ಕನ್ನಡಪ್ರಭ ವಾರ್ತೆ ನಾಪೋಕ್ಲು
ದೇವಸ್ಥಾನದ ಹೃದಯ ಭಾಗದ ಗರ್ಭಗುಡಿಯ ನಿರ್ಮಾಣಕ್ಕೆ ನೆಲ ಮಟ್ಟದಿಂದ 7.25 ಅಡಿ ಭೂಮಿಯ ಒಳಗಿನಿಂದ ಅಡಿಪಾಯ ಹಾಕಿದ್ದು ಶಡಾಧರ ಪೂಜೆ ಗುರುವಾರ ನಡೆಯಿತು. ಗರ್ಭಗುಡಿ ಹಾಗೂ ಮುಖ ಮಂಟಪ ಅಡಿಪಾಯಕ್ಕೆ ಉಪ್ಪು ಮಿಶ್ರಿತ ಮರಳು ತುಂಬಿಸುವ ಕಾರ್ಯವನ್ನು ಊರಿನವರು ನೆರವೇರಿಸಿದರು. ಪೂಜೆ ಅಂಗವಾಗಿ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ಸಂದರ್ಭ ದೇವಸ್ಥಾನದ ತಕ್ಕ ಮುಖ್ಯಸ್ಥರು ಕೋಟೆರ ಸುಬ್ಬಯ್ಯ, ನೆರವಂಡ ಭೀಮಯ್ಯ, ಅಧ್ಯಕ್ಷರು ಕೋಟೆರ ಸುಬ್ಬಯ್ಯ, ಉಪ ಅಧ್ಯಕ್ಷರು ಬೈರುಡ ಮಾಚಯ್ಯ, ಕಾರ್ಯ ಅಧ್ಯಕ್ಷರು ಮತ್ತು ಖಜಾಂಚಿ ಬೊಟ್ಟೋಳಂಡ ತಿಮ್ಮಯ್ಯ, ಚಂಗೇಟಿರ ಅಪ್ಪಯ್ಯ, ಕಾರ್ಯದರ್ಶಿ ಕೋಟೆರ ಧನುಷ್ ಬೋಪಣ್ಣ, ಮಾಜಿ ಕಾರ್ಯದರ್ಶಿಯವರಾದ ಅಪ್ಪಚೆಟ್ಟೊಳಂಡ ರಾಜಭೀಮಯ್ಯ, ತಕ್ಕ ಮುಖ್ಯಸ್ಥರು, ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು. ತಂತ್ರಿ ದಿವಾಕರ್ ಭಟ್, ಮುಖ್ಯ ಅರ್ಚಕ ಪುಟ್ಟ ಅವರ ಮುಂದಾಳತ್ವದಲ್ಲಿ ಪೂಜಾ ವಿಧಿ ವಿಧಾನಗಳು ಜರುಗಿದವು.