ಒಳಪಂಗಡಗಳ ಬದಿಗಿಟ್ಟು ಲಿಂಗಾಯತರು ಒಂದಾಗಲಿ: ರಮೇಶ ಕತ್ತಿ

KannadaprabhaNewsNetwork |  
Published : Oct 26, 2026, 02:15 AM IST
ಫೋಟೋ ಶೀರ್ಷಿಕೆ: ಕೊಪ್ಪಳದ ಶಿವಶಾಂತವೀರ ಕಲ್ಯಾಣ ಮಂಟಪದಲ್ಲಿ ನಡೆದ ಬಣಜಿಗ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿದರು. | Kannada Prabha

ಸಾರಾಂಶ

ವೀರಶೈವ ಲಿಂಗಾಯತ ಧರ್ಮದಲ್ಲಿ ಹಲವು ಒಳಪಂಗಡಗಳಿವೆ. ಒಳಪಂಗಡಗಳ ಕಾರಣದಿಂದ ಸಮಾಜ ರಾಜಕೀಯವಾಗಿ ದುರ್ಬಲವಾಗುತ್ತಿದೆ. ಹೀಗಾಗಿ ಒಳಪಂಗಡಗಳನ್ನು ಬದಿಗಿಟ್ಟು ಎಲ್ಲರೂ ಒಂದಾಗಬೇಕು.

ಬಣಜಿಗ ಸಮಾಜದ ಪದಾಧಿಕಾರಿಗಳ ಪದಗ್ರಹಣ, ಪ್ರತಿಭಾ ಪುರಸ್ಕಾರ ಸಮಾರಂಭ

ಕನ್ನಡಪ್ರಭ ವಾರ್ತೆ ಕೊಪ್ಪಳ

ವೀರಶೈವ ಲಿಂಗಾಯತ ಧರ್ಮದಲ್ಲಿ ಹಲವು ಒಳಪಂಗಡಗಳಿವೆ. ಒಳಪಂಗಡಗಳ ಕಾರಣದಿಂದ ಸಮಾಜ ರಾಜಕೀಯವಾಗಿ ದುರ್ಬಲವಾಗುತ್ತಿದೆ. ಹೀಗಾಗಿ ಒಳಪಂಗಡಗಳನ್ನು ಬದಿಗಿಟ್ಟು ಎಲ್ಲರೂ ಒಂದಾಗಬೇಕು ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

ನಗರದ ಶಿವಶಾಂತವೀರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಣಜಿಗ ಸಮಾಜವು ವೀರಶೈವ ಲಿಂಗಾಯತ ಧರ್ಮದ ಒಂದು ಒಳಪಂಗಡವಾಗಿದೆ. ಎಲ್ಲ ಧರ್ಮಗಳಲ್ಲಿಯೂ ಒಳಪಂಗಡಗಳಿರುವುದು ಸಹಜ. ಆದರೆ, ಸಮಾಜದ ಅಭಿವೃದ್ಧಿ ಮತ್ತು ರಾಜಕೀಯ ಪ್ರಾತಿನಿಧ್ಯದ ದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು. ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿಧಾನಸಭೆಯಲ್ಲಿ 96 ಲಿಂಗಾಯತ ಶಾಸಕರಿದ್ದರು. ಈಗ ಆ ಸಂಖ್ಯೆ 56ಕ್ಕೆ ಇಳಿದಿದೆ. ಇದು ಸಮಾಜದ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂದರ್ಭವಾಗಿದೆ ಎಂದರು.

ಬಣಜಿಗ ಸಮಾಜದವರು ಸ್ವಾಭಿಮಾನಿಗಳಾಗಿದ್ದು, ಸಮಾಜ ಸೇವೆಗೆ ಆದ್ಯತೆ ನೀಡಬೇಕು. ಪಂಚಮಸಾಲಿ ಹಾಗೂ ಬಣಜಿಗ ಸಮಾಜದವರು ವೈವಾಹಿಕ ಸಂಬಂಧಗಳ ಮೂಲಕವೂ ಬೆಸೆದುಕೊಂಡಿದ್ದಾರೆ. ಎಲ್ಲ ಸಮಾಜಗಳ ನಡುವೆ ಸಾಮರಸ್ಯ ಮತ್ತು ಒಗ್ಗಟ್ಟು ಬೆಳೆಯಬೇಕು ಎಂದು ಹೇಳಿದರು.

ವೀರಶೈವ ಲಿಂಗಾಯತ ಪರಂಪರೆಯಲ್ಲಿ ಬಸವಣ್ಣನವರು ಇಷ್ಟಲಿಂಗದ ಮಹತ್ವ ಸಾರುವ ಜತೆಗೆ ಸಮಾನತೆಯ ಸಂದೇಶ ನೀಡಿದರು. ಮಹಿಳೆಯರಿಗೂ ಸಮಾನ ಸ್ಥಾನಮಾನ ಕಲ್ಪಿಸುವ ಆಶಯವನ್ನು ಪ್ರತಿಪಾದಿಸಿದರು. 2028ರ ಚುನಾವಣೆಯ ವೇಳೆಗೆ ಮಹಿಳಾ ಮೀಸಲಾತಿ ಜಾರಿಯಾಗುವ ನಿರೀಕ್ಷೆಯಿದ್ದು, ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ದೊರೆಯುವ ಮೂಲಕ ರಾಜಕೀಯ ಪ್ರಾತಿನಿಧ್ಯ ಹೆಚ್ಚಬೇಕು ಎಂದರು.

ಸಮಾಜ ಅಭಿವೃದ್ಧಿಯಾದರೆ ವ್ಯಕ್ತಿಗಳೂ ಅಭಿವೃದ್ಧಿಯಾಗುತ್ತಾರೆ. ಆದ್ದರಿಂದ ಮಕ್ಕಳಿಗೆ ಆಧುನಿಕ ತಂತ್ರಜ್ಞಾನವನ್ನು ಕಲಿಸುವ ಮೂಲಕ ಭವಿಷ್ಯಕ್ಕೆ ಸಿದ್ಧಗೊಳಿಸಬೇಕು. ಶಿಕ್ಷಣ, ತಂತ್ರಜ್ಞಾನ ಹಾಗೂ ಸಮಾಜ ಸೇವೆಗೆ ಆದ್ಯತೆ ನೀಡುವ ಮೂಲಕ ಬಣಜಿಗ ಸಮಾಜದ ಪ್ರಗತಿಗೆ ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.

ಬಸವರಾಜ ಕೋಮಲಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ ಅಂಗಡಿ ಸ್ವಾಗತಿಸಿದರು. ವೀರಣ್ಣ ಬುಳ್ಳಾ ಅಧ್ಯಕ್ಷತೆ ವಹಿಸಿದ್ದರು. ಡಾ. ಅನುಶ್ರೀ ಶೆಟ್ಟರ ಹಾಗೂ ಬಸವರಾಜ ಶಿರಗುಪ್ಪಿ ಶೆಟ್ಟರ ಕಾರ್ಯಕ್ರಮ ನಿರೂಪಿಸಿದರು.

ಕೊಪ್ಪಳ ತಾಲೂಕು ಘಟಕದ ಅಧ್ಯಕ್ಷ ಶಾಂತೇಶ ಸಂಕ್ಲಾಪುರ, ತಾಲೂಕು ಮಹಿಳಾ ಘಟಕದ ಹೇಮಲತಾ ಬೊಮ್ಮನಾಳ, ಹಂಪಮ್ಮ, ನಗರ ಘಟಕದ ಮಂಜುನಾಥ ಅಂಗಡಿ, ಮಹಿಳಾ ಘಟಕದ ಪರಿಮಳ ಹತ್ತಿ ಸೇರಿದಂತೆ ವಿವಿಧ ಘಟಕಗಳ ನೂತನ ಪದಾಧಿಕಾರಿಗಳು ಪದಗ್ರಹಣ ಮಾಡಿದರು.

ಸಿದ್ದು ಯಾಪಲಪರ್ವಿ, ಜಗದೀಶ ಅವರಾದಿ, ವೀರೇಶ ಕೊತಬಾಳ, ಬಸವರಾಜ ಪಗಡದಿನ್ನಿ, ವಿಶ್ವನಾಥ ಬಳ್ಳೋಳಿ, ಅರವಿಂದ ಅಗಡಿ, ಗವಿಸಿದ್ದಪ್ಪ ಕೊಪ್ಪಳ, ಪ್ರಸನ್ನ ಗಡಾದ, ಗುರುರಾಜ ಹಲಗೇರಿ, ಅಪರ್ಣಾ ಬಳ್ಳೋಳಿ, ಸುಧಾ ಶೆಟ್ಟರ, ಮಲ್ಲಿಕಾರ್ಜುನ ಶೆಟ್ಟರ, ಗಿರಿಜಮ್ಮ, ಮಹೇಶ ಅಂಗಡಿ, ಶಾಂತಪ್ಪ ಸೋಬಾನದವರು, ಮಂಜುನಾಥ ಶೆಟ್ಟರ ಹಾಗೂ ಪ್ರಶಾಂತ ಕೋರಿಶೆಟ್ಟರ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೋಗಿ, ಕಬ್ಬಿನಾಲೆ, ಕೆರೆಮನೆಗೆ ‘ಮಹಾಬಲ’ ಪ್ರಶಸ್ತಿ
ಅಂಬಿಗರ ಚೌಡಯ್ಯನವರ ಐಕ್ಯ ಮಂಟಪದ ಅಭಿವೃದ್ಧಿಗೆ ಆಗ್ರಹ