- ಕಾಳಿಕಾದೇವಿ ೨೮ನೇ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ
ಮಲೇಬೆನ್ನೂರು: ಪೋಷಕರು ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವ ಮೂಲಕ ಸುಸಂಸ್ಕೃತ ಸಮಾಜ ನಿರ್ಮಿಸಲು ಸಹಕರಿಸಬೇಕು ಎಂದು ಅರೆಮಾದೇನಹಳ್ಳಿ ಸ್ಮಜ್ಞಾನ ಸಂಸ್ಥಾನದ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ನುಡಿದರು.
ಪಟ್ಟಣದ ಪೇಟೆ ರಸ್ತೆಯಲ್ಲಿ ಕಾಳಿಕಾದೇವಿಯ ೨೮ನೇ ಪ್ರಾಣ ಪ್ರತಿಷ್ಠಾಪನೆಯ ವಾರ್ಷಿಕೋತ್ಸವ ಹಾಗೂ ಧಾರ್ಮಿಕ ಸಭೆಯಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಸಂದೇಶ ನೀಡಿದರು. ಅಧ್ಯಾತ್ಮ, ಧ್ಯಾನ, ಮತ್ತು ದಾನಗಳು ಮನಸ್ಸಿಗೆ ಶಾಂತಿ- ನೆಮ್ಮದಿ ತಂದು ಕೊಡುತ್ತವೆ. ಶ್ರದ್ಧೆ, ಪ್ರಾಮಾಣಿಕತೆಗಳು ಸ್ವಾಸ್ಥ್ಯ ಸಮಾಜದ ಲಕ್ಷಣಗಳಾಗಿವೆ ಎಂದರು.ವಿಶ್ವಕರ್ಮ ಸಮಾಜದವರು ಬರೀ ೧೫ ಲಕ್ಷ ಇದ್ದಾರೆ ಎಂದು ವರದಿಯಲ್ಲಿ ಇದೆ. ಆದರೆ ಅದಕ್ಕಿಂತ ಹೆಚ್ಚು ಸಂಖ್ಯೆ ಇದ್ದೇವೆ. ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಹಾಜರಾಗಿ ಜಾತಿ ಹೆಸರನ್ನು ದಾಖಲಿಸಿ ಎಂದು ಸಮಾಜದವರಿಗೆ ಸ್ವಾಮೀಜಿ ಸಲಹೆ ನೀಡಿದರು.
ವಡ್ನಾಳ್ ಸಾವಿತ್ರಿ ಪೀಠದ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ ವಿಶ್ವಕರ್ಮ ಧ್ವಜಾರೋಹಣ ನೆರವೇರಿಸಿ, ಕಾಳಿಕಾದೇವಿಗೆ ಪೂಜೆ ಸಲ್ಲಿಸಿದರು. ವೀರೇಶಾಚಾರ್ ದೇವಿಗೆ ಮಹಾಅಭಿಷೇಕ, ಯಜ್ಷ, ಹೋಮ ನಡೆಸಿದರು. ೩೯ ವಟುಗಳಿಗೆ ಸಾಮೂಹಿಕ ಉಪನಯನ ನಡೆಯಿತು.ಹಿಂದಿನ ದಿನ ದೇವಿಗೆ ಹೂವಿನ ಪಲ್ಲಕ್ಕಿ ಉತ್ಸವ, ಅಂಲಂಕಾರ, ಗಣಪತಿ ಪೂಜೆ, ಮಹಾಮಂಗಳಾರತಿ ನಡೆಯಿತು. ವಿಶ್ವಕರ್ಮ ಯೋಜನೆಯ ಸಂಪನ್ಮೂಲ ವ್ಯಕ್ತಿ ಪದ್ಮಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕರಿಸಿದರು. ದಾನಿಗಳನ್ನು ಗೌರವಿಸಲಾಯಿತು. ದಾವಣಗೆರೆ ಜಿಲ್ಲೆಯ ವಿಶ್ವಕರ್ಮ ಸಮಾಜದ ಸಾವಿರಾರು ಬಂಧುಗಳು ಭಾಗವಹಿಸಿದ್ದರು. ಅನ್ನ ಸಂತರ್ಪಣೆ ನಡೆಯಿತು.
- - --೭ಎಂಬಿಆರ್೧:
ಶಿವಸುಜ್ಞಾನತೀರ್ಥ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿದರು.