ಕನ್ನಡಪ್ರಭ ವಾರ್ತೆ ಮೂಡಲಗಿ
ಮೂಡಲಗಿಯಲ್ಲಿ ಸೋಮವಾರ ಮೂಡಲಗಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯ 25ನೇ ವರ್ಷದ ಬೆಳ್ಳಿ ಮಹೋತ್ಸವದಲ್ಲಿ ಮಾತನಾಡಿದ ಅವರು, ಸಮಾಜದ ಕಟ್ಟ ಕಡೆ ವ್ಯಕ್ತಿಗೆ ಸಾಲ ನೀಡುವ ಮೂಲಕ ಆರ್ಥಿಕವಾಗಿ ಸದೃಢವಾಗಿ ಬೆಳೆದು ಆ ವ್ಯಕ್ತಿ ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರಿ ಸಂಸ್ಥೆಗಳು ಮುಂದೆ ಬರಬೇಕು ಎಂದು ಆಶಿಸಿದರು.
ಸಹಕಾರಿ ಕ್ಷೇತ್ರವು 1905 ರಲ್ಲಿ ಪ್ರಾರಂಭವಾಗಿದ್ದು ದೇಶದಲ್ಲಿ ಸಹಕಾರಿ ಕ್ಷೇತ್ರ ಬೆಳೆಯಲು ಕರ್ನಾಟಕವು ಭದ್ರ ಬುನಾದಿಯಾಗಿದ್ದು, ರಾಜ್ಯದ ಸಣ್ಣರಾಮನಗೌಡ ಸಿದ್ದನಗೌಡ ಪಾಟೀಲ ಸಹಕಾರ ಸಂಸ್ಥೆಯನ್ನು ಹುಟ್ಟು ಹಾಕಿದ್ದು, ಅವರ ಸ್ಮರಣೆ ಮುಖ್ಯ ಎಂದರು.ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸಹಕಾರ ವಲಯಕ್ಕೆ ಸೂಕ್ತ ಉತ್ತೇಜನ ನೀಡುವ ಸಲುವಾಗಿ ಕೇಂದ್ರವು ಪ್ರತ್ಯೇಕ ಸಹಕಾರ ಸಚಿವಾಲಯ ಸ್ಥಾಪಿಸಿದೆ ಎಂದ ಅವರು, ದೇಶದಲ್ಲಿ ಸಹಕಾರಿ ಕ್ಷೇತ್ರ ಬೆಳೆಯಲು ವಿವಿ ಸ್ಥಾಪಿಸಿದ್ದಾರೆ. ಸಹಕಾರಿ ಕ್ಷೇತ್ರ ಬೆಳೆದರೆ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಹಳೇಹುಬ್ಬಳ್ಳಿ ವೀರಭಿಕ್ಷಾವರ್ತಿ ನೀಲಕಂಠಮಠದ ಶ್ರೀ ಶಿವಶಂಕರ ಶ್ರೀಗಳು, ಸುಣಧೋಳಿ ಜಡಿಸಿದ್ದೇಶ್ವರ ಮಠದ ಶ್ರೀ ಶಿವಾನಂದ ಶ್ರೀಗಳು, ಸದಲಗಾ ಶ್ರೀ ಶಿವಾನಂದ ಗೀತಾಶ್ರಮದ ಶ್ರದ್ಧಾನಂದ ಶ್ರೀಗಳು, ಅಸುಂಡಿಯ ಡಾ.ಶಿವಶರಣೆ ನೀಲಮ್ಮ ತಾಯಿಯವರು ಮಾತನಾಡಿ, ಕುರುಹಿನಶೆಟ್ಟಿ ಸೊಸೈಟಿಯ ಸಾಧನೆಯನ್ನು ಶ್ಲಾಘಿಸಿ ಇನ್ನಷ್ಟು ಉತ್ತರೋತ್ತರವಾಗಿ ಬೆಳೆಯಲ್ಲಿ ಎಂದರು.
ಕಲ್ಲೋಳಿಯ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಾಳಪ್ಪ ಬೆಳಕೂಡ, ಬೈಲಹೊಂಗಲ ಸಹಕಾರಿ ಸಂಘಗಳ ಸಹಾಯಕ ನಿಬಂಧಕಿ ಶಾಹೀನ್ ಅಖ್ತರ, ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಪ್ರಾಚಾರ್ಯ ಪ್ರೊ.ಸಂಗಮೇಶ ಗುಜಗೊಂಡ ಮಾತನಾಡಿದರು.
ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಉಪಾಧ್ಯಕ್ಷ ರವೀಂದ್ರ ಸೋನವಾಲಕರ, ನಿರ್ದೇಶಕ ಸುಭಾಸ ಸೋನವಾಲಕರ, ಕರ್ನಾಟಕ ರಾಜ್ಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂಜಯ ಹೊಸಮಠ, ಕೊಗನಳ್ಳಿಯ ದತ್ತಗುರು ಸಹಕಾರಿ ಅಧ್ಯಕ್ಷ ಸಚಿನ ಖೋತ, ಕುರುಹಿನಶೆಟ್ಟಿ ಸೊಸೈಟಿಯ ಉಪಾಧ್ಯಕ್ಷ ಲಕ್ಕಪ್ಪ ಪೂಜೇರಿ, ನಿರ್ದೇಶಕರಾದ ಸುಭಾಸ ಬೆಳಕೂಡ, ಇಸ್ಮಾಯಿಲ್ ಕಳ್ಳಿಮನಿ, ಗೊಡಚಪ್ಪ ಮುರಗೋಡ, ಬಸವರಾಜ ಬೆಳಕೂಡ, ವಿಶಾಲ ಶೀಲವಂತ, ಉಮಾ ಬೆಳಕೂಡ, ಶಾಂತವ್ವಾ ಬೊರಗಲ್, ಮಹಾಬೂಬಿ ಕಳ್ಳಿಮನಿ, ಮಾಲಾ ಬೆಳಕೂಡ, ಶ್ಯಾಲನ್ ಕೊಡತೆ ಮತ್ತಿತರರು ಇದ್ದರು.