ಅಲ್ಪಸಂಖ್ಯಾತರು ರಾಜಕೀಯ ಕ್ಷೇತ್ರದಲ್ಲಿ ತೊಡಗಲಿ : ಐವನ್ ಡಿಸೋಜಾ

KannadaprabhaNewsNetwork |  
Published : Sep 20, 2024, 01:40 AM IST
ಮೂಡಿಗೆರೆ ತಾಲೂಕಿನ ಬಣಕಲ್ ಚರ್ಚ್ ಹಾಲ್ ನಲ್ಲಿ  ಅಭಿನಂದನೆ ಹಾಗೂ ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ಮಾಹಿತಿ ಕಾರ್ಯಾಗಾರ ಸಮಾರಂಭ ನಡೆಯಿತು. ವಿಧಾನಪರಿಷತ್‌ ಸದಸ್ಯ ಐವನ್‌ ಡಿಸೋಜಾ, ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ. ನಿಂಗಯ್ಯ ಇದ್ದರು. | Kannada Prabha

ಸಾರಾಂಶ

ಕೊಟ್ಟಿಗೆಹಾರ, ಅಲ್ಪಸಂಖ್ಯಾತರು ರಾಜಕೀಯ ಕ್ಷೇತ್ರದಲ್ಲಿ ಬೆರೆತರೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಹೇಳಿದರು.

ಅಲ್ಪಸಂಖ್ಯಾತರ ಇಲಾಖೆಯಿಂದ ಮಾಹಿತಿ ಕಾರ್ಯಾಗಾರ । ಅಭಿನಂದನೆ ಸ್ವೀಕಾರ

ಕನ್ನಡಪ್ರಭ ವಾರ್ತೆ, ಕೊಟ್ಟಿಗೆಹಾರ

ಅಲ್ಪಸಂಖ್ಯಾತರು ರಾಜಕೀಯ ಕ್ಷೇತ್ರದಲ್ಲಿ ಬೆರೆತರೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಹೇಳಿದರು.

ಬಣಕಲ್ ಚರ್ಚ್ ಹಾಲ್ ನಲ್ಲಿ ಮರಿಯ ಚರ್ಚ್ ಪಾಲನಾ ಮಂಡಳಿ, ಕ್ರೈಸ್ತರ ಅಭಿವೃದ್ಧಿ ಸಂಘ ಹಾಗೂ ಆರ್ಥಿಕ ಸಮಿತಿಯಿಂದ ಏರ್ಪಡಿಸಲಾಗಿದ್ದ ಅಭಿನಂದನೆ ಹಾಗೂ ಅಲ್ಪಸಂಖ್ಯಾತರ ಇಲಾಖೆಯಿಂದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ರಾಜಕೀಯದಲ್ಲಿ ಬೆರೆತು ಜನರ ಸಂಕಷ್ಟಗಳಿಗೆ ಸ್ಪಂಧಿಸಿದರೆ ಪ್ರಜಾಪ್ರಭುತ್ವದ ವಿಚಾರಧಾರೆ ಸಫಲಗೊಳ್ಳುತ್ತದೆ. ಕ್ರೈಸ್ತ ಸಮುದಾಯದವರು ರಾಜಕೀಯ ನಮಗೆ ಆಗಲ್ಲ ಎಂಬ ನಕಾರಾತ್ಮಕ ಭಾವನೆ ದೂರಸರಿಸಿ ಸಮಾಜದಲ್ಲಿ ಸಾಧನೆ ಮೇಲೇರಲು ಪ್ರಯತ್ನ ಮಾಡಬೇಕು. ಪ್ರಜಾಪ್ರಭುತ್ವದ ಮೌಲ್ಯಗಳು ನಮ್ಮೆಲ್ಲರಲ್ಲಿ ನೆಲೆಗೊಂಡಲ್ಲಿ ಮಾತ್ರ ಭಾರತ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ ಎಂದು ಹೇಳಿದರು.

ಪ್ರಜಾಪ್ರಭುತ್ವ ಒಂದು ವ್ಯವಸ್ಥೆಯಾಗದೇ ಅದು ನಮ್ಮ ಜೀವನ ಶೈಲಿಯಾಗಬೇಕು. ಹೆಚ್ಚು ಅಲ್ಪಸಂಖ್ಯಾತರು ರಾಜಕೀಯ ಕ್ಷೇತ್ರಕ್ಕೆ ಬರಬೇಕು, ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಜೊತೆಗೆ ಸಾಧನೆ ಮಾಡಬೇಕು ಎಂದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಐವನ್ ಡಿಸೋಜ ಅವರು ಕ್ರೈಸ್ತ ಸಮುದಾಯದವರು ವಾತ್ಸಲ್ಯಮಯಿ ನಡವಳಿಕೆಯಿಂದ ರಾಜಕೀಯ ಕ್ಷೇತ್ರದಲ್ಲಿ ವಿಶ್ವಾಸ ಉಳಿಸಿಕೊಂಡಿದ್ದಾರೆ. ಮುಂದೆ ಆಸ್ಕರ್ ಫೆರ್ನಾಂಡಿಸ್ ಅವರ ಕಾರ್ಯವೈಖರಿಯಂತೆ ಮೇಲೇರಿ ಸಚಿವರಾಗಲಿ, ದೇಶಕ್ಕೆ ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಕ್ರೈಸ್ತರ ಕೊಡುಗೆ ಅಪಾರವಾಗಿದೆ ಎಂದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಐವನ್ ಡಿಸೋಜರವರ ಮಾದರಿ ನಡವಳಿಕೆ ಎಲ್ಲರಿಗೂ ಮೆಚ್ಚುವಂತದ್ದು ಎಂದರು.

ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ ಬಲರಾಮ್ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಅಲ್ಪಸಂಖ್ಯಾತರಿಗೆ ಶಿಕ್ಷಣ, ವಿದ್ಯಾರ್ಥಿ ವೇತನ, ವ್ಯಾಪಾರ, ಉದ್ಯಮ, ಚರ್ಚ್ ದುರಸ್ತಿ, ತಡೆಗೋಡೆ ನಿರ್ಮಾಣ, ಸಮುದಾಯ ಭವನ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳಿವೆ ಅವುಗಳ ಮಾಹಿತಿ ಪಡೆದು ಸರ್ಕಾರದ ಸೌಲಭ್ಯ ಬಳಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾತನಾಡಿ, ಮಲೆನಾಡಿನಲ್ಲಿ ಕಸ್ತೂರಿ ರಂಗನ್ ವರದಿ ತೂಗುಕತ್ತಿ ನೇತಾಡುತ್ತಿದ್ದು ಅದು ಜಾರಿಯಾದರೆ ರೈತರು ಕೃಷಿ ಚಟುವಟಿಕೆಗೆ ಪೆಟ್ಟು ಬೀಳಲಿದೆ. ಸರ್ವರೂ ಪಕ್ಷಾತೀತವಾಗಿ ಸಂಘಟಿತರಾಗಿ ಈ ವರದಿ ವಿರೋಧಿಸಿ ಪ್ರತಿಭಟಿಸಿ ಕೇಂದ್ರದ ಗಮನಕ್ಕೆ ತರುವ ಅಗತ್ಯವಿದೆ ಎಂದರು.

ಸಮಾರಂಭದಲ್ಲಿ ಬಣಕಲ್, ಬಾಳೂರು, ಜಾವಳಿ, ಮೂಡಿಗೆರೆ, ಬಾಳೆಹೊನ್ನೂರು ಚರ್ಚ್ ನಿಂದ ಐವನ್ ಡಿಸೋಜ ಅವರನ್ನು ಸನ್ಮಾನಿಸ ಲಾಯಿತು. ಉತ್ತಮ ಸೇವೆಗಾಗಿ ಮುಖ್ಯ ಶಿಕ್ಷಕ ಪಿ.ವಾಸುದೇವ್, ಮೊಹಮ್ಮದ್ ಆರೀಪ್ ಅವರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ರಾಜ್ಯ ಘಟಕದ ಉಪಾಧ್ಯಕ್ಷ ಹರ್ಷ ಮೆಲ್ವಿನ್ ಲಸ್ರಾದೊ, ಬಾಳೆಹೊನ್ನೂರು ವಲಯದ ಧರ್ಮಗುರು ಫಾ.ಪೌಲ್ ಡಿಸೋಜ, ಬಣಕಲ್ ಚರ್ಚ್ ಧರ್ಮಗುರು ಫಾ.ಪ್ರೇಮ್ ಲಾರೆನ್ಸ್ ಡಿಸೋಜ, ಫಾ.ಪ್ರಾನ್ಸಿಸ್ ರಸ್ಕೀನಾ, ಫಾ.ಥಾಮಸ್ ಕಲಘಟಗಿ, ಫಾ.ಆನಂದ್ ಕ್ಯಾಸ್ತಲಿನೊ, ಫಾ.ಎಡ್ವಿನ್ ಆರ್.ಡಿಸೋಜ, ತಾಲೂಕು ಘಟಕದ ಅಧ್ಯಕ್ಷ ಎಚ್.ಜಿ.ಸುರೇಂದ್ರ ಗೌಡ, ಕಾಂಗ್ರೆಸ್ ಮುಖಂಡ ಬಿ.ಎಸ್.ಜಯರಾಮ್, ಗ್ರಾಪಂ ಅಧ್ಯಕ್ಷೆ ಝರೀನಾ, ಸಿಸ್ಟರ್ ಹಿಲ್ಡಾ ಲೋಬೊ, ಪ್ರೆಸಿಲ್ಲಾ ಡಿಸೋಜ, ಮರೀನಾ ಡೇಸಾ, ಮಾರ್ಗರೇಟ್ ಫೆರ್ನಾಂಡಿಸ್ , ಬೆನ್ನಡಿಕ್ಟ್ ಲೋಬೊ,ರೇಷ್ಮಾ ತಾವ್ರೊ, ಲಿಯೋ ಸುದೇಶ್, ಎ.ಜೆ.ಪೌಲ್ಸನ್, ಎಸ್.ನವೀನ್, ವಿಕ್ಟರ್ ಮಾರ್ಟಿಸ್, ಪ್ರಾನ್ಸಿಸ್ ಲೋಬೊ

19 ಕೆಸಿಕೆಎಂ 5ಮೂಡಿಗೆರೆ ತಾಲೂಕಿನ ಬಣಕಲ್ ಚರ್ಚ್ ಹಾಲ್ ನಲ್ಲಿ ಅಭಿನಂದನೆ ಹಾಗೂ ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ಮಾಹಿತಿ ಕಾರ್ಯಾಗಾರ ಸಮಾರಂಭ ನಡೆಯಿತು. ವಿಧಾನಪರಿಷತ್‌ ಸದಸ್ಯ ಐವನ್‌ ಡಿಸೋಜಾ, ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ. ನಿಂಗಯ್ಯ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!