ಸಮಾನ ಮನಸ್ಕರು ಸಹಕಾರ ಸಂಘಗಳ ಬೆಳವಣಿಗೆ ಮಾಡೋಣ: ಕೌಳೂರು

KannadaprabhaNewsNetwork |  
Published : Sep 21, 2024, 01:56 AM IST
ಯಾದಗಿರಿ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಇತ್ತೀಚೆಗೆ ಜಿಲ್ಲಾ ಸಹಕಾರಿ ಯೂನಿಯನ್ ಒಕ್ಕೂಟದ ದ್ವೀತಿಯ ವಾರ್ಷಿಕ ಮಹಾಸಭೆ ಆಯೋಜಿಸಲಾಗಿತ್ತು  | Kannada Prabha

ಸಾರಾಂಶ

Let like-minded people grow cooperative societies: Kowloon

-ಸಹಕಾರಿ ಯೂನಿಯನ್‌ ಬ್ಯಾಂಕ್‌ ವಾರ್ಷಿಕ ಮಹಾಸಭೆಯಲ್ಲಿ ಮಲ್ಲಿಕಾರ್ಜುನ್ ರೆಡ್ಡಿಗೌಡ ಸಲಹೆ

---------

ಕನ್ನಡಪ್ರಭ ವಾರ್ತೆ ಯಾದಗಿರಿ

ಯಾವುದೇ ಒಂದು ಸಹಕಾರ ಸಂಸ್ಥೆ ಅಸ್ತಿತ್ವಕ್ಕೆ ಬರಲು ಮೊದಲು ಸಹಕಾರ ಮನೋಭಾವದ ಸಮಾನ ಮನಸ್ಕರು ಒಂದೆಡೆ ಸೇರಿ ಸಹಕಾರ ಸಂಘಗಳ ಬೆಳವಣಿಗೆ ಮಾಡೋಣ ಎಂದು ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್ ರೆಡ್ಡಿಗೌಡ ಕೌಳೂರು ಸಲಹೆ ನೀಡಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಇತ್ತೀಚೆಗೆ ಜಿಲ್ಲಾ ಸಹಕಾರಿ ಯೂನಿಯನ್ ಒಕ್ಕೂಟದ ದ್ವೀತಿಯ ವಾರ್ಷಿಕ ಮಹಾಸಭೆಯ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ. ಇದು ಸಹಕಾರ ತತ್ವದ ಮುಖ್ಯ ಸಂದೇಶ. ಇಂತಹ ಶ್ರೇಷ್ಠ ತತ್ವದ ಬುನಾದಿಯ ಮೇಲೆ ಕಟ್ಟಿರುವುದು ಈ ಸಹಕಾರ ಕ್ಷೇತ್ರ. ಪರಸ್ಪರ ಸಹಕಾರ, ನಂಬಿಕೆಯ ಅಮೂಲ್ಯ ತತ್ವಗಳ ಬುನಾದಿಯ ಮೇಲೆ ಅಸ್ತಿತ್ವಕ್ಕೆ ಬಂದ ಸಹಕಾರ ಸಂಘಗಳು, ಸಹಕಾರಿ ಬ್ಯಾಂಕ್‌ಗಳು ಇಂದು ಆರ್ಥಿಕ ನಷ್ಟ ಅನುಭವಿಸಲು, ಕೆಲವೊಮ್ಮೆ ಪತನದ ಹಾದಿಯಲ್ಲಿ ಸಾಗಲು ಅವುಗಳ ಮೂಲ ರಚನೆಯ ಲೋಪವೇ ಕಾರಣ ಎನ್ನುತ್ತಾರೆ ಸಹಕಾರಿ ಧುರೀಣರು. ಯಾವುದೇ ಒಂದು ಸಹಕಾರ ಸಂಸ್ಥೆ ಅಸ್ತಿತ್ವಕ್ಕೆ ಬರಲು ಮೊದಲು ಸಹಕಾರ ಮನೋಭಾವದ ಸಮಾನ ಮನಸ್ಕರು ಒಂದೆಡೆ ಸೇರಿ ಸಹಕಾರ ಸಂಘಗಳು ಬೆಳವಣಿಗೆ ಮಾಡೋಣ ಎಂದು ಸಲಹೆ ನೀಡಿದರು.

ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಸುರೇಶ ಸಜ್ಜನ್ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ವ್ಯವಸಾಯ ಸೇವಾ ಸಹಕಾರ ಸಂಘಗಳು) ಡಿಸಿಸಿ ಬ್ಯಾಂಕ್ ತಾಯಿ ಬೇರು. ಗ್ರಾಮೀಣ ಮಟ್ಟದಲ್ಲಿ ಕೃಷಿಕರು ಸೇರಿ ಷೇರು ಹಾಕುವ ಮೂಲಕ ರಚಿತವಾಗಿರುತ್ತದೆ. ಕೃಷಿಗೆ ಬೇಕಾದ ಸಾಲ, ಸೌಲಭ್ಯಗಳನ್ನು ನೇರವಾಗಿ ರೈತರಿಗೆ ವಿತರಿಸುವ ಕೆಲಸವನ್ನು ಈ ಸಹಕಾರ ಸಂಘಗಳು ಮಾಡುತ್ತವೆ ಎಂದರು.

ಜಿಲ್ಲಾ ಸಹಕಾರಿ ಯೂನಿಯನ್ ಒಕ್ಕೂಟದ ಅಧ್ಯಕ್ಷ ವಿಶ್ವನಾಥ ರಡ್ಡಿ ದರ್ಶನಾಪೂರ ಮಾತನಾಡಿ, ಯಾದಗಿರಿ ಜಿಲ್ಲಾ ಯೂನಿಯನ್ ಒಕ್ಕೂಟವು ದ್ವಿತೀಯ ವರ್ಷದ ಎರಡು ವರ್ಷಗಳ ಕಾಲ ಅನೇಕ ವಿವಿಧ ಸಹಕಾರ ಸಂಘದ ಬ್ಯಾಂಕಿಗೆ ತರಬೇತಿ ನೀಡುವುದು ನಮ್ಮ ಒಕ್ಕೂಟದ ಉದ್ದೇಶವಾಗಿರುತ್ತದೆ ಎಂದರು.

ಈ ಸಂದರ್ಭದಲ್ಲಿ ಒಕ್ಕೂಟದ ವತಿಯಿಂದ ಪ್ರಮುಖರಾದ ಮಲ್ಲಿಕಾರ್ಜುನರಡ್ಡಿಗೌಡ ಕೌಳೂರ, ಎಂ. ನಾರಾಯಣ ಶಹಪುರ್, ಭೀಮರೆಡ್ಡಿ ಬೈರೆಡ್ಡಿ ಗೋಗಿ, ರಾಮನಗೌಡ ಸುಬೇದಾರ, ಅಕ್ಕಮಹಾದೇವಿ ಆಲಗೂರ, ಕವಿತಾ ರೇವಡಿ ಹುಣಸಗಿ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಯೂನಿಯನ್ ಒಕ್ಕೂಟದ ನಿರ್ದೇಶಕರಾದ ಸಿದ್ರಾಮರಡ್ಡಿ ಕೌಳೂರ, ಬಾಪುಗೌಡ ಹುಣಸಗಿ, ರಾಜಾಮುಖಂದ ನಾಯಕ, ಕೆಂಚಪ್ಪ ನಗನೂರ, ನಾಜಿಮ್ ಅಹ್ಮದ್, ಅಂಬ್ರಣ್ಣಗೌಡ ಗಡ್ಡೆಸೂಗರು, ವೈಜನಾಥ ಪಾಟೀಲ್ ತುಮಕೂರು, ಪ್ರಕಾಶ ಅಂಗಡಿ ಕನ್ನಳ್ಳಿ, ಸಹಕಾರ ಸಂಘಗಳು ಸಹಾಯಕ ನಿಬಂಧಕರಾದ ಸಿಮಾ ಪಾರೂಖಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಜಾತ ಹಿರೇಮಠ, ಮಲ್ಲಯ್ಯ ಸ್ವಾಮಿ ಇದ್ದರು.

----

20ವೈಡಿಆರ್1: ಯಾದಗಿರಿ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಇತ್ತೀಚೆಗೆ ಜಿಲ್ಲಾ ಸಹಕಾರಿ ಯೂನಿಯನ್ ಒಕ್ಕೂಟದ ದ್ವೀತಿಯ ವಾರ್ಷಿಕ ಮಹಾಸಭೆ ಆಯೋಜಿಸಲಾಗಿತ್ತು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!