ಸಮ ಸಮಾಜಕ್ಕಾಗಿ ಸಾಮೂಹಿಕ ವಿವಾಹ ಹೆಚ್ಚಾಗಲಿ: ದಿಂಗಾಲೇಶ್ವರ ಸ್ವಾಮೀಜಿ

KannadaprabhaNewsNetwork |  
Published : Apr 16, 2025, 12:43 AM IST
ಹರಪನಹಳ್ಳಿ ತಾಲೂಕಿನ ಕಂಚಿಕೇರಿ ಕೋಡಿಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಡಾ.ಬಿದ್ರಿ ಕೊಟ್ರೇಶ ಹಾಗೂ ಅನುರಾಧ ಕೊಟ್ರೇಶ ದಂಪತಿಗಳು ನಡೆಸಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವ ವಧುವರರು ದಾಂಪತ್ಯಕ್ಕೆ ಕಾಲಿಟ್ಟರು. | Kannada Prabha

ಸಾರಾಂಶ

ಸಮ ಸಮಾಜ ನಿರ್ಮಾಣಕ್ಕೆ ಸಾಮೂಹಿಕ ವಿವಾಹಗಳು ಹೆಚ್ಚು ಹೆಚ್ಚು ನಡೆಯಬೇಕು.

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಸಮ ಸಮಾಜ ನಿರ್ಮಾಣಕ್ಕೆ ಸಾಮೂಹಿಕ ವಿವಾಹಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ಬಾಲೆಹೊಸೂರಿನ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಕಂಚಿಕೇರಿ ಗ್ರಾಮದ ಕೋಡಿ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಡಾ. ಬಿದ್ರಿ ಕೊಟ್ರೇಶ ಹಾಗೂ ಬಿದ್ರಿ ಅನುರಾಧ ಕೊಟ್ರೇಶ ಪ್ರತಿಷ್ಠಾನ ವತಿಯಿಂದ ಲಿಂಗೈಕ್ಯ ಬಿದ್ರಿ ರೇವಣಸಿದ್ದಪ್ಪನವರ ಸ್ಮರಣಾರ್ಥ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಸಮಾಜದಲ್ಲಿ ಇಂತಹ ಸರಳ ಸಾಮೂಹಿಕ ವಿವಾಹಗಳಿಗೆ ಆದ್ಯತೆ ಸಿಗಬೇಕಾಗಿದೆ ಎಂದ ಅವರು, ಸಮಾಜಮುಖಿ ಕಾರ್ಯಕ್ರಮಗಳಿಗೆ ಸರ್ವರೂ ಸಹಕಾರ ನೀಡಬೇಕು ಎಂದರು.

ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ನವಜೋಡಿಗಳಿಗೆ ಮಾಂಗಲ್ಯ ವಿತರಿಸಿ ಮಾತನಾಡಿ, ಬಡವರಿಗೆ ಹೊರೆಯಾಗದಂತೆ ಬಿದ್ರಿ ಕೊಟ್ರೇಶಪ್ಪನವರು ಪ್ರತಿ ವರ್ಷ ಸಾಮೂಹಿಕ ಮದುವೆ ಮಾಡಿಕೊಂಡು ಬರುತ್ತಿದ್ದಾರೆ. ಇದನ್ನು ಮುಂದುವರೆಸಿಕೊಂಡು ಹೋಗಲಿ, ಜೊತೆಗೆ ಈ ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದನ್ನು ಸಹ ಮುಂದುವರಿಸಲಿ ಎಂದು ಹೇಳಿದರು.

ರೇಷ್ಮೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಡಿ.ಬಸವರಾಜ ಮಾತನಾಡಿದರು.

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ, "ಬಿದ್ರಿ ಸಮಗ್ರ ಸಾಧನ ಪ್ರಶಸ್ತಿ "ಯನ್ನು ಸಿಂಗ್ರಿಹಳ್ಳಿ ಕಾಲೇಜಿಗೆ ನೀಡಲಾಯಿತು.

ಶ್ರೀಶೈಲ ಜಗದ್ಗುರುಗಳು ಸಾನಿಧ್ಯ ವಹಿಸಿದ್ದರು. ಸಂಘಟಕ ಡಾ. ಬಿದ್ರಿ ಕೊಟ್ರೇಶ, ಅನುರಾಧ ಕೊಟ್ರೇಶ, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಯರಬಳ್ಳಿ ಉಮಾಪತಿ, ದಿಶಾ ಸಮಿತಿ ಸದಸ್ಯ ರೆಡ್ಡಿ ಶಾಂತಕುಮಾರ್, ಗ್ರಾಪಂ ಅಧ್ಯಕ್ಷ ಹಳ್ಳಿಕೆರೆ ನೀಲಮ್ಮ ಮಂಜಪ್ಪ. ಉಪಾಧ್ಯಕ್ಷ ತನುಜ ನಾಗರಾಜ್, ಬಿದ್ರಿಸುನಿಲ್ ಶಂಕರ್ ಪಾಟೀಲ್, ವೆಂಕಟೇಶ್ ರಾಮ ರೆಡ್ಡಿ, ಜಿ.ಚಿದಾನಂದ, ಡಾ. ಅನಿಲ್, ಜಾತಪ್ಪ, ಪ್ರಾಂಶುಪಾಲರಾದ ತೋಪಾಲಿ ಹಾಲೆಶ್, ರಾಮಚಂದ್ರಪ್ಪ, ಚಳಗೇರಿ, ಉಪನ್ಯಾಸಕರಾದ ವೆಂಕಟೇಶ್, ಪರಶುರಾಮ ಇತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!