- ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವ
ಕನ್ನಡಪ್ರಭ ವಾರ್ತೆ, ತರೀಕೆರೆಕನ್ನಡ ರಾಜ್ಯೋತ್ಸವ ನವೆಂಬರ್ ಗೆ ಸೀಮಿತವಾಗದೆ ವರ್ಷ ಪೂರ್ತಿ ಆಚರಿಸುವಂತಾಗಬೇಕು ಪ್ರತಿಯೊಬ್ಬ ಕನ್ನಡಿಗರ ಮನೆ ಮನೆಯಲ್ಲಿ ನಿತ್ಯೋತ್ಸವವಾಗಬೇಕು ಎಂದು ಪ್ರಹರ್ಷಿತ ವಿದ್ಯಾ ಸಂಸ್ಥೆ ಆಡಳಿತಾಧಿಕಾರಿ ಟಿ.ಎಸ್. ಅನೂಪ್ ಹೇಳಿದರು. ಪಟ್ಟಣದ ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆಯಿಂದ ಶಾಲಾ ಆವರಣದಲ್ಲಿ ನಡೆದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.ಕನ್ನಡ ನಾಡು ರನ್ನ, ಪಂಪ, ಗುಂಡಪ್ಪ, ಡಾ ಸಿದ್ದಲಿಂಗಯ್ಯ ಮುಂತಾದ ಮಹನೀಯರು ಜನಿಸಿದ ಪುಣ್ಯ ಬೀಡು, ರಾಷ್ಟ್ರಕವಿ ಕುವೆಂಪು, ವರಕವಿ ಬೇಂದ್ರೆ, ಡಾ ಚಂದ್ರಶೇಖರ್ ಕಂಬಾರ, ಶಿವರಾಂ ಕಾರಂತ ರಂತಹ ಪುಣ್ಯ ಪುರುಷರು ಜನಿಸಿದ ನಾಡಿಗೆ 8 ಜ್ಞಾನಪೀಠ ಪ್ರಶಸ್ತಿ ಲಭಿಸಿರುವುದು ಹೆಗ್ಗಳಿಕೆ. ಎರಡೂವರೆ ಸಾವಿರ ವರ್ಷಗಳ ಇತಿಹಾಸದ ಕನ್ನಡ ಭಾಷೆಗೆ ನಿತ್ಯ ಬದುಕಿನ ನಾಡು, ನುಡಿ ನೆಲ, ಜಲ ಹಾಗೂ ಕನ್ನಡ ಭಾಷೆ ಹಿರಿಮೆ ಕನ್ನಡ ಕಟ್ಟಿ ಬೆಳೆಸುವ ಜವಾಬ್ದಾರಿಯನ್ನು ಇಂದಿನ ವಿದ್ಯಾರ್ಥಿಗಳಲ್ಲಿ ಶಿಕ್ಷಕರು ಮನದಟ್ಟು ಮಾಡಬೇಕು ಆಗ ಮಾತ್ರ ಕನ್ನಡವನ್ನು ಶ್ರೀಮಂತ ಗೊಳಿಸಲು ಸಾಧ್ಯ ಎಂದು ತಿಳಿಸಿದರು.ಶಾಲೆ ಶಿಕ್ಷಕಿ ನೇತ್ರಾವತಿ ಮಾತನಾಡಿ ಜಗತ್ತಿನ ಶ್ರೇಷ್ಠ ಭಾಷೆಗಳಲ್ಲೊಂದಾದ ಕನ್ನಡ ವಿಶ್ವದಾದ್ಯಂತ ಪಸರಿಸಲು ಕಂಕಣ ಬದ್ಧರಾಗಬೇಕು. 1950ರಲ್ಲಿ ಭಾರತ ಗಣರಾಜ್ಯವಾದ ಬಳಿಕ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯ ಗಳನ್ನಾಗಿ ರೂಪಿತಗೊಂಡವು. ಕನ್ನಡ ಭಾಷೆ ಪ್ರಾಂತ್ಯಗಳು ಸೇರಿ ಮೈಸೂರು ರಾಜ್ಯ ಉದಯವಾಯಿತು. ಈಗ ಚೆಲುವ ಕನ್ನಡ ನಾಡಾಗಿದೆ ಎಂದು ಹೇಳಿದರು.ಶಾಲೆ ವಿದ್ಯಾರ್ಥಿಯಾದ ಹೃತಿಕಾ ಮಾತನಾಡಿ ಕರ್ನಾಟಕ ಹಸಿರಾಗಲಿ, ಕನ್ನಡ ಭಾಷೆ ಉಸಿರಲಿ, ಕನ್ನಡ ಪ್ರೇಮ ಎಲ್ಲರಲ್ಲಿ ಇರಲಿ ಎಂದು ತಿಳಿಸಿ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿದರು. ಪೋಷಕರು, ಶಿಕ್ಷಕರ ವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
-1ಕೆಟಿಆರ್.ಕೆ.15ಃ ತರೀಕೆರೆಯಲ್ಲಿ ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆಯಿಂದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.