಾತ್ರ ಸಾಮರಸ್ಯದಿಂದ ಬದುಕು ನಡೆಸಲು ಸಾಧ್ಯ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಕರೆ ನೀಡಿದರು.

ನಗರದ ಕೆಂಗಲ್‌ ಹನುಮಂತಯ್ಯ ವೃತ್ತದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೆಲ, ಜಲ, ಭಾಷೆಯ ರಕ್ಷಣೆಗೆ ನಾವೆಲ್ಲರೂ ಪಣ ತೊಡೋಣ. ನವೆಂಬರ್ ನಲ್ಲಿ ಮಾತ್ರ ರಾಜ್ಯೋತ್ಸವ ಆಗಬಾರದು ವರ್ಷದ ಕನ್ನಡ ದಿನವೂ ನಿತ್ಯೋತ್ಸವವಾಗಬೇಕಿದೆ. ಡಿ.22ರಂದು ನಗರಸಭೆ ವತಿಯಿಂದ ಕನ್ನಡ ರಾಜ್ಯೋತ್ಸವ ರೇಷ್ಮೆನಾಡ ಕನ್ನಡ ರಾಜ್ಯೋತ್ಸವವಾಗಿ ಆಚರಣೆ ಮಾಡುತ್ತಿದ್ದು, ಪ್ರಶಸ್ತಿ ಪ್ರದಾನ, ಕನ್ನಡಾಂಬೆಯ ಮೆರವಣಿಗೆ ಆಯೋಜನೆ ಮಾಡುತ್ತಿದ್ದೇವೆ. ಆ ವೇದಿಕೆಯಲ್ಲಿ ಸಿ.ಎಂ.ಲಿಂಗಪ್ಪ ಅವರ ಸೇವೆಯನ್ನು ಗುರುತಿಸಿ ಪೌರ ಸನ್ಮಾನ‌ ಮಾಡಲಾಗುವುದು ಎಂದು ಕೆ.ಶೇಷಾದ್ರಿ ಹೇಳಿದರು.

ಬಿಡಿಸಿಸಿ‌ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು‌ ಮಾತನಾಡಿ, ಕನ್ನಡ ಭಾಷೆ ಸಮೃದ್ದಿಯಾಗಿ ಪಸರಿಸಲು ಕನ್ನಡದ ಬಗೆಗೆ ಎಲ್ಲರೂ ರಾಜ್ಯೋತ್ಸವ ನಡೆಯಲಿದೆ. ಕರ್ನಾಟಕದಲ್ಲಿ ಕನ್ನಡವೇ ಆಡಳಿತದಲ್ಲಿ ಪ್ರಧಾನ ವಾಗಬೇಕು. ಕನ್ನಡ ಭಾಷೆಯ ಮೇಲೆ ಎಲ್ಲರಲ್ಲೂ ಪ್ರೀತಿ, ಅಭಿಮಾನ ಇರಬೇಕು. ಆಗ ಮಾತ್ರ ನಮ್ಮ‌ಭಾಷೆ ಶ್ರೀಮಂತವಾಗಲು ಸಾಧ್ಯ ಎಂದು‌ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲಾ‌ ಮಕ್ಕಳಿಗೆ‌ ಸಮವಸ್ತ್ರ ವಿತರಣೆ ಮಾಡಲಾಯಿತು. ಶಾಲಾ ಮಕ್ಕಳು ಸಾಂಸ್ಕ್ರತಿಕ ಕಾರ್ಯಕ್ರಮ‌ವನ್ನು ನಡೆಸಿಕೊಟ್ಟರು.ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಶಂಕರಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಶಿವಲಿಂಗಪ್ಪ, ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಶಿವಕುಮಾರಸ್ವಾಮಿ, ವಲಯ ಅರಣ್ಯಾಧಿಕಾರಿ ಮನ್ಸೂರ್ ಮುಖಂಡರಾದ ಜನತಾನಾಗೇಶ್, ಬೆಂಕಿ ಮಹದೇವಯ್ಯ, ಎಸ್ ಆರ್ ಎಸ್ ರಾಜಣ್ಣ, ಮಹದೇವಯ್ಯ, ಪುಟ್ಟಣ್ಣ ರಾಜ್ಯೋತ್ಸವ ಸಮಿತಿಯ ಪದಾಧಿಕಾರಿಗಳಾದ ರೇವಣ್ಣ, ಚಂದ್ರು, ರೇವಣ ಸಿದ್ದಯ್ಯ, ವೀರಭದ್ರಯ್ಯ, ಸುರೇಶ್, ನವೀನ್, ಜಯಶಂಕರ, ಯೋಗೇಶ್, ತಿಮ್ಮೇಗೌಡ, ಮಹದೇವ್, ಕಾಂತರಾಜು, ನಾಗೇಶ್, ರಾಜಣ್ಣ, ಸುರೇಶ್, ಶಂಕರ್, ಕುಮಾರ ಉಪಸ್ಥಿತರಿದ್ದರು.

14ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಕೆಂಗಲ್‌ ಹನುಮಂತಯ್ಯ ವೃತ್ತದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ