ಕನ್ನಡಿಗರು ಹೋರಾಟ ಮನೋಭಾವ ಬೆಳೆಸಿಕೊಳ್ಳಲಿ: ರಹಮಾನ ನಮಾಜಿ

KannadaprabhaNewsNetwork |  
Published : Nov 04, 2025, 03:15 AM IST
ಡಂಬಳದ ಬಸವೇಶ್ವರ ವೃತ್ತದ ಬಳಿ ಬಸವೇಶ್ವರ ಆಟೋ ಚಾಲಕರ ಸಂಘದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. | Kannada Prabha

ಸಾರಾಂಶ

ರಮೇಶ ಬಚನಳ್ಳಿ, ಕಾಳಿಂಗ ಒಂಟಲಭೋವಿ ಮಾತನಾಡಿ, ಕನ್ನಡ ಸಾಹಿತ್ಯ ಬಹಳಷ್ಟು ಶ್ರೀಮಂತವಾಗಿದ್ದು, ಕನ್ನಡ ಸಾಹಿತ್ಯಕ್ಕೆ ಈವರೆಗೂ ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿವೆ ಎಂದರು.

ಡಂಬಳ: ದೇಶದಲ್ಲಿ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಂತಹ ಕನ್ನಡ ಭಾಷೆಯನ್ನು ಎಲ್ಲರೂ ಉಳಿಸಿ ಬೆಳೆಸುವ ಜತೆಗೆ, ಕನ್ನಡ ನಾಡಿನ ನೆಲ, ಜಲ, ಭಾಷೆ ಮತ್ತು ಸಾಂಸ್ಕೃತಿಕ ಪರಂಪರೆಗೆ ಧಕ್ಕೆ ಬಂದಾಗ ಎಲ್ಲರೂ ಹೋರಾಡಬೇಕಿದೆ ಎಂದು ರಹಮಾನ ನಮಾಜಿ ತಿಳಿಸಿದರು.

ಡಂಬಳ ಗ್ರಾಮದ ಬಸವೇಶ್ವರ ವೃತ್ತದ ಬಳಿ ಬಸವೇಶ್ವರ ಆಟೋ ಚಾಲಕರ ಸಂಘದಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಮೇಶ ಬಚನಳ್ಳಿ, ಕಾಳಿಂಗ ಒಂಟಲಭೋವಿ ಮಾತನಾಡಿ, ಕನ್ನಡ ಸಾಹಿತ್ಯ ಬಹಳಷ್ಟು ಶ್ರೀಮಂತವಾಗಿದ್ದು, ಕನ್ನಡ ಸಾಹಿತ್ಯಕ್ಕೆ ಈವರೆಗೂ ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿವೆ. ಕನ್ನಡ ಏಕೀಕರಣಕ್ಕಾಗಿ ಸಾಕಷ್ಟು ಸಾಹಿತಿಗಳು ಮನೆ- ಮಠಗಳನ್ನು ಬಿಟ್ಟು ಹೋರಾಟ ಮಾಡಿದ್ದಾರೆ. ಅವರನ್ನು ಸ್ಮರಣೆ ಮಾಡುವ ಜತೆಗೆ ಅವರ ಹೋರಾಟ ನಮಗೆ ದಾರಿದೀಪವಾಗಬೇಕಿದೆ ಎಂದರು.

ಮುತ್ತು ಕರವೀರಮಠ, ಮಹಬೂಬ ಅತ್ತಾರ ಮಾತನಾಡಿ, ಕನ್ನಡ ಬೆಳೆಸುವ ಜವಾಬ್ದಾರಿ ಯುವಕರ ಮೇಲಿದೆ. ಕನ್ನಡದ ಮೇರು ಕೃತಿಗಳನ್ನು ಹೆಚ್ಚು ಓದಬೇಕು. ಕನ್ನಡ ಪದಗಳನ್ನು ಹೆಚ್ಚು ಬಳಸಿದಾಗ ಭಾಷೆ ಮತ್ತಷ್ಟು ಶ್ರೀಮಂತವಾಗುತ್ತದೆ ಎಂದರು.

ಆಟೋ ಚಾಲಕರಾದ ವಿನಾಯಕ ಕಾಡಸಿದ್ದೇಶ್ವರಮಠ, ರಂಗಪ್ಪ ಒಂಟಲಭೋವಿ, ಚೇತನ ಕಾಡಸಿದ್ಧೇಶ್ವರಮಠ, ಬಾಬುಸಾಬ ದೌಲತ್ತದಾರ, ನಾಶೀರ ಅತ್ತಾರ, ಯುವಕರು, ಹಿರಿಯರು ಇತರರು ಇದ್ದರು. ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಇಂದಿನಿಂದ

ಗದಗ: 2024- 25ನೇ ಸಾಲಿನ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳ ಶಿಕ್ಷಕರು, ಮುಖ್ಯ ಶಿಕ್ಷಕರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಚಾಲ್ತಿಯಯಲ್ಲಿದ್ದು, ಜಿಲ್ಲೆಯೊಳಗಿನ ಪ್ರಾಥಮಿಕ ಶಾಲಾ ಹಿರಿಯ ಮುಖ್ಯ ಶಿಕ್ಷಕರು, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ವಿಶೇಷ ಶಿಕ್ಷಕರುಗಳ ವರ್ಗಾವಣೆಯನ್ನು ಹಾಗೂ ಪ್ರೌಢಶಾಲಾ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ವಿಶೇಷ ಶಿಕ್ಷಕರ ಕೋರಿಕೆ ವರ್ಗಾವಣೆ ಕುರಿತಂತೆ ಪರಿಷ್ಕೃತ ವೇಳಾಪಟ್ಟಿಯಂತೆ ಅಂತಿಮ ಪಟ್ಟಿ ಪ್ರಕಾರ ಕೌನ್ಸೆಲಿಂಗ್ ನಡೆಸಲಾಗುವುದು.ಶಿಕ್ಷಕರು ನಿಗದಿಪಡಿಸಿದ ದಿನಾಂಕದಂದು ನಗರದ ಹಳೆ ಕೋರ್ಟ್ ಹತ್ತಿರ ಸಮನ್ವಯಾಧಿಕಾರಿಗಳ ಕಚೇರಿಯಲ್ಲಿ ಕೌನ್ಸೆಲಿಂಗ್ ಸಮಯದಲ್ಲಿ ಹಾಜರಿರಬೇಕು.ನ. 4ರಂದು ಬೆಳಗ್ಗೆ 9.30ರಿಂದ ಅಂತಿಮ ಪಟ್ಟಿಯಲ್ಲಿರುವ ಎಲ್ಲ ಪ್ರಾಥಮಿಕ ಹಿರಿಯ ಮುಖ್ಯ ಶಿಕ್ಷಕರು, ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರು ಕ್ರ.ಸಂ. 1ರಿಂದ 200ರ ವರೆಗೆ, ನ. 5ರಂದು ಬೆಳಗ್ಗೆ 9.30 ರಿಂದ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ವೃಂದ ಜೇಷ್ಠತಾ ಪಟ್ಟಿ ಕ್ರ.ಸಂ. 201ರಿಂದ 500ರ ವರೆಗೆ, ನ. 6ರಂದು ಬೆಳಗ್ಗೆ 9.30ರಿಂದ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ವೃಂದ ಜೆ.ಪ. ಕ್ರ.ಸಂ. 501ರಿಂದ ಮುಕ್ತಾಯವಾಗುವ ವರೆಗೆ, ನ. 7ರಂದು ಬೆಳಗ್ಗೆ 9.30ರಿಂದ ಅಂತಿಮ ಪಟ್ಟಿಯಲ್ಲಿರುವ ಎಲ್ಲ ಪ್ರೌಢಶಾಲಾ ವಿಶೇಷ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಸಹ ಶಿಕ್ಷಕರ ವೃಂದದ ಕೌನ್ಸೆಲಿಂಗ್ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ