- ಕರ್ನಾಟಕ ಬುದ್ಧ ಧಮ್ಮ ಸಮಿತಿ ಕಾರ್ಯದರ್ಶಿ ಆರ್. ಮಹದೇವಪ್ಪಕನ್ನಡಪ್ರಭ ವಾರ್ತೆ ಮೈಸೂರು
ದಲಿತ ಸಂಘರ್ಷ ಸಮಿತಿಯು ಎಂಜಿನಿರುಗಳ ಸಂಸ್ಥೆ ಸಭಾಂಗಣದಲ್ಲಿ ಬುಧವಾರ ಡಾ.ಬಿ.ಆರ್. ಅಂಬೇಡ್ಕರ್ ಅವರ 133ನೇ ವರ್ಷದ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರ ಧೋರಣೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಿ ಎಂದರೆ ಕಾರ್ಯಾಂಗದ ಮುಖ್ಯಸ್ಥರಷ್ಟೆ. ಆದರೆ ಪ್ರಜಾಪ್ರಭುತ್ವದಲ್ಲಿ ನಾನೇ ಸರ್ವಸ್ವ ಎನ್ನುವುದಕ್ಕೆ ಮಾನ್ಯವಿಲ್ಲ. ಇದನ್ನು ಪ್ರಧಾನಿ ಅರ್ಥ ಮಾಡಿಕೊಳ್ಳಬೇಕು. ಪ್ರಧಾನಿಗೆ ಕೆಲವು ಮಿತಿಗಳಿವೆ. ಅವರು ಸಂವಿಧಾನವನ್ನು ಚೆನ್ನಾಗಿ ಓದಿಕೊಳ್ಳಬೇಕು. ಮೋದಿ ಅವರು ತಮ್ಮ ಹೆಸರನ್ನು ತಾವೇ ಹೇಳಿಕೊಳ್ಳುತ್ತಾರೆ ಎಂದು ಅವರು ಟೀಕಿಸಿದರು.2004ರಲ್ಲಿ ಬಿಜೆಪಿ ಪ್ರಣಾಳಿಕೆಯ ಪುಟಗಳಲ್ಲಿ ತಮ್ಮ ಫೋಟೋ ಹಾಕಿದ್ದಕ್ಕೆ ವಾಜಪೇಯಿ ಆಕ್ಷೇಪ ವ್ಯಕ್ತಪಡಿಸುತ್ತಾರೆ. ವೈಭಿಕರಿಸಿದ್ದನ್ನು ವಿರೋಧಿಸುತ್ತಾರೆ. ಆದರೆ, ಆರ್ಎಸ್ಎಸ್ ನಲ್ಲಿ ತರಬೇತಿ ಪಡೆದವರಿಗೆ ನಾನು ಹೋಗಿ ನಾವು ಬರಬೇಕು. ಆದರೆ, ಮೋದಿ ಅವರಲ್ಲಿ ನಾವು ಅನ್ನೋದು ಇಲ್ಲವೇ ಇಲ್ಲ ಎಂದರು.
ಲೇಖಕ ಡಾ. ದಿಲೀಪ್ ನರಸಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತ ಪ್ರಜಾಪ್ರಭುತ್ವದ ತಾಯಿ. ಬುದ್ಧರ ಕಾಲದಲ್ಲಿಯೇ ಪ್ರಜಾಪ್ರಭುತ್ವ ವ್ಯವಸ್ಥೆ ಇತ್ತು. ಎಲ್ಲಾ ಸಂಘಗಳಲ್ಲಿ ಆಯ್ಕೆ ಮತ್ತು ನಿರಾಕರಣೆಯ ಅವಕಾಶವಿತ್ತು. 12ನೇ ಶತಮಾನದಲ್ಲಿ ಬಸವಾದಿ ಶರಣರು ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಿದ್ದಾಗಿ ಹೇಳಿದರು.
ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಚಿಂತಕ ಎಲ್. ವಿಜಯಕುಮಾರ್ ವಿಷಯ ಮಂಡಿಸಿದರು. ಜಿಲ್ಲಾ ಸಂಚಾಲಕ ಆಲಗೂಡು ಚಂದ್ರಶೇಖರ್, ಚಾ. ಶಿವಕುಮಾರ್, ಕೆ.ವಿ. ದೇವೇಂದ್ರ, ಶಿವಮೂರ್ತಿ ಶಂಕರಪುರ, ಕಿರಂಗೂರು ಸ್ವಾಮಿ, ನಟರಾಜ್ ಹಾರೋಹಳ್ಳಿ ಇದ್ದರು.