ನಾಟಕಗಳು ಸಾಮಾಜಿಕ ಸಂವೇದನೆ ಒಳಗೊಂಡಿರಲಿ: ಎಸ್.ಜಿ.ನಂಜಯ್ಯನಮಠ

KannadaprabhaNewsNetwork |  
Published : Jan 09, 2025, 12:46 AM IST
ಸೂಳೇಬಾವಿಯಲ್ಲಿ ಜರುಗಿದ ಜೋಕುಮಾರಸ್ವಾಮಿ ನಾಟಕ ಪ್ರದರ್ಶನವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ತಬಲಾವಾದ್ಯ ನುಡಿಸುವ ಮೂಲಕ ಉದ್ಘಾಟಿಸಿದರು. | Kannada Prabha

ಸಾರಾಂಶ

ಸಾಮಾಜಿಕ ಸಂವೇದನೆಗಳಿಗೆ ಸ್ಪಂದಿಸುವ ನಾಟಕಗಳು ಮಾತ್ರ ಎಲ್ಲರ ಮನಸ್ಸನ್ನು ಸೆಳೆಯುತ್ತವೆ. ನಾಟಕಗಳಿಂದ ಸಾಮಾಜಿಕ ಸಂದೇಶ ಮತ್ತು ಮೌಲ್ಯ ಬಿತ್ತುವ ಕೆಲಸವಾಗಬೇಕು

ಕನ್ನಡಪ್ರಭ ವಾರ್ತೆ ಅಮೀನಗಡ

ಸಾಮಾಜಿಕ ತಲ್ಲಣಗಳ ಮೇಲೆ ಬೆಳಕುಚೆಲ್ಲಿ, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಕೆಲಸಗಳು ನಾಟಕಗಳಿಂದಾಬೇಕು ಎಂದು ಮಾಜಿ ಶಾಸಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.

ಸಮೀಪದ ಸೂಳೇಬಾವಿಯಲ್ಲಿ ಧಾರವಾಡದ ರಂಗಾಯಣ ಸಂಸ್ಥೆ, ಮನುಜಮತ ಫೌಂಡೇಶನ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಹುನಗುಂದ ಘಟಕಗಳ ಸಹಯೋಗದಲ್ಲಿ ಡಾ.ಚಂದ್ರಶೇಖರ ಕಂಬಾರ ವಿರಚಿತ ಮಲ್ಲಿಕಾರ್ಜುನ ಸಜ್ಜನ ನಿರ್ದೇಶನದ ಜೋಕುಮಾರಸ್ವಾಮಿ ನಾಟಕ ಪ್ರದರ್ಶನವನ್ನು ತಬಲಾವಾದ್ಯ ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಸಂವೇದನೆಗಳಿಗೆ ಸ್ಪಂದಿಸುವ ನಾಟಕಗಳು ಮಾತ್ರ ಎಲ್ಲರ ಮನಸ್ಸನ್ನು ಸೆಳೆಯುತ್ತವೆ. ನಾಟಕಗಳಿಂದ ಸಾಮಾಜಿಕ ಸಂದೇಶ ಮತ್ತು ಮೌಲ್ಯ ಬಿತ್ತುವ ಕೆಲಸವಾಗಬೇಕು. ನಶಿಸುತ್ತಿರುವ ನಾಟಕ ಕಲೆಯನ್ನು ಎಲ್ಲರೂ ಉಳಿಸಿ ಬೆಳೆಸೋಣ ಎಂದರು.

ಮುಖ್ಯಅತಿಥಿಯಾಗಿ ಮಾತನಾಡಿದ ಗ್ರಾಮೀಣ ವಿಕಾಸ ಸಹಕಾರಿ ಸಂಘದ ಅಧ್ಯಕ್ಷ ಶರೀಫ್ ನದಾಫ್, ವಾಟ್ಸಪ್, ಫೇಸ್‌ಬುಕ್‌ ಅಂಥಹ ಈ ಕಾಲದಲ್ಲಿಯೂ ಯುವಕರು ನಾಟಕಗಳತ್ತ ಮುಖಮಾಡಿರುವುದು. ಅದಕ್ಕಾಗಿ ಪ್ರೇಕ್ಷಕರು ಬರುವುದು, ಯುವ ಕಲಾವಿದರು ಬರುತ್ತಿರುವುದು ಸಂತೋಷದ ಸಂಗತಿಯಾಗಿದೆ ಇದು ಸ್ವಾಗತಾರ್ಹ ಎಂದರು. ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೋಡ ಮಾತನಾಡಿ, ಡಾ.ಚಂದ್ರಶೇಖರ ಕಂಬಾರರ ನಾಟಕಗಳು ದಿನನಿತ್ಯದ ಬದುಕಿಗೆ ಹತ್ತಿರವಾಗಿವೆ. ಇಂಥಹ ನಾಟಕಗಳು ಜಗತ್ತಿಗೆ ಉತ್ತಮ ಸಂದೇಶ ನೀಡುತ್ತವೆ. ಗ್ರಾಮೀಣ ಪ್ರದೇಶದಲ್ಲಿ ಈ ನಾಟಕವನ್ನು ತಂದು ಯುವಕಲಾವಿದರನ್ನು ತೊಡಗಿಸಿ ಪ್ರದರ್ಶಿಸಬೇಕೆನ್ನುವ ರಂಗ ಸಂಘಟಕ, ನಿರ್ದೇಶಕ ಮಲ್ಲಿಕಾರ್ಜುನ ಸಜ್ಜನ ಅವರ ಶ್ರಮ ಸಾರ್ಥಕವಾಗಿವೆ ಎಂದರು.

ಹಿರಿಯ ಸಾಹಿತಿ ಸಿದ್ದಲಿಂಗಪ್ಪ ಬೀಳಗಿ, ಸಾಹಿತಿ ಯೋಗೀಶ ಲಮಾಣಿ, ಫೌಂಡೇಷನ್ ಅಧ್ಯಕ್ಷ ಪಾಂಡುರಂಗ ಮಾಶ್ಯಾಳ, ಅಮೀನಗಡ ಸಿರಿಗನ್ನಡ ಪ್ರತಿಷ್ಠಾನದ ಅಧ್ಯಕ್ಷ ಅಶೋಕ ಚಿಕ್ಕಗಡೆ, ನಾಗೇಶ ಗಂಜೀಹಾಳ, ನಾಗೇಂದ್ರ ನಿರಂಜನ, ಗಾಯಕ ಮಾನು ಹೊಸಮನಿ, ಲಕ್ಷಣ ಕತ್ತಿ, ತಬಲಾ ವಾದಕ ಪಂಚಾಕ್ಷರಿ, ಹಿರಿಯರಾದ ರಾಮದುರ್ಗ, ಬಸವರಾಜ ಖೋತ್, ರಂಗ ಸಂಘಟಕ ಮಹಾಂತೇಶ ಗಜೇಂದ್ರಗಡ, ಕಲಾವಿದೆ ಸುನಂದಾ ಹೊಸಪೇಟೆ ಇತರರಿದ್ದರು. ಇದೇ ವೇಳೆ ರಂಗ ನಿರ್ದೇಶಕ ಮಲ್ಲಿಕಾರ್ಜುನ ಸಜ್ಜನ ರವರನ್ನು ಸನ್ಮಾನಿಸಲಾಯಿತು. ನಾರಾಯಣ ಹುಣಶ್ಯಾಳ ಸ್ವಾಗತಿಸಿ,ನಿರೂಪಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ