ಸಂಘ ಸಂಸ್ಥೆಗಳು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಲಿ: ಶ್ರೀಧರ ರಾವ್

KannadaprabhaNewsNetwork | Published : Jul 2, 2024 1:32 AM

ಸಾರಾಂಶ

ಶೃಂಗೇರಿ, ಸಮಾಜದಲ್ಲಿ ಬದುಕುತ್ತಿರುವ ಪ್ರತಿಯೊಬ್ಬರ ಮೇಲೆ ಸಮಾಜದ ಋಣವಿದೆ. ಸಮಾಜದ ಋಣ ತೀರಿಸುವುದು ನಮ್ಮೆಲ್ಲರ ಕರ್ತವ್ಯ. ಆ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಎಂ.ಎಂ.ಶ್ರೀಧರ ರಾವ್‌ ಹೇಳಿದರು.

ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಸರ್ವ ಸದಸ್ಯರ ವಾರ್ಷಿಕ ಸಭೆ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಸಮಾಜದಲ್ಲಿ ಬದುಕುತ್ತಿರುವ ಪ್ರತಿಯೊಬ್ಬರ ಮೇಲೆ ಸಮಾಜದ ಋಣವಿದೆ. ಸಮಾಜದ ಋಣ ತೀರಿಸುವುದು ನಮ್ಮೆಲ್ಲರ ಕರ್ತವ್ಯ. ಆ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಎಂ.ಎಂ.ಶ್ರೀಧರ ರಾವ್‌ ಹೇಳಿದರು.

ಪಟ್ಟಣದ ರಾಜಾನಗರ ಶ್ರೀ ವಿದ್ಯಾಭಾರತಿ ಭವನದಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಹೆಬ್ಬಾರ ಸಮಾಜ ಉತ್ತಮ ಸಂಘಟನೆ ಹೊಂದಿದೆ. ಸಭಾದಿಂದ ಪ್ರತೀವರ್ಷ ಗುರುದರ್ಶನ, ಶಂಕರ ಜಯಂತಿ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಅಶಕ್ತ ರೋಗಿಗಳಿಗೆ ಸಹಾಯಧನ, ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಕೆಲಸ ಮಾಡುತ್ತಿದೆ ಎಂದರು. ಸಭಾದ ಅಧ್ಯಕ್ಷ ವಿಜಯರಂಗ ಗುಡ್ಡೆ ತೋಟ ಮಾತನಾಡಿ ಶಾರದಾ ಪೀಠದ ಜಗದ್ಗುರುಗಳ ಆದೇಶದಂತೆ ಮೂರು ವರ್ಷದಿಂದ ನಡೆಸುತ್ತಿರುವ ಕೋಟಿ ಗಾಯಿತ್ರಿ ಜಪ ಯಜ್ಞ ಇನ್ನೂ ದೊಡ್ಡ ಮಟ್ಟದಲ್ಲಿ ನಡೆಯಬೇಕಿದೆ. ಗಾಯಿತ್ರಿ ಮಂತ್ರ ಉಪದೇಶ ಪಡೆದ ಎಲ್ಲಾ ಬ್ರಾಹ್ಮಣರು ಪ್ರತಿ ದಿನವೂ ಗಾಯಿತ್ರಿ ಜಪ ಮಾಡಬೇಕು ಎಂಬುದು ಜಗದ್ಗುರುಗಳ ಸೂಚನೆಯಾಗಿದ್ದು, ಅದರಂತೆ ಪ್ರತೀ ವರ್ಷ ಗಾಯಿತ್ರಿ ಹೋಮ ಆಯೋಜಿಸಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಅಡ್ಡಗದ್ದೆಯ ರಾಧಾಕೃಷ್ಣ- ಸುಕನ್ಯಾ ದಂಪತಿಯನ್ನು ಸನ್ಮಾನಿಸಲಾಯಿತು. ಎಸ್ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರಸಪ್ರಶ್ನೆ, ಹಲಸಿನ ಹಪ್ಪಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಭಾದ ಚರಣ್, ಅನಂತಕೃಷ್ಣ ಹೆಬ್ಬಾರ್‌, ಅಶೋಕ್, ದಿನೇಶ್‌ ಮತ್ತಿತರರು ಇದ್ದರು.

1 ಶ್ರೀ ಚಿತ್ರ 1-

ಶೃಂಗೇರಿ ಪಟ್ಟಣದ ರಾಜಾನಗರ ವಿದ್ಯಾಭಾರತಿ ಸಭಾಭವನದಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಅಡ್ಡಗದ್ದೆಯ ರಾದಾಕೃಷ್ಣ ದಂಪತಿಯನ್ನು ಸನ್ಮಾನಿಸಲಾಯಿತು.

Share this article